MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಕೋಟಿ ಕುಳದ ಮಗನಾಗಿದ್ದರೂ ಕೇರಳ, ಬೆಂಗಳೂರಿನಲ್ಲಿ ಸಾಮಾನ್ಯರಂತೆ ಬದುಕಿದ ವಜ್ರದ ವ್ಯಾಪಾರಿ ಮೊಮ್ಮಗ!

ಕೋಟಿ ಕುಳದ ಮಗನಾಗಿದ್ದರೂ ಕೇರಳ, ಬೆಂಗಳೂರಿನಲ್ಲಿ ಸಾಮಾನ್ಯರಂತೆ ಬದುಕಿದ ವಜ್ರದ ವ್ಯಾಪಾರಿ ಮೊಮ್ಮಗ!

ಭಾರತದ ಪ್ರಸಿದ್ಧ ವಜ್ರದ ವ್ಯಾಪಾರಿ ಸಂಸ್ಥೆಯ ಕುಟುಂಬಕ್ಕೆ ಸೇರಿದ 21 ವರ್ಷದ ಹುಡುಗನೊಬ್ಬ ತನ್ನ ತಾತ ಕುಟುಂಬದಲ್ಲಿ ಮಾಡಿರುವ ನಿಯಮದಂತೆ 45 ದಿನಗಳ ಕಾಲ ಯಾರಿಗೂ ತಿಳಿಯದೆ. ಕುಟುಂಬಕ್ಕೆ ತಿಳಿಯದ ಜಾಗದಲ್ಲಿ  ಕೇವಲ 5,000 ರೂ ನಲ್ಲಿ ಬದುಕಿ ತೋರಿಸಿದ್ದಾನೆ.

2 Min read
Suvarna News
Published : Apr 09 2024, 08:12 PM IST| Updated : Apr 09 2024, 08:17 PM IST
Share this Photo Gallery
  • FB
  • TW
  • Linkdin
  • Whatsapp
18

ಹರಿ ಕೃಷ್ಣ ಡೈಮಂಡ್ ಎಕ್ಸ್‌ಪೋರ್ಟ್ಸ್‌ನ ಮಾಲೀಕ ಸಾವ್‌ಜಿ ಧೋಲಾಕಿಯಾ ಅವರ 21 ವರ್ಷದ ಮಗ ಧ್ರುವ್ ಧೋಲಾಕಿಯಾ  ಕೇರಳದ  ಕ್ಯಾಲಿಕಟ್‌ ಕೇವಲ  5,000 ರೂ ನಲ್ಲಿ ಬದುಕಿ ತೋರಿಸಿದಾತ. ಹರೇ ಕೃಷ್ಣ ಡೈಮಂಡ್ ಎಕ್ಸ್‌ಪೋರ್ಟ್ಸ್‌ 16,000  ಕೋಟಿ ಮೌಲ್ಯದ ಕಂಪನಿಯಾಗಿದ್ದು,  71 ದೇಶಗಳಲ್ಲಿ ವ್ಯವಹಾರ ಹೊಂದಿದೆ.  

28

ಧೋಲಾಕಿಯಾ ಕುಟುಂಬದಲ್ಲಿ, ವ್ಯಾಪಾರಕ್ಕೆ ಪ್ರವೇಶಿಸುವ ಮೊದಲು, ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಒಂದು ಪರೀಕ್ಷೆಯನ್ನು ಕೈಗೊಳ್ಳಬೇಕಾದ ಸಂಪ್ರದಾಯವಿದೆ. ಅವರು ಧ್ರುವ್ ಧೋಲಾಕಿಯಾ ಆಗಿ ಅಲ್ಲ. ಸಾಮಾನ್ಯ ಮನುಷ್ಯನಾಗಿ ಬದುಕಿ ಪರೀಕ್ಷೆ ಗೆಲ್ಲಬೇಕು. ಅಂತೆಯೇ ಈ ಸವಾಲನ್ನು ತೆಗೆದುಕೊಂಡ ಅವರು  ಭಾರತದ ಯಾವುದೇ ರಾಜ್ಯದ ಅಜ್ಞಾತ ನಗರದಲ್ಲಿ ಧ್ರುವ್ ಪಟೇಲ್ ಆಗಿ ಸಾಮಾನ್ಯ ವ್ಯಕ್ತಿಯಂತೆ ಬದುಕಲು ಮುಂದಾದರು.ತನ್ನ ಚಿಕ್ಕಪ್ಪ ಮತ್ತು ಸಹೋದರರ ಹೆಜ್ಜೆಗಳನ್ನು ಅನುಸರಿಸಿ, ಧ್ರುವ್ ಈ ಪ್ರಯಾಣವನ್ನು ಆರಂಭಿಸಿದರು.

38

ಜೇಬಿನಲ್ಲಿ 5000 ರೂಪಾಯಿ ಇಟ್ಟುಕೊಂಡು 45 ದಿನಗಳ ಕಾಲ ಮನೆಯವರನ್ನು ಸಂಪರ್ಕಿಸದೇ ಜೀವನ ನಿರ್ವಹಣೆ ಮಾಡಬೇಕಾಯಿತು. ಅಪರಿಚಿತ ನಗರದಲ್ಲಿ ಬದುಕಲು ಧ್ರುವ್ ವಿವಿಧ ಕೆಲಸಗಳನ್ನು ಕೈಗೊಂಡರು. ಜೀವನದಲ್ಲಿ ಒಂದು ದಿನ ಕೂಡ ರಿಜೆಕ್ಟ್ ಎಂಬುದನ್ನು ನೋಡೇ ಇರದ ಧ್ರವ್‌ ಕೇರಳದಲ್ಲಿ ಕೆಲಸ ಹುಡುಕುತ್ತಾ ತುಂಬಾ ರಿಜೆಕ್ಟ್ ಅನುಭವಿಸಿದರು. ಈ ಬಗ್ಗೆ ಹೇಳಿಕೊಂಡ ಧ್ರವ್‌ ಜೀವನದಲ್ಲಿ ಈ ತರ ಅನುಭವಿಸಿರಲಿಲ್ಲ. ಎಲ್ಲವೂ ನನಗೆ ಕುಳಿತಲ್ಲಿಗೆ ಬರುತ್ತಿತ್ತು ಎಂದಿದ್ದಾರೆ.

48

ಧ್ರುವ್ ಅವರ ಅಜ್ಜ ಗೋವಿಂದ್ ಧೋಲಾಕಿಯಾ ಅವರು ಈ ಮಹತ್ವದ ಸಂಪ್ರದಾಯವು ಹಣಕಾಸಿನ ಜವಾಬ್ದಾರಿ, ಹಣದ ಮೌಲ್ಯ, ಉದ್ಯೋಗಿಗಳ ಬಗ್ಗೆ ಸಹಾನುಭೂತಿ, ಪ್ರತಿಕೂಲ ಪರಿಸ್ಥಿತಿಗಳಲ್ಲಿ ಎದುರಿಸುವ ಸಾಮರ್ಥ್ಯ ಮತ್ತು ವ್ಯವಹಾರ ಮತ್ತು ವೈಯಕ್ತಿಕ ಜೀವನವನ್ನು ನಿರ್ವಹಿಸುವ ಸೂಕ್ಷ್ಮ ಸಮತೋಲನದ ಅಮೂಲ್ಯವಾದ ಜೀವನ  ಪಾಠಗಳನ್ನು ನೀಡುತ್ತದೆ. ಇದು ಮುಂದೆ ಯಶಸ್ವಿ ಉದ್ಯಮಿಗಳನ್ನು ಮಾತ್ರವಲ್ಲದೆ ಬುದ್ಧಿವಂತಿಕೆ ಮತ್ತು ಸ್ಥಿತಿಸ್ಥಾಪಕತ್ವದೊಂದಿಗೆ ಜೀವನದ ತೊಡಕುಗಳನ್ನು ಪರಿಹರಿಸಲು ಸಮರ್ಥವಾಗಿರುವ ಜವಾಬ್ದಾರಿಯುತ ವ್ಯಕ್ತಿಗಳನ್ನು ರೂಪಿಸುವ ಸಂಪ್ರದಾಯವಾಗಿದೆ.

58

ಈ ಪರೀಕ್ಷೆ ಎದರಿಸಲು ಮೂರು ಷರತ್ತುಗಳಿಗೆ ಬದ್ಧನಾಗಿರಬೇಕು. ತನ್ನ ತಂದೆಯ ಹೆಸರನ್ನು ಎಲ್ಲೂ ಬಳಸುವಂತಿಲ್ಲ. ಐಫೋನ್‌ ಬಳಸುವಂತಿಲ್ಲ. ತೀರಾ ಸಾಮಾನ್ಯ ಫೋನ್‌ ಬಳಸಬೇಕು. ಮನೆಯವರ ಜತೆ ಫೋನ್‌ನಲ್ಲಿ ಮಾತನಾಡುವಂತಿಲ್ಲ. ದಿನದ ಅಪ್ಡೇಟ್‌ನಂತೆ ಸೇಪ್‌ ಆಗಿರುವ ಬಗ್ಗೆ ಮತ್ತು ಜಾಗದ ಬಗ್ಗೆ ಮನೆಯ ಒಬ್ಬ ಸದಸ್ಯನಿಗೆ ತಿಳಿಸಬೇಕು. ತುರ್ತು ಸಂದರ್ಭಕ್ಕಾಗಿ 5 ಸಾವಿರ ಹಣ  ಇಟ್ಟುಕೊಂಡಿರಬೇಕು. ಸ್ಥಳೀಯ ಭಾಷೆಯ ಪರಿಚಯವಿಲ್ಲದಿದ್ದರೂ,  ಧೃವ್   ಕೇರಳವನ್ನು ಆಯ್ಕೆ ಮಾಡಿಕೊಂಡರು. ಅವರು 60 ವಿವಿಧ ಸ್ಥಳಗಳಲ್ಲಿ ನಿರಾಕರಣೆಗಳನ್ನು ಎದುರಿಸಿದ್ದರಿಂದ ಇದು ಕಠಿಣವಾಗಿದೆ ಎಂದು ಸಾಬೀತಾಯಿತು. ಈ ಅನುಭವವು ಅವರಿಗೆ ಪರಿಶ್ರಮದ ಮೌಲ್ಯ ಮತ್ತು ಕೆಲಸದ ಮಹತ್ವವನ್ನು ಕಲಿಸಿತು.

