ಚಿನ್ನ ಖರೀದಿಯ ಕನಸಿಗೆ ರೆಕ್ಕೆ; ಬೆಂಗಳೂರಿನಲ್ಲಿ 10 ಗ್ರಾಂ ಬಂಗಾರದ ಬೆಲೆ ಎಷ್ಟು?
Gold And Silver Price: ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇಂದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿ ಇಲ್ಲಿದೆ. ದೇಶದ ಪ್ರಮುಖ ನಗರಗಳಲ್ಲಿನ 22 ಮತ್ತು 24 ಕ್ಯಾರಟ್ ಚಿನ್ನದ ದರಗಳನ್ನು ತಿಳಿದುಕೊಳ್ಳಿ.

ಚಿನ್ನ ಖರೀದಿ ಮಾಡಬೇಕು ಅನ್ನೋದು ಮಧ್ಯಮ ವರ್ಗದ ಜನರ ಕನಸು. ಇದಕ್ಕಾಗಿ ಕಾಸಿಗೆ ಕಾಸು ಸೇರಿಸುತ್ತಿರುತ್ತಾರೆ. ಮಧ್ಯಮ ವರ್ಗದ ಜನತೆಗೆ ಚಿನ್ನ ಕೇವಲ ಆಭರಣ ಮಾತ್ರವಲ್ಲ. ಇದನ್ನು ಆಪತ್ಕಾಲದ ನೆಂಟ ಅಂತಾನೇ ಕರೆಯುತ್ತಾರೆ. ಹಣವಿದ್ದಾಗ ದುಂದುವೆಚ್ಚ ಮಾಡದೇ ಚಿನ್ನದ ಮೇಲೆ ಹೂಡಿಕೆ ಮಾಡೋದು ಜಾಣತನದ ನಡೆಯಾಗಿರುತ್ತದೆ.
ತಿಂಗಳ ಮೊದಲ ವಾರ ಬಹುತೇಕರಿಗೆ ಸಂಬಳವಾಗುವ ಸಮಯ. ದಿನನಿತ್ಯದ ಖರ್ಚುಗಳಿಗೆ ಹಣ ಮೀಸಲಿಟ್ಟು, ಉಳಿತಾಯದಲ್ಲಿ ಚಿನ್ನ ಖರೀದಿಸಿ. ಚಿನ್ನದ ಬೆಲೆ ಏರಿಕೆಯಾಗುತ್ತಿರೋದರಿಂದ ನಿಮ್ಮ ಹೂಡಿಕೆಗೆ ಕಡಿಮೆ ಸಮಯದಲ್ಲಿಯೇ ಉತ್ತಮ ಲಾಭ ಲಭ್ಯವಾಗುತ್ತದೆ. ದೇಶ ಮತ್ತು ಪ್ರಮಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,370 ರೂಪಾಯಿ
8 ಗ್ರಾಂ: 74,960 ರೂಪಾಯಿ
10 ಗ್ರಾಂ: 93,700 ರೂಪಾಯಿ
100 ಗ್ರಾಂ:9,37,000 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,222 ರೂಪಾಯಿ
8 ಗ್ರಾಂ: 81,776 ರೂಪಾಯಿ
10 ಗ್ರಾಂ: 1,02,220 ರೂಪಾಯಿ
100 ಗ್ರಾಂ: 10,22,200 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಬೆಲೆ ಹೀಗಿದೆ. ಚೆನ್ನೈ: 93,700 ರೂಪಾಯಿ, ಬೆಂಗಳೂರು: 93,700 ರೂಪಾಯಿ, ಮುಂಬೈ: 93,700 ರೂಪಾಯಿ, ದೆಹಲಿ: 93,850 ರೂಪಾಯಿ, ಹೈದರಾಬಾದ್: 93,700 ರೂಪಾಯಿ, ಅಹದಾಬಾದ್: 93,750 ರೂಪಾಯಿ, ವಡೋದರ: 93,750 ರೂಪಾಯಿ
ದೇಶದಲ್ಲಿಂದು ಬೆಳ್ಳಿ ದರ
ಚಿನ್ನದ ಜೊತೆ ಬೆಳ್ಳಿಗೂ ಭಾರತದಲ್ಲಿ ವಿಶೇಷ ಸ್ಥಾನಮಾನವಿದೆ. ಪೂಜಾ ಸಾಮಗ್ರಿಗಳಾಗಿ ಬೆಳ್ಳಿಯನ್ನು ಬಳಕೆ ಮಾಡಲಾಗುತ್ತದೆ. ಇಂದಿನ ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
10 ಗ್ರಾಂ: 1,150 ರೂಪಾಯಿ
100 ಗ್ರಾಂ: 11,500 ರೂಪಾಯಿ
1000 ಗ್ರಾಂ: 1,15,000 ರೂಪಾಯಿ