ಜಿಯೋ ಬಂಪರ್, ತಿಂಗಳಿಗೆ 160 ರೂ.ನಂತೆ 84 ದಿನ ವ್ಯಾಲಿಟಿಡಿ, ಉಚಿತ ಕರೆ- ಡೇಟಾ ಪ್ಲಾನ್!
ಬಿಎಸ್ಎನ್ಎಲ್, ಏರ್ಟೆಲ್, ವಿಐ ಆಫರ್ ನಡುವೆ ಇದೀಗ ಜಿಯೋ ಬಂಪರ್ ಆಫರ್ ಘೋಷಿಸಿದೆ. ಇದು 84 ದಿನ ವ್ಯಾಲಿಟಿಡಿ ಹೊಂದಿರಲಿದೆ. ಜೊತೆಗೆ ಉಚಿತ ಡೇಟಾ, ಉಚಿತ ಕರೆ, 1,000 SMS ಸೇರಿದಂತೆ ಹಲವು ಸೌಲಭ್ಯಗಳು ಈ ಪ್ಲಾನ್‌ನಲ್ಲಿದೆ.
ರಿಲಯನ್ಸ್ ಜಿಯೋ ಹಲವು ವ್ಯಾಲಿಡಿಟಿ, ಉಚಿತ ಕರೆ, ಡೇಟಾ, ಉಚಿತ ಒಟಿಟಿ ಪ್ಲಾಟ್‌ಫಾರ್ಮ್ ಪ್ಲಾನ್ ಘೋಷಿಸಿದೆ. ಈ ಪೈಕಿ 84 ದಿನ ಅಂದರೆ ಸರಿಸುಮಾರು 3 ತಿಂಗಳ ವ್ಯಾಲಿಟಿಡಿ ಪ್ಲಾನ್ ಘೋಷಿಸಿದೆ. ತಿಂಗಳಿಗೆ ಕೇವಲ 160 ರೂಪಾಯಿಯಿಂದ ಪಾವತಿಸಿದರೆ ಅನಿಯಮಿತ ಕರೆ, ಉಚಿತ ಡೇಟಾ ಸೇರಿದಂತೆ ಹಲವು ಸೌಲಭ್ಯಗಳು ಈ ಪ್ಲಾನ್ನಲ್ಲಿ ಲಭ್ಯವಾಗಲಿದೆ.
ಜಿಯೋ 84 ದಿನ ಪ್ಲಾನ್ ರೀಚಾರ್ಜ್ ಬೆಲೆ 479 ರೂಪಾಯಿ. ಅಂದರೆ ಪ್ರತಿ ತಿಂಗಳು 160 ರೂಪಾಯಿ ಖರ್ಚು ಮಾಡಿದಂತೆ. ಕರೆ, ಡೇಟಾ ಜೊತೆಗೆ ಜಿಯೋ ಟಿವಿ, ಸಿನಿಮಾ ಸೇರಿದಂತೆ ಹಲವು ಇತರ ಸೌಲಭ್ಯಗಳು ಈ ಪ್ಲಾನ್‌ನಲ್ಲಿ ಗ್ರಾಹಕರಿಗೆ ಸಿಗಲಿದೆ. ಈ ಬಜೆಡ್ ಫ್ರೆಂಡ್ಲಿ ರೀಚಾರ್ಜ್ ಪ್ಲಾನ್‌ನಲ್ಲಿ ಸಿಗುವ ಸೌಲಭ್ಯಗಳ ವಿವರ ಇಲ್ಲಿದೆ.
479 ರೂಪಾಯಿ ರೀಚಾರ್ಜ್ ಪ್ಲಾನ್‌ನಲ್ಲಿ ಜಿಯೋ, ಗ್ರಾಹಕರಿಗೆ ಅನ್‌ಲಿಮಿಟೆಡ್ ಕಾಲ್ ಸೇವೆ ನೀಡಲಿದೆ. ಇದು ಸ್ಥಳೀಯ ಹಾಗೂ ಎಸ್‌ಟಿಡಿ ಎಲ್ಲವೂ ಹಾಗೂ ಯಾವುದೇ ನೆಟ್‌ವರ್ಕ್‌ಗೆ ಉಚಿತವಾಗಿ ಕರೆ ಮಾಡುಲ ಅವಕಾಶ ಕಲ್ಪಿಸಲಿದೆ. ಇದು ಮುಖ್ಯವಾಗಿ ಕರೆ ಹಾಗೂ ವ್ಯಾಲಿಟಿಡಿಗಾಗಿ ಮಾಡಿದ ಪ್ಲಾನ್. ಹೀಗಾಗಿ ಇಲ್ಲಿ ಒಟ್ಟು 6 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಉಚಿತ ಡೇಟಾ ಮುಗಿದ ಬಳಿಕ ಸ್ಪೀಡ್ 64 Kbps ಇಳಿಕೆಯಾಗಲಿದೆ.
84 ದಿನ ಅವಧಿಯಲ್ಲಿ 1,000 ಎಸ್ಎಂಎಸ್ ಉಚಿತವಾಗಿ ಸಿಗಲಿದೆ. ಇದರ ಜೊತೆಗೆ ಉಚಿತ ಜಿಯೋ ಆ್ಯಪ್ ಆಕ್ಸೆಸ್, ಜಿಯೋ ಟಿವಿ, ಜಿಯೋ ಸಿನಿಮಾ(ನಾನ್ ಪ್ರೀಮಿಯಂ) ಹಾಗೂ ಜಿಯೋ ಕ್ಲೌಡ್ ಸೇವೆ ಲಭ್ಯವಾಗಲಿದೆ. ಜಿಯೋ ಆ್ಯಪ್, ಜಿಯೋ ಪೋರ್ಟಲ್ ಮೂಲಕ ಈ 84 ದಿನದ ವ್ಯಾಲಿಟಿಡಿ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು.
ಜಿಯೋ 84 ದಿನ ವ್ಯಾಲಿಟಿಡಿ ಪ್ಲಾನ್‌ನಲ್ಲಿ ಹೆಚ್ಚಿನ ಡೇಟಾ ಬಳಕೆ ಮಾಡುವ ಗ್ರಾಹಕರಿಗೆ ಹೊಸ ಪ್ಲಾನ್ ಜಿಯೋ ಘೋಷಿಸಿದೆ. 1029 ರೂಪಾಯಿ ರೀಚಾರ್ಜ್ ಮಾಡಿಕೊಂಡಲ್ಲಿ, 84 ದಿನ ವ್ಯಾಲಿಡಿಟಿ ