2023ರಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ 5 ಷೇರು,ಹೂಡಿಕೆ ಮಾಡಿದವರಿಗೆ ಕೈತುಂಬಾ ಕಾಸು
ಸ್ಟಾಕ್ ಅನ್ನು ಖರೀದಿಸುವುದು ಸುಲಭ, ಆದರೆ ಹೆಚ್ಚು ಡಿವಿಡೆಂಡ್ ಸಿಗುವ ಸ್ಟಾಕ್ ಅನ್ನು ಹುಡುಕುವುದು ಕಷ್ಟ. ಹಾಗಾದರೆ ಖರೀದಿಸಲು ಅಥವಾ ವಾಚ್‌ಲಿಸ್ಟ್‌ನಲ್ಲಿ ಇರಿಸಲು ಉತ್ತಮವಾದ ಸ್ಟಾಕ್‌ಗಳು ಯಾವುವು? ಇಲ್ಲಿದೆ ನೋಡಿ

HDFC ಬ್ಯಾಂಕ್ ಸರಾಸರಿ ಗುರಿ ಬೆಲೆ 2022 ರೂ.ಗಳನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟದಿಂದ 29% ಏರಿಕೆಯಾಗಿದೆ. ಅಂಕಿ ಅಂಶಗಳ ಪ್ರಕಾರ ಖಾಸಗಿ ವಲಯದಲ್ಲಿ ಹೆಚ್ಚು ಖರೀದಿಯಾದ ಶೇರುಗಳು HDFC ಆಗಿದೆ.
ಅಶೋಕ್ ಲೇಲ್ಯಾಂಡ್ ರೂ 202 ರ ಸರಾಸರಿ ಗುರಿ ಬೆಲೆಯನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟಕ್ಕಿಂತ 11% ಏರಿಕೆಯಾಗಿದೆ.ಇತ್ತೀಚೆಗಿನ ತ್ರೈಮಾಸಿಕದಲ್ಲಿ ಕಂಪನಿಯು ನಿವ್ವಳ ಲಾಭವನ್ನು ವರಿದಿಮಾಡಿದೆ.
ಎಸ್‌ಬಿಐ ರೂ 709 ರ ಸರಾಸರಿ ಗುರಿ ಬೆಲೆಯನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟದಿಂದ 18% ಏರಿಕೆಯಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಟಾಕ್ 52 ವಾರಗಳ ಕಡಿಮೆ ಬೆಲೆ 499.35 ಮತ್ತು 52 ವಾರಗಳ ಗರಿಷ್ಠ ಬೆಲೆ 629.55.
ಅಲ್ಟ್ರಾಟೆಕ್ ಸಿಮೆಂಟ್ ರೂ 8859 ರ ಸರಾಸರಿ ಗುರಿ ಬೆಲೆಯನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟದಿಂದ 5% ಏರಿಕೆಯಾಗಿದೆ.ಕಂಪನಿಯು ಇತ್ತೀಚಿನ ತ್ರೈಮಾಸಿಕದಲ್ಲಿ ತೆರಿಗೆ ನಂತರ Rs 1686.52 ಕೋಟಿಗಳ ನಿವ್ವಳ ಲಾಭವನ್ನು ವರದಿ ಮಾಡಿದೆ.
ICICI ಬ್ಯಾಂಕ್ ಸರಾಸರಿ ಗುರಿ ಬೆಲೆ 1174 ರೂ.ಗಳನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟದಿಂದ 19% ಏರಿಕೆಯಾಗಿದೆ.ಇತ್ತೀಚೆಗಿನ ತ್ರೈಮಾಸಿಕದಲ್ಲಿ Rs 10636.12 ಕೋಟಿ ಮೊತ್ತವನ್ನು ತೆರಿಗೆಯ ನಂತರದ ನಿವ್ವಳ ಲಾಭವನ್ನು ಈ ಬ್ಯಾಂಕ್ ವರದಿ ಮಾಡಿದೆ
ಟಾಟಾ ಮೋಟಾರ್ಸ್ ಸರಾಸರಿ ಗುರಿ ಬೆಲೆ 715 ರೂ.ಗಳನ್ನು ಹೊಂದಿದೆ, ಇದು ಪ್ರಸ್ತುತ ಮಟ್ಟದಿಂದ 12% ಏರಿಕೆಯಾಗಿದೆ. ಹಾಗೇ ತನ್ನ ವಾಣಿಜ್ಯ ವಾಹನಗಳ ಬೆಲೆಗಳನ್ನು 3% ವರೆಗೆ ಹೆಚ್ಚಿಸಲಿದೆ, ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.