79 ರೂಪಾಯಿಯಿಂದ 68 ಸಾವಿರದವರೆಗೆ, ಸ್ವಾತಂತ್ರ್ಯದ ನಂತರ ದೇಶದಲ್ಲಿ 10 ಗ್ರಾಮ್ ಚಿನ್ನದ ಬೆಲೆ ಬದಲಾಗಿದ್ದೆಷ್ಟು?
ಇಂದು ಚಿನ್ನ ಕೇವಲ ಆಭರಣಕ್ಕಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಚಿನ್ನದ ಮೇಲಿನ ಸಾಲ, ಚಿನ್ನದ ಬಾಂಡ್‌ನೊಂದಿಗೆ ಚಿನ್ನ ಹೂಡಿಕೆಯ ಅಂಶವಾಗಿ ಬೆಳೆದಿದೆ.
2024ರಲ್ಲಿ ಮತ್ತೆ ಚಿನ್ನದ ದರ ಏರಲು ಆರಂಭವಾಗಿದೆ. 62ರ ಆಸುಪಾಸಿನಲ್ಲಿದ್ದ 10 ಗ್ರಾಮ್ ಚಿನ್ನದ ದರ, ಶುಕ್ರವಾರದ ವೇಳೆಗೆ 68 ಸಾವಿರದ ಗಡಿ ದಾಟಿದೆ
ಇನ್ನು ಕಳೆದ ವರ್ಷ ಚಿನ್ನದ ದರ ಈ ಪ್ರಮಾಣದಲ್ಲಿ ಇದ್ದರಲಿಲ್ಲ. ಕಳೆದ ವರ್ಷದ ಅಂತ್ಯದ ವೇಳೆ 10 ಗ್ರಾಮ್ ಚಿನ್ನದ ದರ 61,100 ರೂಪಾಯಿ ಆಗಿತ್ತು.
2022 ಅಂದರೆ, ಕೋವಿಡ್ ಕಾಲದಲ್ಲೂ ಚಿನ್ನ ಬೆಲೆ ಏರು ಗತಿಯಲ್ಲಿತ್ತು. 2022ರಲ್ಲಿ 10 ಗ್ರಾಮ್ ಚಿನ್ನಕ್ಕೆ 56,100 ರೂಪಾಯಿ ಬೆಲೆ ಇತ್ತು.
2020 ಅಂದರೆ, ಕೋವಿಡ್ ತನ್ನ ಪರಿಣಾಮವನ್ನು ಬೀರುವ ಸಮಯದಲ್ಲಿ ದೇಶದಲ್ಲಿ 10 ಗ್ರಾಮ್ ಚಿನ್ನದ ಬೆಲೆ 48, 651 ರೂಪಾಯಿ ಆಗಿತ್ತು.
2020ಕ್ಕಿಂತ ಐದು ವರ್ಷದ ಹಿಂದೆ ಎಂದರೆ, 2015ರಲ್ಲಿ 10 ಗ್ರಾಮ್ ಚಿನ್ನಕ್ಕೆ 26,343 ರೂಪಾಯಿ ಇತ್ತು. ಅಂದರೆ 2020ರ ವೇಳೆ 10 ಗ್ರಾಮ್ ಚಿನ್ನಕ್ಕೆ ಅಂದಾಜು 22 ಸಾವಿರ ಏರಿಕೆಯಾಗಿತ್ತು.
2015ಕ್ಕಿಂತ ಐದು ವರ್ಷ ಹಿಂದೆ ಅಂದರೆ, 2010ರಲ್ಲಿ ದೇಶದಲ್ಲಿ 10 ಗ್ರಾಮ್ ಚಿನ್ನ ಬೆಲೆ 18500 ರೂಪಾಯಿ ಆಗಿತ್ತು. ಜಾಗತಿಕ ಹಿಂಜರಿತದ ಕಾರಣದಿಂದ ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆಯಾಗಿತ್ತು.
