MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Business
  • ಗಮನದಲ್ಲಿರಲಿ, ಹೊಸ ವರ್ಷದಲ್ಲಾಗಲಿದೆ ಈ 13 ಬದಲಾವಣೆಗಳು!

ಗಮನದಲ್ಲಿರಲಿ, ಹೊಸ ವರ್ಷದಲ್ಲಾಗಲಿದೆ ಈ 13 ಬದಲಾವಣೆಗಳು!

ಹೊಸ ವರ್ಷದಿಂದ ಭಾರತೀಯರ ಬದುಕಿನಲ್ಲಿ ಹಲವು ಬದಲಾವಣೆಗಳನ್ನು ಕಾಣಲಿದ್ದೇವೆ. ಎಲ್‌ಪಿಜಿ, ಪೆಟ್ರೋಲ್ ಬೆಲೆ ಏರಿಕೆಯಿಂದ ಹಿಡಿದು ವಾಟ್ಸಾಪ್ ಬಳಕೆಯಲ್ಲಿನ ಬದಲಾವಣೆಗಳವರೆಗೆ ಹಲವು ಹೊಸ ನಿಯಮಗಳು ಜಾರಿಗೆ ಬರಲಿವೆ.

3 Min read
Santosh Naik
Published : Dec 31 2024, 01:23 PM IST| Updated : Dec 31 2024, 03:15 PM IST
Share this Photo Gallery
  • FB
  • TW
  • Linkdin
  • Whatsapp
114

ನಾಳೆಯಿಂದ ಹೊಸ ವರ್ಷ. ಕ್ಯಾಲೆಂಡರ್‌ ಬದಲಾಗೋದು ಮಾತ್ರವಲ್ಲ, ಭಾರತೀಯರ ಬದುಕಿನಲ್ಲೂ ಕೆಲ ಬದಲಾವಣೆಗಳು ಆಗಲಿವೆ. ಕೆಲವೊಂದು ಹೊಸತನಕ್ಕೆ ದೇಶದ ಜನರು ಒಗ್ಗಿಕೊಳ್ಳಲೇಬೇಕಾದ ಪರಿಸ್ಥಿತಿಗಳು ಬರಲಿವೆ. ಕೇವಲ ಎಲ್‌ಪಿಜಿ ಬೆಲೆ, ಪೆಟ್ರೋಲ್‌ ಬೆಲೆಗಳು ಮಾತ್ರವಲ್ಲ, ಕಾರ್‌ಗಳು-ಕಮರ್ಷಿಯಲ್‌ ವೆಹಿಕಲ್‌ಗಳ ಬೆಲೆಯಲ್ಲೂ ಜನವರಿ 1 ರಿಂದ ಏರಿಕೆ ಆಗಲಿದೆ. ವಿಶ್ವದ ಅತ್ಯಂತ ಪ್ರೀತಿಪಾತ್ರ ಮೆಸೆಂಜರ್‌ ಅಪ್ಲಿಕೇಶನ್‌ ವಾಟ್ಸ್‌ಅಪ್‌ ಕೂಡ ತನ್ನ ಮೂಲದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಿದೆ. 2025 ರಲ್ಲಿ 13 ಪ್ರಮುಖ ವಿಷಯಗಳು ಸಹ ಬದಲಾಗುತ್ತಿವೆ. ಇವುಗಳಲ್ಲಿ ಕೆಲವು ಅನುಕೂಲಗಳು, ಕೆಲವು ನಿರ್ಬಂಧಗಳು ಮತ್ತು ಕೆಲವು ವಿಚಾರಗಳನ್ನು ತಿಳಿದುಕೊಳ್ಳುವುದು ಮುಖ್ಯವಾಗಲಿದೆ.

214
ಯುಪಿಐ ಪೇಮೆಂಟ್‌ ಲಿಮಿಟ್‌ ದುಪ್ಪಟ್ಟು

ಯುಪಿಐ ಪೇಮೆಂಟ್‌ ಲಿಮಿಟ್‌ ದುಪ್ಪಟ್ಟು

ಫೀಚರ್‌ ಫೋನ್‌ಗಳಲ್ಲಿ ಯುಪಿಐ ಅನ್ನು ಬಳಕೆ ಮಾಡುವ ಗ್ರಾಹಕರಿಗೆ ಆರ್‌ಬಿಐ ಗುಡ್‌ ನ್ಯೂಸ್‌ ನೀಡಿದೆ. ಜನವರಿ 1 ರಿಂದ ಅವರು 10 ಸಾವಿರದವರೆಗೆ ಆನ್‌ಲೈನ್‌ ಪೇಮೆಂಟ್‌ಅನ್ನು ಫೀಚರ್‌ ಫೋನ್‌ನಲ್ಲಿ ಮಾಡಲು ಸಾಧ್ಯವಾಗಲಿದೆ. ಪ್ರಸ್ತುತ ಈ ಲಿಮಿಟ್‌ 5 ಸಾವಿರದವರೆಗೆ ಮಾತ್ರವೇ ಇತ್ತು.

