- Home
- Business
- ಈ ಸಣ್ಣಪುಟ್ಟ ಬದಲಾವಣೆಗಳಿಂದ ಇಂಧನ ಉಳಿಸಿ ಜೇಬು ತುಂಬಿಸಿಕೊಳ್ಳಿ: ಪ್ರತಿ ವಾಹನ ಸವಾರರಿಗೂ ಈ ವಿಷಯ ಗೊತ್ತಿರಬೇಕು
ಈ ಸಣ್ಣಪುಟ್ಟ ಬದಲಾವಣೆಗಳಿಂದ ಇಂಧನ ಉಳಿಸಿ ಜೇಬು ತುಂಬಿಸಿಕೊಳ್ಳಿ: ಪ್ರತಿ ವಾಹನ ಸವಾರರಿಗೂ ಈ ವಿಷಯ ಗೊತ್ತಿರಬೇಕು
Fuel Efficiency Made Easy Tips: ಪೆಟ್ರೋಲ್, ಡೀಸೆಲ್ ದುಬಾರಿಯಾಗ್ತಿದೆ. ಸಣ್ಣಪುಟ್ಟ ಬದಲಾವಣೆಗಳಿಂದ ಖರ್ಚು ಉಳಿಸಬಹುದು. ಲಾಂಗ್ ಡ್ರೈವ್, ಡೈಲಿ ಟ್ರಿಪ್ ಎರಡಕ್ಕೂ ಈ ಟಿಪ್ಸ್ ಉಪಯುಕ್ತ.

ಇಂಧನ ದುಬಾರಿ
ಪೆಟ್ರೋಲ್, ಡೀಸೆಲ್ ದರ ಏರುತ್ತಲೇ ಇದೆ. ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಖರ್ಚು ಉಳಿಸಬಹುದು.
ಸ್ಪೀಡ್ ಬೇಡ
ಸ್ಪೀಡ್ ಡ್ರೈವಿಂಗ್, ಸಡನ್ ಬ್ರೇಕ್ ಇಂಧನ ಬಳಕೆಯನ್ನು ಹೆಚ್ಚಿಸುತ್ತದೆ. ನಿಧಾನ, ಸ್ಥಿರ ವೇಗದಲ್ಲಿ ಚಾಲನೆ ಮಾಡಿದರೆ ಇಂಧನ ಉಳಿಸುತ್ತದೆ.
ರೆಗ್ಯುಲರ್ ಸರ್ವಿಸ್
ಇಂಜಿನ್ ಹೆಲ್ತ್ ಚೆನ್ನಾಗಿದ್ರೆ ಹೆಚ್ಚು ಇಂಧನ ಬಳಕೆಯಾಗಲ್ಲ . ಇದಕ್ಕಾಗಿ ವಾಹನದ ರೆಗ್ಯುಲರ್ ಚೆಕ್ ಮಾಡಿಸಬೇಕು. ಆಗಾಗ್ಗೆ ಎಂಜಿನ್ ಆಯಿಲ್, ಏರ್ ಫಿಲ್ಟರ್ ಬದಲಿಸಬೇಕು. ಇದರಿಂದ ಇಂಧನ ಉಳಿತಾಯವಾಗುತ್ತದೆ.
ಟ್ರಿಪ್ ಪ್ಲಾನ್
ಟ್ರಿಪ್ ಪ್ಲಾನ್ ಮಾಡಿ. ಒಂದೇ ಟ್ರಿಪ್‌ನಲ್ಲಿ ಹೆಚ್ಚು ಸ್ಥಳ ಕವರ್ ಮಾಡಿದ್ರೆ ಕಡಿಮೆ ಇಂಧನದಲ್ಲಿ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿದಂತಾಗುತ್ತದೆ. ಚಿಕ್ಕ ದೂರದ ಸ್ಥಳಗಳಿಗೆ ಕಾರ್ ಬಳಕೆ ಮಾಡೋದನ್ನು ಕಡಿಮೆ ಮಾಡಿ. ಒಂದೇ ಸ್ಥಳಕ್ಕೆ ಮೂರ್ನಾಲ್ಕು ಜನರು ತೆರಳುತ್ತಿದ್ರೆ, ಪ್ರತ್ಯೇಕವಾಗಿ ಹೋಗುವ ಬದಲು ಒಂದೇ ಕಾರ್ ಬಳಕೆ ಮಾಡಿ. ಇದರಿಂದ ಹಣದ ಉಳಿತಾಯವಾಗುತ್ತದೆ.
ಟೈರ್ ಪ್ರೆಷರ್
ಸರಿಯಾದ ಟೈರ್ ಪ್ರೆಷರ್ ನಿಮ್ಮ ಇಂಧನ ಉಳಿಸುತ್ತದೆ. ಈ ವಿಷಯ ತುಂಬಾ ಜನರಿಗೆ ತಿಳಿದಿರಲ್ಲ. ಹಾಗಾಗಿ ತಿಂಗಳಿಗೊಮ್ಮೆ ವಾಹನದ ಟೈರ್ ಪ್ರೆಷರ್ ಒಮ್ಮೆ ಚೆಕ್ ಮಾಡಿ. ಕಾರಿನಲ್ಲಿ ಅನಗತ್ಯ ಸಾಮಾನು ಇರಿಸೋದನ್ನು ತಪ್ಪಿಸಿ.
ಇಂಧನ ಆಯ್ಕೆ
ಗುಣಮಟ್ಟದ ಪೆಟ್ರೋಲ್ ಆಯ್ಕೆಗೆ ಮೊದಲ ಆದ್ಯತೆಯನ್ನು ನೀಡಿ. ಇದು ವಾಹನದ ಕಂಡೀಷನ್‌ಗೂ ಒಳ್ಳೆಯದು. ಟ್ಯಾಂಕ್ ಫುಲ್ ಮಾಡಿರುವ ಅಭ್ಯಾಸವಿದ್ರೆ ಇಂದಿನಿಂದ ತಪ್ಪಿಸಿ. ಅಗತ್ಯವಿರೋವಷ್ಟು ಇಂಧನ ಹಾಕಿಸಿದ್ರೆ, ಸರಿಯಾದ ಲೆಕ್ಕ ಸಿಗುತ್ತದೆ.
ಟೆಕ್ನಾಲಜಿ
ಎಲೆಕ್ಟ್ರಿಕ್/ಹೈಬ್ರಿಡ್ ಕಾರು ಬಳಸಿ ಇಂಧನ ಉಳಿಸಬಹುದು. GPS, ಟ್ರಾಫಿಕ್ ಆ್ಯಪ್ ಬಳಸಿ. ಇಂಧನ ಉಳಿತಾಯ ಗ್ಯಾಜೆಟ್‌ಗಳ ಕ್ವಾಲಿಟಿ ಚೆಕ್ ಮಾಡಿ. ವಾಹನ ಖರೀದಿಸುವಾಗಲೇ ಈ ಅಂಶಗಳನ್ನು ಪರಿಶೀಲಿಸಿಕೊಳ್ಳಿ