2005ರಲ್ಲಿ ಅಂದರೆ ಹೆಚ್ಚೂ ಕಡಿಮೆ 20 ವರ್ಷಗಳ ಹಿಂದೆ 10 ಗ್ರಾಮ್ ಚಿನ್ನದ ದರ ಕೇವಲ 7 ಸಾವಿರ ರೂಪಾಯಿ ಆಗಿತ್ತು ಎಂದರೆ ಅಚ್ಚರಿಯಾಗದೇ ಇರದು.
ಇನ್ನು 2000 ಇಸವಿಯ ಚಿನ್ನದ ದರವನ್ನು ಲೆಕ್ಕ ಮಾಡುವುದಾದರೆ, ಅಂದು ನೀವು 10 ಗ್ರಾಮ್ ಚಿನ್ನ ಖರೀದಿ ಮಾಡಿದ್ದರೆ ಅದಕ್ಕೆ ಕೇವಲ 4400 ರೂಪಾಯಿ ಖರ್ಚಾಗುತ್ತಿತ್ತು/
ಅದಕ್ಕಿಂತಲೂ 10 ವರ್ಷದ ಹಿಂದೆ ಅಂದರೆ 1990ರಲ್ಲಿ ನೀವು ದೇಶದಲ್ಲಿ 10 ಗ್ರಾಮ್ ಚಿನ್ನ ಖರೀದಿ ಮಾಡಲು ಮನಸ್ಸು ಮಾಡಿದ್ದರೆ ಅದಕ್ಕೆ ಕೇವಲ 3200 ರೂಪಾಯಿ ಖರ್ಚಾಗುತ್ತಿತ್ತು.
1980ರ ಸಮಯದಲ್ಲಿ ದೇಶದಲ್ಲಿ 10 ಗ್ರಾಮ್‌ನ ಚಿನ್ನದ ಬೆಲೆ ಕೇವಲ 1330 ರೂಪಾಯಿ ಆಗಿತ್ತು. ಆದರೆ, ಅಂದು ಚಿನ್ನ ಖರೀದಿಗೆ ಅಷ್ಟಾಗಿ ಉತ್ಸಾಹವೇ ಇದ್ದಿರಲಿಲ್ಲ.
1970ರ ಸಮಯದಲ್ಲಿ ಅಂದರೆ, ದೇಶ ಇನ್ನೇನು ಪಾಕಿಸ್ತಾನದೊಂದಿಗೆ ಯುದ್ಧಕ್ಕೆ ಸಿದ್ಧವಾಗುವ ಹಂತದಲ್ಲಿ 10 ಗ್ರಾಮ್‌ನ ಚಿನ್ನದ ಬೆಲೆ ಕೇವಲ 184 ರೂಪಾಯಿ ಆಗಿತ್ತು.
ಇನ್ನು 1960ರ ಸಮಯದಲ್ಲಿ ದೇಶದ ಜನರ ಕೈಯಲ್ಲಿ ಒಂದು ರೂಪಾಯಿ ಕೂಡ ಹುಟ್ಟುತ್ತಿರಲಿಲ್ಲ. ಅಂಥ ಸಮಯದಲ್ಲಿ ದೇಶದಲ್ಲಿ 10 ಗ್ರಾಮ್ ಚಿನ್ನದ ಬೆಲೆ 111 ರೂಪಾಯಿ ಆಗಿತ್ತು.
1955 ಅಂದರೆ, ಚಿನ್ನದ ಬೆಲೆಗಳನ್ನು ದಾಖಲು ಮಾಡಲು ಆರಂಭಿಸಿದ ಸಮಯದಲ್ಲಿ ದೇಶದಲ್ಲಿ 10 ಗ್ರಾಮ್‌ನ ಚಿನ್ನದ ಬೆಲೆ ಕೇವಲ 79 ರೂಪಾಯಿ ಆಗಿತ್ತು.