314
ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ತೆಗೆಯಬಹುದು

ಯಾವುದೇ ಬ್ಯಾಂಕ್‌ನಿಂದ ಪಿಂಚಣಿ ತೆಗೆಯಬಹುದು

ಪಿಂಚಣಿದಾರರು ಜನವರಿ 1 ರಿಂದ ದೇಶದ ಯಾವುದೇ ಬ್ಯಾಂಕ್‌ನಿಂದಲಾದರೂ ತಮ್ಮ ಪಿಂಚಣಿ ಹಣವನ್ನು ವಾಪಾಸ್‌ ಪಡೆಯಬಹುದಾಗಿದೆ. ಇದಕ್ಕಾಗಿ ಆಂತರಿಕ ವೆರಿಫಿಕೇಶನ್‌ನ ಅಗತ್ಯವಿರೋದಿಲ್ಲ. ಇಲ್ಲಿಯವರೆಗೂ ನೀವು ಯಾವ ಬ್ಯಾಂಕ್‌, ಯಾವ ಶಾಖೆಯಲ್ಲಿ ಖಾತೆ ಹೊಂದಿದ್ದೀರೋ ಅಲ್ಲಿಯ ಶಾಖೆಯಿಂದ ಮಾತ್ರವೇ ಪಿಂಚಣಿ ಪಡೆದುಕೊಳ್ಳುವ ವ್ಯವಸ್ಥೆ ಇತ್ತು.
 

414
ರೈತರಿಗೆ 2 ಲಕ್ಷದವರೆಗೆ ಗ್ಯಾರಂಟಿ ರಹಿತ ಸಾಲ

ರೈತರಿಗೆ 2 ಲಕ್ಷದವರೆಗೆ ಗ್ಯಾರಂಟಿ ರಹಿತ ಸಾಲ

ಜನವರಿ 1 ರಿಂದ ದೇಶದ ರೈತರಿಗೆ ಯಾವುದೇ ಗ್ಯಾರಂಟಿ ಇಲ್ಲದೆ 2 ಲಕ್ಷದವರೆಗೆ ಸಾಲ ಸೌಲಭ್ಯ ಸಿಗಲಿದೆ. ಆರ್‌ಬಿಐ ಗವರ್ನರ್‌ ಡಿಸೆಂಬರ್‌ನಲ್ಲಿ ಈ ಘೋಷಣೆ ಮಾಡಿದ್ದರು. ಇಲ್ಲಿಯವರೆಗೂ ರೈತರಿಗೆ ಗ್ಯಾರಂಟಿ ರಹಿತವಾಗಿ 1.6 ಲಕ್ಷದವರೆಗೆ ಸಾಲ ಪಡೆಯುವ ಅವಕಾಶಗಳಿತ್ತು.
 

514
ದೂರವಾಣಿ ಕರೆಗಳಿಗಾಗಿ ಪ್ರತ್ಯೇಕ ರಿಚಾರ್ಜ್‌

ದೂರವಾಣಿ ಕರೆಗಳಿಗಾಗಿ ಪ್ರತ್ಯೇಕ ರಿಚಾರ್ಜ್‌

ಟೆಲಿಕಾಂ ಕಂಪನಿಗಳು ವಾಯ್ಸ್+ಎಸ್‌ಎಂಎಸ್‌ಗಳಿಗೆ ಮಾತ್ರವೇ ರಿಚಾರ್ಜ್‌ ಪ್ಲ್ಯಾನ್‌ಅನ್ನು ನೀಡಬೇಕಿದೆ. ಡೇಟಾ ಬಳಕೆ ಮಾಡದ ಗ್ರಾಹಕರ ಅನುಕೂಲಕ್ಕಾಗಿ ಈ ಪ್ಲ್ಯಾನ್‌ ಇರಲಿದೆ. ಇವರಿಗೆ ಹೊಸ ರಿಚಾರ್ಜ್‌ ಪ್ಲ್ಯಾನ್‌ಗಳು ಕಡಿಮೆ ಬೆಲೆಗೆ ಸಿಗಲಿದೆ. ಇಲ್ಲಿಯವರೆಗೂ, ಬರೀ ಕಾಲಿಂಗ್‌ಗಾಗಿ ಫೋನ್‌ಅನ್ನು ಬಳಕೆ ಮಾಡುವ ಜನರೂ, ಡೇಟಾ ರಿಚಾರ್ಜ್‌ ಪ್ಲ್ಯಾನ್‌ಅನ್ನೇ ಖರೀದಿ ಮಾಡಬೇಕಿತ್ತು.
 

