ಎಲೆಕ್ಟ್ರಿಕ್ ವಾಹನ ಕ್ರಾಂತಿ, 3.47 ಲಕ್ಷ ರೂಪಾಯಿಗೆ 800 ಕಿ.ಮೈ ಮೈಲೇಜ್ ಶಿಯೋಮಾ ಕಾರು ಲಾಂಚ್!
ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಹೊಸ ಕ್ರಾಂತಿಯಾಗಿದೆ. ಕೇವಲ 3.47 ಲಕ್ಷ ರೂಪಾಯಿಗೆ ಹೊಚ್ಚ ಹೊಸ ಶಿಯೋಮಾ ಎಲೆಕ್ಟ್ರಿಕ್ ಕಾರು ಬಿಡುಗಡೆಯಾಗಿದೆ. ಇದರ ಮೈಲೇಜ್800 ಕಿ.ಮೀ.
ಎಲೆಕ್ಟ್ರಿಕ್ ವಾಹನ ಕ್ಷೇತ್ರದಲ್ಲಿ ಪ್ರತಿ ದಿನ ಆವಿಷ್ಕಾರ ನಡೆಯುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಮಾಡಲಾಗುತ್ತಿದೆ. ಇದರ ಪರಿಣಾಮ ಗರಿಷ್ಠ ಮೈಲೇಜ್ ಹಾಗೂ ಸುಲಭ ಚಾರ್ಜಿಂಗ್ ಲಭ್ಯವಾಗುತ್ತಿದೆ.
ಇದೀಗ ಇವಿ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾದಿದೆ. ಇದೀಗ FAW(ಫಸ್ಟ್ ಆಟೋ ವರ್ಕ್ಸ್) ಕಂಪನಿ ಹೊಚ್ಚ ಹೊಸ ಶಿಯೋಮಾ ಸಣ್ಣ ಕಾರು ಬಿಡುಗಡೆಮಾಡಿದೆ. ಇದು ಎಲೆಕ್ಟ್ರಿಕ್ ಕಾರು.
ಚೀನಾದ ಈ ಕಂಪನಿ ಈ ಹೊಸ ಕಾರು ಬಿಡುಗಡೆ ಮಾಡಿದೆ. ಇದರ ಬೆಲೆ 30,000 ದಿಂದ 50,000 ರೂಪಾಯಿ ಯುವನ್. ಭಾರತೀಯ ರೂಪಾಯಿಗಳಲ್ಲಿ 3.47 ಲಕ್ಷ ರೂಪಾಯಿಯಿಂದ 5.78 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಎಂಜಿ ಮೋಟಾರ್ಸ್ ಕಂಪನಿ ಇತ್ತೀಚೆಗೆ ಕೊಮೆಟ್ ಕಾರು ಬಿಡುಗಡೆ ಮಾಡಿದೆ. ಕೊಮೆಟ್ ಬೆಲೆ ಸರಿಸುಮಾರು 10 ಲಕ್ಷ ರೂಪಾಯಿ. ಇದಕ್ಕೆ ಪ್ರತಿಸ್ಪರ್ಧಿಯಾಗಿ FAWಶಿಯೋಮಾ ಕಾರು ಬಿಡುಗಡೆ ಮಾಡಿ ಇದೀಗ ಯಶಸ್ವಿಯಾಗಿದೆ.
ಶಿಯೋಮಾ ಎಲೆಕ್ಟ್ರಿಕ್ ಕಾರು ಒಂದು ಬಾರಿ ಚಾರ್ಜ್ ಮಾಡಿದರೆ 800 ಕಿ.ಮೀ ಮೈಲೇಜ್ ನೀಡಲಿದೆ ಎಂದು FAW ಕಂಪನಿ ಹೇಳಿಕೊಂಡಿದೆ. ಇದು ಅತ್ಯಂತ ಗರಿಷ್ಠ ಮೈಲೇಜ್ ರೇಂಜ್ ಆಗಿದೆ.
ಲಿಥಿಯಂ ಐಯಾನ್ ಪ್ರಾಸ್ಪೇಟ್ ಬ್ಯಾಟರಿ ಬಳಕೆ ಮಾಡಲಾಗಿದೆ. 20 kW ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದೆ. 3 ಡೋರ್ ವಾಹನ ಇದಾಗಿದ್ದು, 2700-2850 ಎಂಎಂ ವೀಲ್‌ಬೇಸ್ ಹೊಂದಿದೆ.
ಸುಲಭ ಚಾರ್ಜಿಂಗ್ ಹೊಂದಿರುವ ಈ ಕಾರು ನಗರ ಪ್ರದೇಶಗಳಲ್ಲಿ ಚಾಲನೆ ಕೂಡ ಸುಲಭ. ಪಾರ್ಕಿಂಗ್ ಮತ್ತಷ್ಟು ಸುಲಭವಾಗಿದೆ. ಇದೀಗ ಚೀನಾದ ಈ ಕಾರಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ. ಶೀಘ್ರದಲ್ಲೇ ಭಾರತದಲ್ಲಿ ಈ ಕಾರು ಬಿಡುಗಡೆಯಾಗುವ ಸಾಧ್ಯತೆ ಇದೆ.