ಕೇವಲ ₹189ಕ್ಕೆ ಅನ್‌ಲಿಮಿಟೆಡ್ ಕರೆ, 2ಜಿಬಿ ಡೇಟಾ, 28 ದಿನ ಸೇರಿ ಜಿಯೋ ಭರ್ಜರಿ ಆಫರ್
ಜಿಯೋ ಇದೀಗ ಹೊಸ ಆಫರ್ ಘೋಷಿಸಿದೆ. ಕಳೆದ ಹಲವು ತಿಂಗಳಿನಿಂದ ಸ್ಥಗಿತಗೊಳಿಸಿದ್ದ ಈ ಆಫರ್ ಮತ್ತೆ ಹೊಸ ರೂಪದಲ್ಲಿ ಲಾಂಚ್ ಆಗಿದೆ. ಈ ಬಾರಿ ಅನ್‌ಲಿಮಿಟೆಡ್ ಕರೆ, 28 ದಿನ ವ್ಯಾಲಿಟಿಡಿ, 2ಜಿಬಿ ಡೇಟಾ, ಜಿಯೋ ಟಿವಿ ಸೇರಿದಂತೆ ಕೆಲ ವಿಶೇಷ ಆ್ಯಕ್ಸೆಸ್ ಸೌಲಭ್ಯ ಈ ಪ್ಲಾನ್‌ನಲ್ಲಿದೆ.

ಭಾರತದ ಟೆಲಿಕಾಂ ಕಂಪನಿಗಳು ಭಾರಿ ಪೈಪೋಟಿ ಎದುರಿಸುತ್ತಿದೆ. ಇದರ ಜೊತೆಗೆ ಟ್ರಾಯ್ ನಿಯಮಗಳು ಕಟ್ಟು ನಿಟ್ಟಾಗುತ್ತಿದೆ. ಹೀಗಾಗಿ ಜಿಯೋ, ಎರ್ಟೆಲ್, ವಿಐ, ಬಿಎಸ್‌ಎನ್ಎಲ್ ಸೇರಿದಂತೆ ಟೆಲಿಕಾಂ ಸರ್ವೀಸ್ ಪ್ರೊವೈಡರ್ ಹೊಸ ಹೊಸ ಪ್ಲಾನ್ ಘೋಷಿಸುತ್ತಿದೆ. ಈ ಪೈಕಿ ರಿಲಯನ್ಸ್ ಜಿಯೋ ಇದೀಗ ಹಲವು ದಿನಗಳಿಂದ ಸ್ಥಗಿತಗೊಳಿಸಿದ್ದ ಕೇವಲ 189 ರೂಪಾಯಿ ಪ್ಲಾನ್ ಮತ್ತೆ ಘೋಷಿಸಿದೆ.
ಈ ಬಾರಿ ಜಿಯೋ 189 ರೂಪಾಯಿ ರೀಚಾರ್ಜ್ ಪ್ಲಾನ್ ಹಲವು ವಿಶೇಷ ಸೌಲಭ್ಯ ಒದಗಿಸುತ್ತಿದೆ. ಈ ಮೂಲಕ ಗ್ರಾಹಕರಿಗೆ ಒಂದು ತಿಂಗಳ ವ್ಯಾಲಿಟಿಡಿ ಜೊತೆಗೆ ಡೇಟಾ, ಕರೆ, ಎಸ್ಎಂಎಸ್ ಸೇರಿದಂತೆ ಹಲವು ಆಫರ್ ನೀಡಲಾಗಿದೆ. ಈ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗ್ರಾಹಕರ ಸೌಲಭ್ಯಕ್ಕೆ ಅನಗುಣುವಾಗಿ ನೀಡಲಾಗಿದೆ.