68

ಧ್ರವ್ ಬೇಕರಿ, ಕಾಲ್ ಸೆಂಟರ್, ಶೂ ಅಂಗಡಿ ಮತ್ತು ಮೆಕ್‌ಡೊನಾಲ್ಡ್‌ನ ಔಟ್‌ಲೆಟ್‌ಗಳಲ್ಲಿ ಕೆಲಸ ಮಾಡಿದರು. ತಿಂಗಳಿಗೆ 4 ಸಾವಿರ ದುಡಿಯುವುದು ಕಷ್ಟಸಾಧ್ಯವಾಯ್ತು. ದೈನಂದಿನ ಖರ್ಚುಗಳನ್ನು ಪೂರೈಸಲು ಹರಸಾಹಸ ಪಟ್ಟರು. 2000 ರೂ ಗೆ ಒಂದು ಪಿಜಿಯನ್ನು ಕಂಡುಕೊಂಡರು. 40 ರೂ ಊಟಕ್ಕೂ ಕಷ್ಟವಾಯ್ತು. ನಿಫಾ ಬಂದಿದ್ದರರಿಂದ ಕೇರಳದಿಂದ ಬಂದು ಬೆಂಗಳೂರಿನಲ್ಲಿ ಕೆಲಸ ಮಾಡಿದರು. ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸ ಮಾಡಿದರು.

78

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗನಿಗೆ ಹೋಟೆಲ್‌ನಲ್ಲಿ ಕೆಲಸ ಸಿಗಲು ನಾಲ್ಕು ದಿನಗಳು ಬೇಕಾಯಿತು. ತಂದೆ ಸಾವ್‌ಜಿ ಅವರು ಮಗ ಧೃವ್‌ ಬಗ್ಗೆ ಮಾತನಾಡುತ್ತಾ, ತಮ್ಮ ಮಗನಿಗೆ ಜೀವನದ ನೈಜತೆಯನ್ನು  ಹೇಳುವುದು ಪ್ರಮುಖವಾಗಿದೆ. ಜೀವನ ಕೌಶಲ್ಯಗಳನ್ನು ಅನುಭವದ ಮೂಲಕ ಮಾತ್ರ ಕಲಿಯಬಹುದು ಹೊರತು ಶೈಕ್ಷಣಿಕ ಸಂಸ್ಥೆಯಿಂದಲ್ಲ ಎಂದಿದ್ದಾರೆ.

88

ಲಂಡನ್‌ನಲ್ಲಿ ಭೋಜನಕೂಟದ ಸಮಯದಲ್ಲಿ ಅಜಾಗರೂಕತೆಯಿಂದ ಭಾರಿ ಬಿಲ್ ತೆರಬೇಕಾಯ್ತು. ಘಟನೆಯ ನಂತರ, ಕುಟುಂಬವು ಜೀವನದ ಕಷ್ಟಗಳನ್ನು ಅನುಭವಿಸಲು ಮತ್ತು ಹಣದ ಮೌಲ್ಯವನ್ನು ಅರ್ಥಮಾಡಿಕೊಳ್ಳಲು ಒಂದು ತಿಂಗಳನ್ನು ಮೀಸಲಿಡಲು ನಿರ್ಧರಿಸಿತು. ದ್ರವ್ ಅವರ ಸೋದರಸಂಬಂಧಿಗಳು ಸಹ ಇದೇ ರೀತಿಯ ಇಂಟರ್ನ್‌ಶಿಪ್‌ಗಳಿಗೆ ಒಳಗಾಗಿದ್ದರು. ಕಂಪೆನಿಯು ಈಗ 8000 ಮಂದಿಗೆ ಉದ್ಯೋಗ ನೀಡಿದೆ.

About the Author

SN
Suvarna News
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved