ಅನಿಲ್ ಅಂಬಾನಿಗಾಗಿ ಮತ್ತೊಮ್ಮೆ ತೆರೆಯ್ತು ಕುಬೇರನ ಬಾಗಿಲು: 180 ದಿನಗಳಲ್ಲಿ ಶೇ.50 ವೇಗದಲ್ಲಿ ವೃದ್ಧಿ
ರಿಲಯನ್ಸ್ ಪವರ್, ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಗಳಲ್ಲಿ ಗಮನಾರ್ಹ ಏರಿಕೆ. ರಿಲಯನ್ಸ್ ಪವರ್ ಷೇರುಗಳು ಶೇ.19 ರಷ್ಟು ಏರಿಕೆಯಾಗಿ ರೂ.53 ಕ್ಕೆ ತಲುಪಿವೆ. ಕಂಪನಿಗಳ ದೃಢ ನಿರ್ಧಾರಗಳು ಮತ್ತು ಹೊಸ ಯೋಜನೆಗಳು ಈ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಶುಕ್ರವಾರ ಷೇರು ಮಾರುಕಟ್ಟೆಯಲ್ಲಿ ಅನಿಲ್ ಅಂಬಾನಿ ನೇತೃತ್ವದ ADAG ಗ್ರೂಪ್‌ನ ರಿಲಯನ್ಸ್ ಪವರ್, ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಂಡು ಬಂದಿದೆ. ಮೂರು ಕಂಪನಿಗಳಲ್ಲಿ ರಿಲಯನ್ಸ್ ಪವರ್ ಮಂಚೂಣಿಯಲ್ಲಿದ್ದು, ಒಂದೇ ದಿನ ಷೇರುಗಳ ಬೆಲೆ ಶೇ.19ರಷ್ಟು ಏರಿಕೆ ಕಂಡು ಬಂದಿದೆ.
ಒಂದೇ ದಿನ ಶೇ.19ರಷ್ಟು ಏರಿಕೆ ಕಂಡು ಬಂದಿದ್ದರಿಂದ ಅನಿಲ್ ಅಂಬಾನಿ ಕಂಪನಿಯ ಹೂಡಿಕೆದಾರರು ನಿಟ್ಟುಸಿರು ಬಿಟ್ಟಿದ್ದಾರೆ. ಷೇರುಗಳ ಮೌಲ್ಯ ಎಷ್ಟಿದೆ ಎಂಬುದರ ಕುರಿತು ನೋಡೋಣ ಬನ್ನಿ.
ರಿಲಯನ್ಸ್ ಪವರ್ ಷೇರುಗಳು ಶೇ.19 ರಷ್ಟು ಏರಿಕೆಯಾಗಿ ರೂ.53 ಕ್ಕೆ ತಲುಪಿವೆ. ರಿಲಯನ್ಸ್ ಹೋಮ್ ಫೈನಾನ್ಸ್ ಷೇರುಗಳು ಶೇ.10 ರಷ್ಟು ಏರಿಕೆಯಾಗಿ ರೂ.3.64 ಮತ್ತುರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಷೇರುಗಳು ಶೇ. 10.5 ರಷ್ಟು ಜಿಗಿದು ರೂ. 313 ಕ್ಕೆ ತಲುಪಿವೆ. ಕಂಪನಿಗಳು ತೆಗೆದುಕೊಂಡ ದೃಢ ನಿರ್ಧಾರಗಳಿಂದ ಷೇರುಗಳ ಬೆಲೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸುತ್ತಿದ್ದಾರೆ.
ಈ ಹಿಂದೆ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಎರಡೂ ಕಂಪನಿಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದವು. ಇದೀಗ ರಿಲಯನ್ಸ್ ಪವರ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ ಕಾರ್ಯತಂತ್ರ, ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಯೋಜನೆಗಳು ಮಾರುಕಟ್ಟೆಗೆ ಹೊಸ ವಿಶ್ವಾಸವನ್ನು ನೀಡುತ್ತಿವೆ. ರಿಲಯನ್ಸ್ ಪವರ್ ವಿದ್ಯುತ್ ಉತ್ಪಾದನೆಯಿಂದಿಗೆ ಇಂಧನ ಉತ್ಪಾದಕನಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ.
