ಚಿನ್ನದ ದರದಲ್ಲಿ ಇಂದೂ ಭರ್ಜರಿ ಇಳಿಕೆ: ಹೇಗಿದೆ ನೋಡಿ ನಿಮ್ಮ ನಗರದಲ್ಲಿ ಇಂದು ಬಂಗಾರದ ದರ
ಭಾರತ ಪಾಕಿಸ್ತಾನ ನಡುವಣ ಕದನ ವಿರಾಮದ ಹಿನ್ನೆಲೆ ಸೋಮವಾರ 2975 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1282 ಅಂಕಗಳ ಭಾರೀ ಕುಸಿತ ಕಂಡಿತ್ತು. ಹೀಗಾಗಿ ಚಿನ್ನದ ದರದಲ್ಲಿಯೂ ಇಳಿಕೆ ಕಂಡಿತ್ತು. ಹೀಗಿರುವಾಗ ಭಾರತದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಹೇಗಿದೆ ಅಂತ ನೋಡೋಣ ಬನ್ನಿ.

ಭಾರತ ಪಾಕಿಸ್ತಾನ ನಡುವಣ ಕದನ ವಿರಾಮದ ಹಿನ್ನೆಲೆ ಸೋಮವಾರ 2975 ಅಂಕಗಳ ಭಾರೀ ಏರಿಕೆ ಕಂಡಿದ್ದ ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 1282 ಅಂಕಗಳ ಭಾರೀ ಕುಸಿತ ಕಂಡಿತ್ತು. ಹೀಗಾಗಿ ಚಿನ್ನದ ದರದಲ್ಲಿಯೂ ಇಳಿಕೆ ಕಂಡಿತ್ತು. ಹೀಗಿರುವಾಗ ಭಾರತದ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಹೇಗಿದೆ ಅಂತ ನೋಡೋಣ ಬನ್ನಿ.
ನಿರಂತರವಾಗಿ ಚಿನ್ನದ ದರ ಏರಿಕೆಯ ಆಗುತ್ತಲೇ ಇರುವುದರಿಂದ ಜನಸಾಮಾನ್ಯರು ಹೈರಾಣಾಗಿದ್ದಾರೆ. ಮದುವೆ ಮುಂಜಿ ಮುಂತಾದ ಶುಭಕಾರ್ಯಗಳನ್ನು ಹತ್ತಿರದಲ್ಲೇ ಇಟ್ಟುಕೊಂಡಿರುವವರು ಏರುತ್ತಿರುವ ಚಿನ್ನದ ದರ ನೋಡಿ ಆಘಾತಕ್ಕೊಳಗಾಗುತ್ತಿದ್ದಾರೆ. ಆದರೂ ಇಂದು ತುಸು ನಿರಾಳ ಎಂಬಂತೆ ಚಿನ್ನದ ದರದಲ್ಲಿ ತುಸು ಇಳಿಕೆ ಕಂಡು ಬಂದಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,606 ರೂಪಾಯಿ
8 ಗ್ರಾಂ: 76,848 ರೂಪಾಯಿ
10 ಗ್ರಾಂ: 96,060 ರೂಪಾಯಿ
100 ಗ್ರಾಂ: 9,60,600 ರೂಪಾಯಿ
Gold
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,204 ರೂಪಾಯಿ
8 ಗ್ರಾಂ: 57,632 ರೂಪಾಯಿ
10 ಗ್ರಾಂ: 72, 040 ರೂಪಾಯಿ
100 ಗ್ರಾಂ: 7,20,400 ರೂಪಾಯಿ
Gold Rate Today
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 88,050 ರೂಪಾಯಿ, ಮುಂಬೈ: 88,050 ರೂಪಾಯಿ, ದೆಹಲಿ: 88,200 ರೂಪಾಯಿ, ಕೋಲ್ಕತ್ತಾ: 88,050 ರೂಪಾಯಿ, ಬೆಂಗಳೂರು: 88,050 ರೂಪಾಯಿ, ಹೈದರಾಬಾದ್: 88,050 ರೂಪಾಯಿ, ವಡೋದರಾ: 88,010 ರೂಪಾಯಿ, ಅಹಮದಾಬಾದ್: 88,010 ರೂಪಾಯಿ, ಪುಣೆ: 88,050 ರೂಪಾಯಿ, ಕೇರಳ: 88,050 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ನಿನ್ನೆಗೆ ಹೋಲಿಸಿದರೆ ಬೆಳ್ಳಿಯ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ನಿನ್ನೆಯ ದರವೇ ಇದೆ. ಇಂದಿನ ಬೆಳ್ಳಿ ದರ ಈ ಕೆಳಗಿನಂತಿದೆ.
10 ಗ್ರಾಂ: 979 ರೂಪಾಯಿ (1 ರೂ. ಏರಿಕೆ)
100 ಗ್ರಾಂ: 9,790 ರೂಪಾಯಿ (10 ರೂ. ಏರಿಕೆ)
1000 ಗ್ರಾಂ: 97,900 ರೂಪಾಯಿ (100 ರೂ. ಏರಿಕೆ)
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