614
ಕಾರ್‌, ಬೈಕ್‌, ಕಮರ್ಷಿಯಲ್‌ ವಾಹನಗಳು ದುಬಾರಿ

ಕಾರ್‌, ಬೈಕ್‌, ಕಮರ್ಷಿಯಲ್‌ ವಾಹನಗಳು ದುಬಾರಿ

ಮಾರುತಿ, ಹುಂಡೈ, ಟಾಟಾ, ಕಿಯಾ ಹಾಗೂ ಎಂಜಿ ಕಂಪನಿಯ ಕಾರುಗಳ ಬೆಲೆಗಳು ಜನವರಿ 1 ರಿಂದ ದುಬಾರಿಯಾಗಲಿದೆ. ಬೈಕ್‌ ಹಾಗೂ ಕಮರ್ಷಿಯನ್‌ ವಾಹನಗಳ ಬೆಲೆಯಲ್ಲೂ ಶೇ. 2 ರಿಂದ ಶೇ. 3ರಷ್ಟು ಏರಿಕೆ ಆಗುವ ಸಾಧ್ಯತೆ ಇದೆ. ವಾಹನಗಳನ್ನು ನಿರ್ಮಾಣ ಮಾಡಲು ಬಳಸುವ ವಸ್ತುಗಳ ಬೆಲೆಯಲ್ಲಿ ಏರಿಕೆ ಆಗಿದ್ದು, ಅದಕ್ಕಾಗಿ ಬೆಲೆ ಏರಿಕೆ ಮಾಡಲಾಗಿದೆ ಎಂದು ಕಂಪನಿಗಳು ತಿಳಿಸಿವೆ.

714
ಹಳೆಯ ಫೋನ್‌ ಆಗಿದ್ದರೆ, ವಾಟ್ಸ್‌ಆಪ್‌ ವರ್ಕ್‌ ಆಗೋದಿಲ್ಲ

ಹಳೆಯ ಫೋನ್‌ ಆಗಿದ್ದರೆ, ವಾಟ್ಸ್‌ಆಪ್‌ ವರ್ಕ್‌ ಆಗೋದಿಲ್ಲ

ಆಂಡ್ರಾಯ್ಡ್‌ 4.4 (ಕಿಟ್‌ಕ್ಯಾಟ್‌ ವರ್ಷನ್‌) ಹಾಗೂ ಅದಕ್ಕಿಂತ ಹಿಂದಿನ ವರ್ಷನ್‌ಗಳಲ್ಲಿ ವಾಟ್ಸ್‌ಆಪ್‌ ಕೆಲಸ ಮಾಡೋದಿಲ್ಲ ಎಂದು ಮೆಟಾ ತಿಳಿಸಿದೆ. ವಾಟ್ಸ್‌ಅಪ್‌ನಲ್ಲಿರುವ ಮೆಟಾ ಎಐ ಫೀಚರ್‌ಅನ್ನು ಆಂಡ್ರಾಯ್ಡ್‌ 4.4 ವರ್ಷನ್‌ಗಿಂತ ಮೇಲಿನ ವರ್ಷನ್‌ಗಳಲ್ಲಿ ಮಾತ್ರವೇ ಕೆಲಸ ಮಾಡಲಿದೆ ಎಂದು ತಿಳಿಸಿದೆ.

814
ವಾಯುಮಾಲಿನ್ಯ ನಿಯಮ ಕಟ್ಟುನಿಟ್ಟು

ವಾಯುಮಾಲಿನ್ಯ ನಿಯಮ ಕಟ್ಟುನಿಟ್ಟು

ವಾಹನಗಳಿಂದ ಆಗುವ ವಾಯುಮಾಲಿನ್ಯವನ್ನು ನಿಯಂತ್ರಣ ಮಾಡಲು ಏಪ್ರಿಲ್‌ 1 ರಿಂದ ಕಟ್ಟಿನಿಟ್ಟಿನ ಎಮಿಷನ್‌ ನಿಯಮ 'ಭಾರತ್‌ ಸ್ಟೇಜ್‌-7' ಅಂದರೆ ಬಿಎಸ್‌-7 ಜಾರಿಯಾಗಲಿದೆ. 2019ರ ಏಪ್ರಿಲ್‌ 1 ರಿಂದ ಭಾರತ್‌ ಸ್ಟೇಜ್‌-6 ಅಂದರೆ ಬಿಎಸ್‌-6 ಇಂಜಿನ್‌ ನಿಯಮಗಳು ಜಾರಿಯಾಗಿದ್ದವು.
 

