ಟಾಟಾ ಒಡೆತನದ ಮತ್ತೊಂದು ಎಲೆಕ್ಟ್ರಿಕ್ ಕಾರು; ಜಾಗ್ವಾರ್ i ಪೇಸ್ ಭಾರತಕ್ಕೆ ಆಗಮನ!
ಟಾಟಾ ಒಡೆತನ ಜಾಗ್ವಾರ್ ಇದೀಗ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡಲು ರೆಡಿಯಾಗಿದೆ. ಮೊದಲ ಜಾಗ್ವಾರ್ ಐ ಪೇಸ್ ಎಲೆಕ್ಟ್ರಿಕ್ ಕಾರು ಭಾರತಕ್ಕೆ ಆಗಮಿಸಿದೆ. ನೂತನ ಕಾರಿನ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.

ಬ್ಯಾಟರಿ ವಿದ್ಯುತ್ ವಾಹನಗಳ ಕ್ಷೇತ್ರಕ್ಕೆ ಜಗುವಾರ್ ಲ್ಯಾಂಡ್ ರೋವರ್ ಪ್ರವೇಶಿಸಿದೆ. ಜಾಗ್ವಾರ್ ಐ-ಪೇಸ್, ಈಗ ಭಾರತದಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ.

ಸರ್ವ ವಿದ್ಯುತ್ ಕಾರ್ಯಕ್ಷಮತೆಯ SUV ಮೊದಲ ಯೂನಿಟ್, ಮುಂಬೈ ಸಮೀಪದ ಜೆ ಎನ್ ಪಿ ಟಿ ಯಲ್ಲಿ ಬಂದಿಳಿದಿದ್ದು, ದೇಶದಲ್ಲಿಒ ವ್ಯಾಪಾಕ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಒಳಗಾಗಲಿದೆ.

ಭಾರತದಲ್ಲಿ ಜಗುವಾರ್ ಐ-ಪೇಸ್‍ನ ಮೊದಲ ಚಿತ್ರಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಹರ್ಷವಾಗಿದೆ. ಭಾರತದಲ್ಲಿ ಜಗುವಾರ್ ಲ್ಯಾಂಡ್ ರೋವರ್ ಗಮನಾರ್ಹ ಮೈಲಿಗಲ್ಲನ್ನು ಐ-ಪೇಸ್ ಪ್ರತಿನಿಧಿಸುತ್ತದೆ ಜಗುವಾರ್ ಲ್ಯಾಂಡ್ ರೋವರ್ ಇಂಡಿಯಾದ ಅಧ್ಯಕ್ಷ ಹಾಗೂ ನಿರ್ವಾಜಕ ನಿರ್ದೇಶಕ ರೋಹಿತ್ ಸೂರಿ ಹೇಳಿದರು.

ಎಲೆಕ್ಟ್ರಿಕ್ ಕಾರು ಭವಿಷ್ಯಕ್ಕೆ ಸಜ್ಜಾಗುತ್ತಿದ್ದೇವೆ. ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಜಾಗ್ವಾರ್ ಐ ಪೇಸ್ ಭಾರತದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ರೋಹಿತ್ ಸೋರಿ ಹೇಳಿದರು.

ಭಾರತದಲ್ಲಿ ಪ್ರಥಮ ಜಗುವಾರ್ ಐ-ಪೇಸ್ ಕಂಗೊಳಿಸುವ ಕೆಂಪು ಹೊಳಪಿಂದ ಕೂಡಿದ್ದು ಹೆಚ್ ಎಸ್ ಎ ಪ್ರಬೇಧದ ಉಚ್ಛ ವರ್ಗದ್ದಾಗಿದೆ. 90 KWh ಲಿಥಿಯಂ ಐಯಾನ್ ಬ್ಯಾಟರಿ ಅಳವಡಿಸಲಾಗಿದೆ.

ಐ-ಪೇಸ್ 294 KW ಮತ್ತು 696 Nm ಟಾರ್ಕ್ ಉತ್ಪಾದಿಸುತ್ತದೆ. ಇದರಿಂದಾಗಿ ಕೇವಲ 4.8 ಸೆಕೆಂಡ್‍ಗಳಲ್ಲಿ ಗಂಟೆಗೆ 0-100 ಕಿ.ಮೀ. ವೇಗ ಸಾಧಿಸಬಲ್ಲದು.

ಮೊದಲ ಐ-ಪೇಸ್ ಬಿಡುಗಡೆಯಾದಾಗಿನಿಂದ, ಅದು ಹಲವಾರು ಹೆಗ್ಗಳಿಕೆಗಳನ್ನು ಮತ್ತು 80 ಕ್ಕೂ ಹೆಚ್ಚು ಜಾಗತಿಕ ಪ್ರಶಸ್ತಿಗಳನ್ನು ಗೆದ್ದಿದೆ. ಇವುಗಳ ಪೈಕಿ ವರ್ಷದ ವಿಶ್ವ ಕಾರ್, ವರ್ಷದ ವಿಶ್ವ ಕಾರ್ ವಿನ್ಯಾಸ, ವಿಶ್ವದ ಹಸಿರು ಕಾರ್ ಪ್ರಶಸ್ತಿಗಳನ್ನು 2019 ರಲ್ಲಿ ಗಳಿಸಿದೆ.

ಪ್ರಶಸ್ತಿಗಳ 15 ವರ್ಷದ ಇತಿಹಾಸದಲ್ಲಿ ಒಂದೇ ಬಾರಿಗೆ ಎಲ್ಲಾ ಮೂರು ವಿಶ್ವ ಪ್ರಶಸ್ತಿಗಳನ್ನು ಗಳಿಸಿದ ಪ್ರಪ್ರಥಮ ವಾಹನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಅತ್ಯುತ್ತಮ ವಿದ್ಯುತ್ ಚಾಲಿತ ಐಷಾರಾಮಿ ಎಸ್ ಯು ವಿ ಸ್ಥಾನವನ್ನು ಬಲಪಡಿಸಿದೆ.