ಚಿನ್ನದ ಬೆಲೆಯಲ್ಲಿ ಇಳಿಕೆ: ಖರೀದಿಗೆ ಸುವರ್ಣಾವಕಾಶ, ವೀಕೆಂಡ್ ಶಾಪಿಂಗ್‌ನಲ್ಲಿ ಮಿಸ್ ಮಾಡದೇ ತನ್ನಿ ಬಂಗಾರ
ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, ಖರೀದಿದಾರರಿಗೆ ಉತ್ತಮ ಅವಕಾಶವಾಗಿದೆ. ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಗಳನ್ನು ತಿಳಿಯಿರಿ.
ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯೊಂದು ಬಂದಿದೆ. ಕಳೆದ ನಾಲ್ಕೈದು ದಿನಗಳಿಂದ ಏರಿಕೆಯಲ್ಲಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ಬೆಲೆ ಎಷ್ಟಿದೆ ಎಂಬುದನ್ನು ತಿಳಿದುಕೊಂಡರೆ ಚಿನ್ನ ಖರೀದಿಗೆ ಸಹಾಯವಾಗಲಿದೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂಬುದನ್ನು ನೋಡೋಣ.
ಇಂದು ಚಿನ್ನ ಕೇವಲ ಆಭರಣವಾಗಿ ಉಳಿದಿಲ್ಲ. ಚಿನ್ನದ ಬೆಲೆ ಏರಿಕೆಯಾಗುತ್ತಿರೋದರಿಂದ ಜನರು ಹಣವನ್ನು ಬಂಗಾರದ ಮೇಲೆ ಹೂಡಿಕೆ ಮಾಡುತ್ತಾರೆ. ಹಾಗಾಗಿ ಚಿನ್ನಕ್ಕೆ ಸದಾ ಬೇಡಿಕೆ ಹೆಚ್ಚಿರುತ್ತದೆ. ಎರಡು ದಿನದಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 600 ರೂ.ಗಳಷ್ಟು ಇಳಿಕೆಯಾಗಿದೆ.
22 ಕ್ಯಾರಟ್ ಚಿನ್ನದ ಬೆಲೆ
ಭಾರತದಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ- 7,229 ರೂಪಾಯಿ
8 ಗ್ರಾಂ - 57,832 ರೂಪಾಯಿ
10 ಗ್ರಾಂ - 72,290 ರೂಪಾಯಿ
100 ಗ್ರಾಂ - 7.22,900 ರೂಪಾಯಿ
24 ಕ್ಯಾರಟ್ ಚಿನ್ನದ ಬೆಲೆ
ಭಾರತದಲ್ಲಿ 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ-7,886 ರೂಪಾಯಿ
8 ಗ್ರಾಂ-63,088 ರೂಪಾಯಿ
10 ಗ್ರಾಂ-78,860 ರೂಪಾಯಿ
100 ಗ್ರಾಂ-7,88,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಬೆಂಗಳೂರು-72,290 ರೂ., ಚೆನ್ನೈ-72,290 ರೂ., ಮುಂಬೈ-72,290 ರೂ., ದೆಹಲಿ-72,440 ರೂ., ಕೋಲ್ಕತ್ತಾ-72,290 ರೂ, ಹೈದರಾಬಾದ್-72,290 ರೂ. ಆಗಿದೆ.
ಬೆಳ್ಳಿ ಬೆಲೆ
ದೇಶದಲ್ಲಿ ಬೆಳ್ಳಿ ಬೆಲೆ
ಚಿನ್ನದ ಜೊತೆಯಲ್ಲಿ ಬೆಳ್ಳಿ ಬೆಲೆಯಲ್ಲಿಯೂ ಭಾರೀ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆಯಾಗಿದೆ. ಇಂದು ಬೆಳ್ಳಿ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ
10 ಗ್ರಾಂ- 934 ರೂಪಾಯಿ
100 ಗ್ರಾಂ- 9,340 ರೂಪಾಯಿ
1 ಕೆಜಿ- 93,400 ರೂಪಾಯಿ