ಮತ್ತಷ್ಟು ಏರಿಕೆಯಾಗುವ ಮುನ್ನವೇ ಖರೀದಿಸಿ ಚಿನ್ನ-ಬೆಳ್ಳಿ; 1 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಅಂತ ನೋಡಿ
ಚಿನ್ನ ಮತ್ತು ಬೆಳ್ಳಿ ಬೆಲೆಗಳು ಏರಿಳಿತವನ್ನು ಕಾಣುತ್ತಿವೆ. ಮದುವೆ ಸೀಸನ್ ಹತ್ತಿರವಾಗುತ್ತಿದ್ದಂತೆ ಚಿನ್ನ-ಬೆಳ್ಳಿ ಖರೀದಿ ಹೆಚ್ಚಾಗುತ್ತಿದೆ. ಇಂದಿನ 22 ಮತ್ತು 24 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ದರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

ಚಿನ್ನ ಮತ್ತು ಬೆಳ್ಳಿ ಕೇವಲ ಆಭರಣ ಆಗಿ ಉಳಿದಿಲ್ಲ. ಬೆಲೆಗಳು ಏರಿಕೆಯಾಗುತ್ತಿರುವ ಕಾರಣ ಜನರು ಸಹ ಚಿನ್ನ ಮತ್ತು ಬೆಳ್ಳಿ ಮೇಲೆ ಹೆಚ್ಚಾಗಿ ಹೂಡಿಕೆ ಮಾಡುತ್ತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಮದುವೆ ಮುಹೂರ್ತಗಳು ಸಮೀಪಿಸುತ್ತಿದ್ದು, ಚಿನ್ನ-ಬೆಳ್ಳಿ ಖರೀದಿ ಹೆಚ್ಚಳವಾಗಲಿದೆ.
ಚಿನ್ನದ ಬೆಲೆಗಳು ಕಡಿಮೆಯಾದಾಗ ಮತ್ತು ಸ್ಥಿರವಾಗಿದ್ದಾಗ ಖರೀದಿಸೋದು ಉತ್ತಮ. ಚಿನ್ನ ಖರೀದಿಗೆ ಬಜೆಟ್ ಇಟ್ಕೊಂಡಿದ್ರೆ ಪ್ರತಿನಿತ್ಯ ಮಾರುಕಟ್ಟೆಯಲ್ಲಿನ ಏರಿಳಿತಗಳನ್ನು ಗಮನಿಸುತ್ತಿರಬೇಕು. ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳು ಎಷ್ಟಿವೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ ಬನ್ನಿ.
ಭಾರತದಲ್ಲಿ ಇಂದಿನ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,391 ರೂಪಾಯಿ
8 ಗ್ರಾಂ: 59,128 ರೂಪಾಯಿ
10 ಗ್ರಾ : 73,910 ರೂಪಾಯಿ
100 ಗ್ರಾಂ: 7,39,100 ರೂಪಾಯಿ
ಭಾರತದಲ್ಲಿ ಇಂದಿನ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,063 ರೂಪಾಯಿ
8 ಗ್ರಾಂ: 64,504 ರೂಪಾಯಿ
10 ಗ್ರಾ : 80,630 ರೂಪಾಯಿ
100 ಗ್ರಾಂ: 8,06,300 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ಇಂದು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಗಳು ಹೀಗಿವೆ. ಚೆನ್ನೈ: 73,910 ರೂಪಾಯಿ, ಮುಂಬೈ: 73,910 ರೂಪಾಯಿ, ದೆಹಲಿ: 74,060 ರೂಪಾಯಿ, ಕೋಲ್ಕತ್ತಾ: 73,910 ರೂಪಾಯಿ, ಬೆಂಗಳೂರು: 73,910 ರೂಪಾಯಿ, ಹೈದರಾಬಾದ್: 73,910 ರೂಪಾಯಿ
Gold rate
ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ.
10 ಗ್ರಾಂ: 956 ರೂಪಾಯಿ
100 ಗ್ರಾಂ: 9,560 ರೂಪಾಯಿ
1000 ಗ್ರಾಂ: 95,600 ರೂಪಾಯಿ
ಒಮ್ಮೆ ಚಿನ್ನ ನೀವು ಖರೀದಿಸಿದ್ದೀರಿ ಎಂದಾದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ. ಅನೇಕರು ಮದುವೆ ಮುಂಜಿಗಳಿಗೆ ಮಾತ್ರವಲ್ಲದೇ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣಕ್ಕೂ ಚಿನ್ನ ಖರೀದಿಸುತ್ತಾರೆ. ಆಭರಣದ ಬದಲು ಚಿನ್ನದ ಬಿಸ್ಕೆಟ್, ಚಿನ್ನದ ಬಾಂಡ್ ಖರೀದಿಸಿದರೆ ಅದು ಒಂದು ರೀತಿಯ ಹೂಡಿಕೆಯಂತೆಯೇ ಇದೂ ಎಂದಿಗೂ ಸೆಕೆಂಡ್ ಹ್ಯಾಂಡ್ ಆಗುವುದಿಲ್ಲ