914
ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆ

ಕ್ರಿಕೆಟ್‌ನಲ್ಲಿ ದೊಡ್ಡ ಬದಲಾವಣೆ

ಐಪಿಎಲ್‌ನಲ್ಲಿ ಕ್ಯಾಪ್ಟನ್‌ ಆಗಿ ವಿರಾಟ್‌ ಕೊಹ್ಲಿ ವಾಪಾಸ್‌ ಆಗಲಿದ್ದಾರೆ. ಆರ್‌ಸಿಬಿಯನ್ನು ಅವರು ಮುನ್ನಡೆಸಲಿದ್ದಾರೆ. ಇಲ್ಲಿಯವರೆಗೂ ಆರ್‌ಸಿಬಿಗೆ ಫಾಪ್‌ ಡು ಪ್ಲೆಸಿಸ್‌ ಕ್ಯಾಪ್ಟನ್‌ ಆಗಿದ್ದರು. ಇನ್ನು ಟೆಸ್ಟ್‌ ಕ್ರಿಕೆಟ್‌ಗೆ ರೋಹಿತ್‌ ಶರ್ಮ ವಿದಾಯ ಹೇಳುವ ಸಾಧ್ಯತೆ ಇದೆ. ಬಾರ್ಡರ್‌ಗವಾಸ್ಕರ್‌ ಟೆಸ್ಟ್‌ ಸರಣಿಯ ಸಿಡ್ನಿ ಟೆಸ್ಟ್‌ ಬಳಿಕ ರೋಹಿತ್‌ ಶರ್ಮ ವಿದಾಯ ಹೇಳಿದ್ದಾರೆ ಎಂದು ವರದಿಯಾಗಿದೆ.
 

1014
5-8ನೇ ತರಗತಿಯಲ್ಲಿ ಫೇಲ್‌ ಆದರೆ ಪ್ರಮೋಟ್‌ ಇರಲ್ಲ

5-8ನೇ ತರಗತಿಯಲ್ಲಿ ಫೇಲ್‌ ಆದರೆ ಪ್ರಮೋಟ್‌ ಇರಲ್ಲ

ಕೇಂದ್ರ ಸರ್ಕಾರ ನೋ ಡಿಟೆಂನ್ಶನ್‌ ಪಾಲಿಸಿಯನ್ನು ಅಂತ್ಯ ಮಾಡಿದೆ. ಇದರಿಂದಾಗಿ 5 ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಫೇಲ್‌ ಆದಲ್ಲಿ ಅವರನ್ನು ಮುಂದಿನ ತರಗತಿಗೆ ಪ್ರಮೋಟ್‌ ಮಾಡಲಾಗುವುದಿಲ್ಲ. ಅವರಿಗೆ 2 ತಿಂಗಳ ಅವಧಿಯಲ್ಲಿ ಇನ್ನೊಂದು ಪರೀಕ್ಷೆ ನಡೆಸಿ ಪಾಸ್‌ ಆಗುವ ಅವಕಾಶ ನೀಡಲಾಗುತ್ತದೆ. ಇಲ್ಲಿಯವರೆಗೂ 10ನೇ ತರಗತಿಯವರೆಗೆ ವಿದ್ಯಾರ್ಥಿಗಳು ಫೇಲ್‌ ಆದರೂ ಮುಂದಿನ ತರಗತಿಗೆ ಹೋಗುವ ಅವಕಾಶವಿತ್ತು.

1114
16 ವರ್ಷವಾದರೆ ಮಾತ್ರ ಕೋಚಿಂಗ್‌ ಕ್ಲಾಸ್‌ಗೆ ಎಂಟ್ರಿ

16 ವರ್ಷವಾದರೆ ಮಾತ್ರ ಕೋಚಿಂಗ್‌ ಕ್ಲಾಸ್‌ಗೆ ಎಂಟ್ರಿ

ನೀಟ್‌, ಜೆಇಇ ಕೋಚಿಂಗ್‌ ಕ್ಲಾಸ್‌ಗಳಲ್ಲಿ ವಿದ್ಯಾರ್ಥಿಗಳ ಸಾಲು ಸಾಲು ಆತ್ಮಹತ್ಯೆ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಕೋಚಿಂಗ್‌ ಕ್ಲಾಸ್‌ಗೆ ಸೇರಿಸಲು ನಿರ್ಬಂಧ ಹೇರಿದೆ. ಇಲ್ಲಿಯವರೆಗೂ ಇದಕ್ಕೆ ನಿಯಮಗಳು ಇದ್ದಿರಲಿಲ್ಲ. ಈ ವರ್ಷ ಅದು ಜಾರಿಯಾಗಲಿದೆ.
 

