- Home
- Business
- ಬರೋಬ್ಬರಿ 6200 ಕೋಟಿ ದೇಣಿಗೆ ನೀಡಿದ ಉದ್ಯಮಿಯ ಸಿಂಪಲ್ ಲೈಫ್; ಬಿಲಿಯನೇರ್ ಬಳಿ ಸ್ಮಾರ್ಟ್‌ಫೋನ್ ಕೂಡಾ ಇಲ್ಲ!
ಬರೋಬ್ಬರಿ 6200 ಕೋಟಿ ದೇಣಿಗೆ ನೀಡಿದ ಉದ್ಯಮಿಯ ಸಿಂಪಲ್ ಲೈಫ್; ಬಿಲಿಯನೇರ್ ಬಳಿ ಸ್ಮಾರ್ಟ್‌ಫೋನ್ ಕೂಡಾ ಇಲ್ಲ!
ಬಿಲಿಯನೇರ್‌ಗಳ ಲೈಫ್‌ಸ್ಟೈಲ್ ತುಂಬಾ ಲಕ್ಸುರಿಯಸ್ ಆಗಿರುತ್ತದೆ. ಐಷಾರಾಮಿ ಬಂಗಲೆ, ಲಕ್ಸುರಿಯಸ್ ಕಾರು, ಇತರ ವಸ್ತುಗಳ ಸಂಗ್ರಹ ಹೊಂದಿರುತ್ತಾರೆ. ಆದರೆ ಈ ಕೋಟಿ ಆಸ್ತಿಗಳ ಒಡೆಯ, ಸಕ್ಸಸ್‌ಫುಲ್ ಉದ್ಯಮಿ ಎಷ್ಟು ಸರಳ ಜೀವನ ನಡೆಸ್ತಾರೆ ಅಂದ್ರೆ ಇವರ ಬಳಿ ಸ್ಮಾರ್ಟ್‌ಫೋನ್ ಕೂಡಾ ಇಲ್ಲ.

ಭಾರತೀಯ ಸಾಲ ಮತ್ತು ವಿಮಾ ವಿಭಾಗದಲ್ಲಿ ಫೇಮಸ್ ಹೆಸರು ಆರ್.ತ್ಯಾಗರಾಜನ್. ಶ್ರೀರಾಮ್ ಗ್ರೂಪ್‌ನ ಸಹ-ಸಂಸ್ಥಾಪಕರಾಗಿದ್ದಾರೆ. ಇದು ಚೆನ್ನೈನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಹಣಕಾಸು ಸೇವೆಗಳ ಸಮೂಹವಾಗಿದೆ. ಕಂಪನಿಯನ್ನು 1974ರಲ್ಲಿ AVS ರಾಜಾ ಮತ್ತು T.ಜಯರಾಮನ್ ಜೊತೆಗೆ ಆರ್.ತ್ಯಾಗರಾಜನ್ ಸ್ಥಾಪಿಸಿದರು.
ಆರಂಭದಲ್ಲಿ, ಕಂಪನಿಯು ಚಿಟ್ ಫಂಡ್ ವ್ಯವಹಾರದೊಂದಿಗೆ ಪ್ರಾರಂಭವಾಯಿತು. ಆದರೆ ನಂತರ ಅದು ಸಾಲ ನೀಡುವ ದೈತ್ಯ ಫೈನಾನ್ಸ್ ಗ್ರೂಪ್ ಅಗಿ ಬದಲಾಯಿತು. ಆರ್.ತ್ಯಾಗರಾಜನ್ ಅವರು ಬ್ಯಾಂಕ್‌ಗಳಿಂದ ಸಾಲ ಪಡೆಯದ ಕಡಿಮೆ ಆದಾಯದ ಜನರಿಗೆ ಸಾಲ ನೀಡುವ ಮೂಲಕ 87000 ಕೋಟಿ ರೂ.ಗಳ ಬೃಹತ್ ಶ್ರೀರಾಮ್ ಸಮೂಹವನ್ನು ನಿರ್ಮಿಸಲು ಸಾಧ್ಯವಾಯಿತು.
ಆದರೆ ಅತ್ಯಂತ ಯಶಸ್ವಿ ಉದ್ಯಮಿಗಳಿಗಿಂತ ಭಿನ್ನವಾಗಿ, ಆರ್.ತ್ಯಾಗರಾಜನ್ ಸರಳ ಜೀವನ ನಡೆಸುತ್ತಾರೆ. ಕಾರ್ಯನಿರ್ವಾಹಕರು ಅತಿ ಹೆಚ್ಚು ಹಣವನ್ನು ದೇಣಿಗೆ ನೀಡುತ್ತಾರೆ. ಮತ್ತು ಕೇವಲ 6 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ಹೊಂದಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಆರ್.ತ್ಯಾಗರಾಜನ್, ಕ್ರೆಡಿಟ್ ಇತಿಹಾಸವಿಲ್ಲದವರಿಗೆ ಹಣವನ್ನು ಸಾಲವಾಗಿ ನೀಡುವುದು ಅಪಾಯಕಾರಿ ಅಲ್ಲ ಎಂದು ಸಾಬೀತುಪಡಿಸಲು ಕಂಪನಿಯನ್ನು ಪ್ರಾರಂಭಿಸಿದ್ದಾಗಿ ಬಹಿರಂಗಪಡಿಸಿದರು.
ಪ್ರಸ್ತುತ, ಆರ್ ತ್ಯಾಗರಾಜನ್ ಅವರ ಶ್ರೀರಾಮ್ ಗ್ರೂಪ್ 1,00,000 ಜನರನ್ನು ನೇಮಿಸಿಕೊಂಡಿದೆ. ಕಂಪನಿಯು ಜನಸಾಮಾನ್ಯರಿಗೆ ಸುಲಭವಾಗಿ ಸಾಲ ಒದಗಿಸುತ್ತದೆ.
ತಮಿಳುನಾಡಿನ ಶ್ರೀಮಂತ ಕೃಷಿ ಕುಟುಂಬದಲ್ಲಿ ಜನಿಸಿದ ಆರ್.ತ್ಯಾಗರಾಜನ್ ಗಣಿತದಲ್ಲಿ ಪದವಿ ಪಡೆದರು. ಕೋಲ್ಕತ್ತಾದ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದ ಬಳಿಕ 1961ರಲ್ಲಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ ಸೇರಿದರು. ಅವರು ಹಲವಾರು ಹಣಕಾಸು ಕಂಪನಿಗಳಲ್ಲಿ ಉದ್ಯೋಗಿಯಾಗಿ ಎರಡು ದಶಕಗಳ ಕಾಲ ಕೆಲಸ ಮಾಡಿದರು.
37ನೇ ವಯಸ್ಸಿನಲ್ಲಿ ಉದ್ಯಮ ಆರಂಭಿಸಿದ ತ್ಯಾಗರಾಜನ್ ಸದ್ಯ 30 ಕಂಪನಿಗಳನ್ನು ಹೊಂದಿದ್ದಾರೆ. ಕಂಪನಿಯು 23 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ಪ್ರಮುಖ ಕಂಪನಿಯಾದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ಮಾರುಕಟ್ಟೆ ಮೌಲ್ಯವು ಸುಮಾರು 865 ಬಿಲಿಯನ್ ಆಗಿದೆ.
ಆದರೆ ತ್ಯಾಗರಾಜನ್ ಇವತ್ತಿಗೂ ಚಿಕ್ಕ ಮನೆಯಲ್ಲಿ ವಾಸವಾಗಿದ್ದಾರೆ. ಸಾಮಾನ್ಯ ಕಾರನ್ನು ಓಡಿಸುತ್ತಾರೆ ಮತ್ತು ಅವರು ತಮ್ಮ ಸ್ವಂತ ಮೊಬೈಲ್ ಹೊಂದಿಲ್ಲ.
6210 ಕೋಟಿ ರೂ.ಗೂ ಹೆಚ್ಚು ಹಣವನ್ನು ದೇಣಿಗೆ ನೀಡಿದ್ದಾರೆ.