ಕೇವಲ 300 ರೂ.ಗೆ ಈ ಕಾರ್ ಆಕ್ಸೆಸರಿಗಳು!
Car Accessories ನಿಮ್ಮ ಕಾರಿನಲ್ಲಿ ಈ ಆಕ್ಸೆಸರಿಗಳು ಖಂಡಿತ ಇರಲೇಬೇಕು. ಇವುಗಳನ್ನು ಕೊಂಡುಕೊಳ್ಳಲು ಕೇವಲ 300 ರೂಪಾಯಿ ಸಾಕು. ನಿಮ್ಮ ಪ್ರಯಾಣವನ್ನು ಇನ್ನಷ್ಟು ಆರಾಮದಾಯಕವಾಗಿಸುವ ಈ ವಸ್ತುಗಳ ಬಗ್ಗೆ ಇಲ್ಲಿದೆ ಮಾಹಿತಿ.
16

Image Credit : our own
ಟಯರ್ ಪ್ರೆಶರ್ ಗೇಜ್
ಟೈರ್‌ನಲ್ಲಿ ಪ್ರೆಶರ್ ಕಡಿಮೆ ಅಥವಾ ಹೆಚ್ಚಾಗಿದ್ದರೆ, ಅದು ಮೈಲೇಜ್ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಹೆಚ್ಚಿನ ಕಾರ್ ಮಾಲೀಕರು ತಮ್ಮ ವಾಹನದಲ್ಲಿ ಟೈರ್ ಪ್ರೆಶರ್ ಗೇಜ್ ಇಟ್ಟುಕೊಂಡಿರುತ್ತಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
26
Image Credit : our own
ಏರ್ ಫ್ರೆಶ್‌ನರ್
ಬಹುತೇಕ ಎಲ್ಲಾ ಕಾರುಗಳಲ್ಲಿ ಇದನ್ನು ನೀವು ನೋಡಬಹುದು. 300 ರೂಪಾಯಿ ಒಳಗಿನ ಬೆಲೆಯ ಹಲವು ಬಗೆಯ ಏರ್ ಫ್ರೆಶ್‌ನರ್‌ಗಳು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿವೆ.
36
Image Credit : our own
ಫೋಲ್ಡಬಲ್ ಕಪ್ ಹೋಲ್ಡರ್
ಕೆಲವು ಕಾರುಗಳಲ್ಲಿ ಕಪ್ ಹೋಲ್ಡರ್‌ಗಳು ಇರುವುದಿಲ್ಲ. ಅಂತಹ ವಾಹನಗಳಲ್ಲಿ ನೀವು ಫೋಲ್ಡಬಲ್ ಕಪ್ ಹೋಲ್ಡರ್‌ಗಳನ್ನು ಸುಲಭವಾಗಿ ಅಳವಡಿಸಿಕೊಳ್ಳಬಹುದು.
46
Image Credit : Google
ನಾನ್-ಸ್ಲಿಪ್ ಮ್ಯಾಟ್
ಡ್ಯಾಶ್‌ಬೋರ್ಡ್ ಮೇಲೆ ಇಟ್ಟಿರುವ ಫೋನ್, ಕಾಯಿನ್ಸ್ ಅಥವಾ ಇತರೆ ವಸ್ತುಗಳು ಜಾರಿ ಕೆಳಗೆ ಬೀಳದಿರಲು ಈ ಮ್ಯಾಟ್ ಸಹಾಯ ಮಾಡುತ್ತದೆ. ಇದನ್ನು ಹಲವರು ಬಳಸುತ್ತಾರೆ.
56
Image Credit : Google
ನೆಕ್ ಕುಶನ್
ಹೊಸ ಕಾರುಗಳ ಸೀಟ್ ವಿನ್ಯಾಸ ಗಾಯಗಳನ್ನು ತಡೆಯುವಂತಿದ್ದರೂ, ದೂರದ ಪ್ರಯಾಣದ ವೇಳೆ ಹಲವರು ಆರಾಮಕ್ಕಾಗಿ ನೆಕ್ ಕುಶನ್ ಬಳಸುತ್ತಾರೆ. ಇದು ಕುತ್ತಿಗೆ ನೋವನ್ನು ಕಡಿಮೆ ಮಾಡುತ್ತದೆ.
66
Image Credit : Google
ಕಾರ್ ಕ್ಲೀನಿಂಗ್ ಕ್ಲಾತ್
ಸಣ್ಣ ಧೂಳಿನ ಕಣಗಳು ಕೂಡ ಕಾರಿನ ಪೇಂಟ್‌ಗೆ ಹಾನಿ ಮಾಡುತ್ತವೆ. ಹೀಗಾಗಿ, ಮೃದುವಾದ ಮೈಕ್ರೋಫೈಬರ್ ಕಾರ್ ಕ್ಲೀನಿಂಗ್ ಬಟ್ಟೆಯನ್ನೇ ಬಳಸುವುದು ಉತ್ತಮ. ಇದು ಮಾರುಕಟ್ಟೆಯಲ್ಲಿ ಸಿಗುತ್ತದೆ.
Latest Videos