ಟ್ರಾಯ್ ನಿರ್ದೇಶನದಂತೆ ವಾಯ್ಸ್ ಹಾಗೂ ಎಸ್ಎಂಎಸ್ ಪ್ಲಾನ್‌ಗಳನ್ನು ಎಲ್ಲಾ ಟೆಲಿಕಾಂ ಕಂಪನಿಗಳು ನೀಡಿದೆ. ಈ ಪೈಕಿ ಜಿಯೋ ಒಂದೆರೆಡು ಹೆಜ್ಜೆ ಮುಂದೆ ಹೋಗಿದೆ. ಹೊಸ ಪ್ಲಾನ್ ಮೂಲಕ ಜಿಯೋ ಗ್ರಾಹಕರಿಕೆ ಬಂಪರ್ ಆಫರ್ ಘೋಷಿಸಿದೆ. 189 ರೂಪಾಯಿ ಪ್ಲಾನ್ ಅಡಿಯಲ್ಲಿ ಯಾವ ಸೌಲಭ್ಯಗಳು ಗ್ರಾಹಕರಿಗೆ ಸಿಗಲಿದೆ. ಈ ಕೆಳೆಗಿದೆ ನೋಡಿ.
189 ರೂಪಾಯಿ ಜಿಯೋ ರೀಚಾರ್ಜ್ ಪ್ಲಾನ್
28 ದಿನದ ವ್ಯಾಲಿಟಿಡಿ ಸೌಲಭ್ಯ
ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ
300 ಎಸ್ಎಂಎಸ್ ಉಚಿತ
2ಜಿಬಿ ಹೈಸ್ಪೀಡ್ ಡೇಟಾ(ಮುಗಿದ ಬಳಿಕ ಸ್ಪೀಡ್ 64Kbpsಗೆ ಇಳಿಕೆ)
ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಆ್ಯಕ್ಸೆಸ್
ಸದ್ಯ ಜಿಯೋ ನೀಡುತ್ತಿರುವ ಕೈಗೆಟುಕುವ ಬೆಲೆಯಲ್ಲಿನ ರೀಚಾರ್ಜ್ ಪ್ಲಾನ್ ಪೈಕಿ 189 ರೂಪಾಯಿ ಕೂಡ ಸೇರಿಕೊಂಡಿದೆ. ಇದರ ಜೊತೆಗೆ ಜಿಯೋ ಇತರ ಕೆಲ ರೀಚಾರ್ಜ್ ಪ್ಲಾನ್ ಕೂಡ ನೀಡಿದೆ. ಈ ಮೂಲಕ ಗ್ರಾಹಕರಿಕೆ ಮತ್ತಷ್ಟು ಸೌಲಭ್ಯ ಒದಗಿಸುತ್ತಿದೆ. ಈ ಸಾಲಿನಲ್ಲಿ 199 ರೂಪಾಯಿ ರೀಚಾರ್ಜ್ ಪ್ಲಾನ್ ಕೂಡ ಸೇರಿಕೊಂಡಿದೆ.
ಜಿಯೋ 199 ರೂಪಾಯಿ ರೀಚಾರ್ಜ್ ಪ್ಲಾನ್ ಅಡಿಯಲ್ಲಿ ಪ್ರತಿ ದಿನ 1.5 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಡೇಟಾ ಬಳಕೆ ಮಾಡುವ ಮಂದಿಗೆ ಇದು ಸೂಕ್ತ ಪ್ಲಾನ್ ಆಗಿದೆ. ಇನ್ನು ಪ್ರತಿ ದಿನ 100 ಎಸ್ಎಂಎಸ್ ಸೇರಿದಂತೆ ಇತರ ಕೆಲ ಸಾಮಾನ್ಯ ಆಫರ್ ಕೂಡ ಈ ಪ್ಲಾನ್ ಅಡಿಯಲ್ಲಿ ಲಭ್ಯವಿದೆ. ಜೊತೆಗೆ 18 ದಿನದ ವ್ಯಾಲಿಟಿಡಿ ನೀಡಲಿದೆ.