1214
ಭಾರತದಲ್ಲಿದ್ದು ವಿದೇಶದ ಡಿಗ್ರಿ

ಭಾರತದಲ್ಲಿದ್ದು ವಿದೇಶದ ಡಿಗ್ರಿ

ಭಾರತದಲ್ಲಿಯೇ ಇದ್ದು ವಿದೇಶದ ವಿಶ್ವವಿದ್ಯಾನಿಲಯಗಳ ಡಿಗ್ರಿ ಪಡೆದುಕೊಳ್ಳಲು ಸಾಧ್ಯವಾಗಲಿದೆ. ಭಾರತೀಯ ಹಾಗೂ ವಿದೇಶಿ ವಿವಿಗಳು ಇದಕ್ಕಾಗಿ ಕೋರ್ಸ್‌ ಆರಂಭ ಮಾಡಲಿದೆ. ಇದಕ್ಕಾಗಿ ಅಧ್ಯಯನ ಫಿಸಿಕಲ್‌ ಕ್ಲಾಸ್‌ ರೂಮ್‌ನಲ್ಲಿ ಆಗಲಿದೆ. ಇಲ್ಲಿಯವರೆಗೂ ವಿದೇಶಿ ವಿವಿಗಳ ಡಿಗ್ರಿ ಪಡೆಯಲು ವಿದೇಶಕ್ಕೆ ಹೋಗಬೇಕಾಗಿತ್ತು.

Rule Change: ಎಲ್‌ಪಿಜಿಯಿಂದ ಪಿಂಚಣಿವರೆಗೆ.. ಹೊಸ ವರ್ಷದಿಂದ ಆಗಲಿದೆ ಈ ಬದಲಾವಣೆಗಳು!

1314
ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ

ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ

ಸಿಐಎಸ್‌ಎಫ್‌ ಹಾಗೂ ಬಿಎಸ್‌ಎಫ್‌ನಲ್ಲಿ ಮಾಜಿ ಅಗ್ನಿವೀರರಿಗೆ ಶೇ. 10ರಷ್ಟು ಮೀಸಲಾತಿ ಇರಲಿದೆ. ಫಿಸಿಕಲ್‌ ಟೆಸ್ಟ್‌ ಹಾಗೂ ವಯೋಮಿತಿಯಲ್ಲೂ ಸಡಿಲಿಕೆ ನೀಡಲಾಗಿದೆ.ಇಲ್ಲಿಯವರೆಗೂ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರವೇ ಸೇನೆಯಲ್ಲಿ ಶಾಶ್ವತ ಸರ್ವೀಸ್‌ ನೀಡುವ ಅವಕಾಶವಿತ್ತು.

Union Budget 2025: ವಾರ್ಷಿಕ 15 ಲಕ್ಷ ವೇತನದ ಉದ್ಯೋಗಿಗಳಿಗೆ ಇರೋದಿಲ್ಲ ಆದಾಯ ತೆರಿಗೆ?

1414
ಈ ಬದಲಾವಣೆಗಳೂ ಆಗಬಹುದು

ಈ ಬದಲಾವಣೆಗಳೂ ಆಗಬಹುದು

ಆದಾಯ ತೆರಿಗೆ, ಆಮದು-ರಫ್ತು ತೆರಿಗೆಯಲ್ಲಿ ಬದಲಾವಣೆಗಳು ಫೆಬ್ರವರಿ 1 ರಂದು ಆಗಲಿರುವ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಏಪ್ರಿಲ್‌ 1 ರಿಂದ ಈ ನಿಯಮಗಳು ಜಾರಿಯಾಗಲಿದೆ. ಇನ್ನು, ಜನವರಿ, ಏಪ್ರಿಲ್‌, ಜುಲೈ ಹಾಗೂ ಅಕ್ಟೋಬರ್‌ನ ಮೊದಲ ದಿನದಂದು ನೀಡಲಾಗುವ ಸಣ್ಣ ಉಳಿತಾಯದ ಬಡ್ಡಿಯಲ್ಲಿ ಏರಿಳಿತವಾಗಬಹುದು.
 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ನರೇಂದ್ರ ಮೋದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved