BSNL ನಿಂದ ರೈಲ್ವೇ ಕಂಪನಿಗೆ ಸಿಕ್ತು 9,613 ಕೋಟಿ ರುಪಾಯಿ ಆರ್ಡರ್! ಈ ಸ್ಟಾಕ್ 12% ಹೆಚ್ಚಳ!
ಬೆಂಗಳೂರು: ಜಿಯೋ ಹಾಗೂ ಏರ್‌ಟೆಲ್‌ನಂತಹ ಬಲಾಢ್ಯ ಸಂಸ್ಥೆಗಳ ಜತೆ ಸ್ಪರ್ಧೆಗಿಳಿದಿರುವ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬಿಎಸ್‌ಎನ್‌ಎಲ್‌ನಿಂದ ರೈಲ್ವೇ ಕಂಪನಿಗೆ ಬರೋಬ್ಬರಿ 9,613 ಕೋಟಿ ರುಪಾಯಿ ಮೌಲ್ಯದ ಆರ್ಡರ್ ಸಿಕ್ಕಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಭಾರತ್ ಸಂಚಾರ್ ನಿಗಮ ನಿಯಮಿತ(BSNL) ಇದೀಗ ರೈಲ್ವೇ ಕಂಪನಿಯೊಂದಕ್ಕೆ ದೊಡ್ಡ ಆರ್ಡರ್ ಒಂದು ನೀಡಿದೆ. ಇದರ ಬೆನ್ನಲ್ಲೇ ಇದರ ಆ ರೈಲ್ವೇ ಕಂಪನಿಯ ಶೇರುಗಳ ಮುಖಬೆಲೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ.
ಬಿಎಸ್‌ಇ ಫೈಲಿಂಗ್‌ನಲ್ಲಿ ರೈಲ್ವೇ ಪಿಎಸ್‌ಯು ಸ್ಟಾಕ್ಸ್ ಈ ಕುರಿತಂತೆ ಪ್ರಕಟಣೆ ಹೊರಡಿಸಿದ್ದು, 9,613.42 ಕೋಟಿ ರುಪಾಯಿ ಮೌಲ್ಯದ ಆರ್ಡರ್ ರೈಲ್ವೇ ಕಂಪನಿಗೆ ಸಿಕ್ಕಿದೆ ಎಂದು ತಿಳಿಸಿದೆ.
ಬಿಎಸ್‌ಎನ್‌ಎಲ್ ಭಾರತೀಯ ರೈಲ್ವೇಯ ಕಂಪನಿಯಾಗಿರುವ ರೈಲ್ ವಿಕಾಸ್ ನಿಗಮ್ ಲಿಮಿಟೆಡ್‌ಗೆ DBOM(ಡಿಸೈನ್ ಬ್ಯುಲ್ಡ್ ಆಪರೇಟ್ ಅಂಡ್ ಮೆಂಟೇನ್)ನ ಭಾರತ್ ನೆಟ್‌ಗಾಗಿ ಮಿಡಲ್ ಮೇಲ್ ನೆಟ್‌ವರ್ಕ್ ಡೆವಲ್ಪ್‌ಮೆಂಟ್‌ಗಾಗಿ ಈ ಆರ್ಡರ್ ನೀಡಿದೆ.
ಈ ಸುದ್ದಿ ಹೊರಬೀಳುತ್ತಿದ್ದಂತೆಯೇ ರೈಲ್ ವಿಕಾಸ್ ನಿಗಮ್(RVNL) ಷೇರಿನ ಮುಖಬೆಲೆಯಲ್ಲಿ ಬರೋಬ್ಬರಿ 11.59% ಏರಿಕೆ ಕಂಡಿದೆ. ದಿನದಂತ್ಯಕ್ಕೆ ಈ ಷೇರಿನ ಬೆಲೆ ಗರಿಷ್ಠ 415 ರುಪಾಯಿಗೆ ತಲುಪಿದೆ.
ಈ ಹಿಂದೆ ರೈಲ್ ವಿಕಾಸ್ ನಿಗಮ್ ಷೇರು 8.52% ವೇಗವಾಗಿ ಏರಿಕೆ ಕಂಡು 403.60 ರುಪಾಯಿ ತಲುಪಿತ್ತು. ಈ ಷೇರು ಕಳೆದೊಂದು ವರ್ಷದಲ್ಲಿ ಬರೋಬ್ಬರಿ 80.58 ವೇಗವಾಗಿ ಏರಿಕೆ ಕಂಡಿದೆ.
ಎಕ್ಸ್‌ಚೇಂಜ್ ಈ RVNL ಷೇರಿನ ಮೇಲೆ ನಿಗಾ ಇಟ್ಟಿದ್ದು, BSE ಹಾಗೂ NSE ಈ ಸ್ಟಾಕ್ಸ್‌ನ ಮೇಲೆ ಹೈರಿಸ್ಕ್ ಇರುವ ಕುರಿತಂತೆ ಎಚ್ಚರಿಕೆಯಿಂದಿರುವಂತೆ ಸೂಚಿಸಿದೆ. ಯಾಕೆಂದರೆ ಈ ಷೇರು ಸಾಕಷ್ಟು ಏರಿಳಿತಗಳನ್ನು ಕಾಣುತ್ತಾ ಬಂದಿದೆ.
ನೆನಪಿಡಿ ನೀವು ಯಾವುದೇ ಹೂಡಿಕೆ ಮಾಡುವ ಮುನ್ನ ಸೂಕ್ತ ಆರ್ಥಿಕ ತಜ್ಞರ ಸಲಹೆ ಪಡೆದೇ ಹೂಡಿಕೆ ಮಾಡಿ
ತಾಂತ್ರಿಕವಾಗಿ ಈ ಷೇರು 390-370ರವರೆಗೆ ಸಪೋರ್ಟ್ ಸಿಗಬಹುದು. ಈಗಿನ ಬೆಳವಣಿಗೆಗಳನ್ನು ಗಮನಿಸಿದರೆ ಈ ಷೇರು 450ರವರೆಗೂ ತಲುಪಿದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.