ರಿಲಯನ್ಸ್ ಅಂಗಸಂಸ್ಥೆ NU ಸನ್‌ಟೆಕ್ 930 MW ಸೌರಶಕ್ತಿ ಮತ್ತು 1860 MWh ಬ್ಯಾಟರಿ ಸಂಗ್ರಹಣೆಗಾಗಿ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಸುಮಾರು 10,000 ಕೋಟಿ ರೂ. ಮೌಲ್ಯದ ಈ ಯೋಜನೆಯಾಗಿದ್ದು, ಏಷ್ಯಾದ ಅತಿದೊಡ್ಡ ಸೌರ ಮತ್ತು ಸಂಗ್ರಹಣಾ ಘಟಕವಾಗಲಿದೆ. NU ಎನರ್ಜಿಸ್ 350 MW ಸೌರ + 700 MWh ಶೇಖರಣಾ ಯೋಜನೆಯನ್ನು ಸಹ ಸ್ವಾಧೀನಪಡಿಸಿಕೊಂಡಿದೆ. ಭೂತಾನ ಸರ್ಕಾರದೊಂದಿಗೆ 500 ಮೆಗಾವ್ಯಾಟ್ ಸೌರ ಯೋಜನೆಯ ಟರ್ಮ್ ಶೀಟ್‌ಗೆ ಸಹಿ ಹಾಕಲಾಗಿದೆ. 2,000 ಕೋಟಿ ರೂಪಾಯಿಗಳ ಈ ಜಂಟಿ ಉದ್ಯಮವು ಭೂತಾನಿನಲ್ಲಿ ಇದುವರೆಗಿನ ಅತಿದೊಡ್ಡ ಖಾಸಗಿ ವಿದೇಶಿ ಹೂಡಿಕೆಯಾಗಿದೆ.
ರಿಲಯನ್ಸ್ ಪವರ್ ಮಾರ್ಚ್ ತ್ರೈಮಾಸಿಕದಲ್ಲಿ 126 ಕೋಟಿ ರೂಪಾಯಿ ಗಳಿಸಿದೆ ಎಂದು ವರದಿಯಾಗಿದೆ. ಕಳೆದ ವರ್ಷ ಇದೇ ಕಂಪನಿ 397 ಕೋಟಿ ರೂಪಾಯಿ ನಷ್ಟವನ್ನು ಅನುಭವಿಸಿತ್ತು. ಇನ್ನು ಮೇ ತಿಂಗಳಲ್ಲಿ ರಿಲಯನ್ಸ್ ಪವರ್ 392 ಕೋಟಿ ರೂ. ಬಂಡವಾಳ ಸಂಗ್ರಹಿಸಿದೆ.
Disclaimer: ಯಾವುದೇ ವ್ಯವಹಾರವು ಮಾರುಕಟ್ಟೆಯ ಅಪಾಯವನ್ನು ಒಳಗೊಂಡಿರುತ್ತವೆ. ಷೇರು ಮಾರುಕಟ್ಟೆಯಲ್ಲಿನ ಹೂಡಿಕೆಯೂ ಸಹ ಮಾರುಕಟ್ಟೆ ಅಪಾಯಗಳಿಗೆ ಒಳಪಟ್ಟಿರುತ್ತದೆ. ಆದ್ದರಿಂದ ಯಾವುದೇ ಹೂಡಿಕೆ ಮಾಡುವ ಮುನ್ನ ಆರ್ಥಿಕ/ಮಾರುಕಟ್ಟೆ ತಜ್ಞರ ಸಲಹೆ ಪಡೆದುಕೊಳ್ಳಬೇಕು. ಓದುಗರು ಇದನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.