ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿದ ಜೊಮೆಟೋ
ಬೆಂಗಳೂರು (ಜೂ.11): ಬೆಂಗಳೂರಿನ ವೆಗಾ ಸಿಟಿ ಮಾಲ್ ಹೊಸ ಜೊಮೆಟೋ ವಿಶ್ರಾಂತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದು ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರ ಎಂದು ಹೇಳಲಾಗಿದ್ದು, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya) ಅವರು ಉದ್ಘಾಟನೆ ಮಾಡಿದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸಂಸದ ಸೂರ್ಯ ಅವರು ಜೊಮೆಟೋ ಮತ್ತು ವೆಗಾ ಸಿಟಿ ಮಾಲ್ ಸಹಯೋಗದೊಂದಿಗೆ ವೇಗಾ ಸಿಟಿ ಮಾಲ್‌ನಲ್ಲಿ ಡೆಲಿವರಿ ಪಾಲುದಾರರಿಗಾಗಿ ದಕ್ಷಿಣ ಭಾರತದ ಮೊದಲ ವಿಶ್ರಾಂತಿ ಕೇಂದ್ರವನ್ನು ತೆರೆಯಲಾಗಿದ್ದು. ಪ್ರಥಮ ಚಿಕಿತ್ಸೆ, ಕುಡಿಯುವ ನೀರು ಮತ್ತು ಸ್ವಚ್ಛವಾದ ವಿಶ್ರಾಂತಿ ಕೊಠಡಿ, ಚಾರ್ಜಿಂಗ್ ಪಾಯಿಂಟ್ ಗಳಂತಹ ಅಗತ್ಯ ಸೌಕರ್ಯಗಳನ್ನು ಒಳಗೊಂಡಿದೆ. ಎಲ್ಲಾ ವಿತರಣಾ ಪಾಲುದಾರರಿಗೆ ವಿಶ್ರಾಂತಿ, ಹೊಸ ಉತ್ಸಾಹಕ್ಕೆ ಉತ್ತಮ ಸ್ಥಳವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ ಜೊಮೆಟೋ ಮಾತ್ರವಲ್ಲದೆ ಇತರ ಬ್ರ್ಯಾಂಡ್‌ಗಳ ಡೆಲಿವರಿ ಬಾಯ್ಸ್ ಸಹ ಇಂತಹ ವಿಶ್ರಾಂತಿ ಕೇಂದ್ರಗಳನ್ನು ಪ್ರವೇಶಿಸಬಹುದು ಎಂದು ಘೋಷಿಸಿತ್ತು. ಈ ವರ್ಷದ ಫೆಬ್ರವರಿಯಲ್ಲಿ, ಜೊಮೆಟೋ ಸಿಇಒ ಡಿಪಿಂದರ್ ಗೋಯಲ್ ಬರೆದಿದ್ದಾರೆ, 'ದಿ ಶೆಲ್ಟರ್ ಪ್ರಾಜೆಕ್ಟ್' ಅನ್ನು ಘೋಷಿಸುತ್ತಿದ್ದೇವೆ – ನಾವು ವಿವಿಧ ಕಂಪನಿಗಳ ವಿತರಣಾ ಪಾಲುದಾರರ ಯೋಗಕ್ಷೇಮವನ್ನು ಬೆಂಬಲಿಸಲು ಸಾರ್ವಜನಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದೇವೆ ಎಂದು ಹೇಳಿದ್ದರು.
ಹೈ-ಸ್ಪೀಡ್ ಇಂಟರ್ನೆಟ್, ಪ್ರಥಮ ಚಿಕಿತ್ಸೆ, ಫೋನ್ ಚಾರ್ಜಿಂಗ್ ಸೌಲಭ್ಯ, ವಾಶ್‌ರೂಮ್‌ಗಳು ಮತ್ತು ಕುಡಿಯುವ ನೀರು ಇತರ ಕಂಪನಿಗಳ ಡೆಲಿವರಿ ಏಜೆಂಟ್‌ಗಳಿಗೂ ಈ ಸೌಕರ್ಯಗಳು ವಿಶ್ರಾಂತಿ ಕೇಂದ್ರದಲ್ಲಿ ಮುಕ್ತವಾಗಿರುತ್ತದೆ ಎಂದು ಜೊಮಾಟೊ ಮೊದಲೇ ಘೋಷಿಸಿತ್ತು. .
ಬೆಂಗಳೂರಿನ ಎಲ್ಲಾ Zomato ಡೆಲಿವರಿ ಪಾಲುದಾರರಿಗೆ ವಿಶ್ರಾಂತಿ ಕೇಂದ್ರವು ತೆರೆದಿರುತ್ತದೆ. ಇದು ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ ತೆರೆದಿರುತ್ತದೆ. ದಕ್ಷಿಣ ಭಾರತದ ಇತರ ನಗರಗಳಲ್ಲಿ ಹೆಚ್ಚಿನ ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯನ್ನು Zomato ಹೊಂದಿದೆ. ಜೊಮಾಟೊದ ಪ್ರಧಾನ ಕಛೇರಿ ಇರುವ ಗುರ್‌ಗಾಂವ್‌ನಲ್ಲಿ ಕೆಲವು ವಿಶ್ರಾಂತಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.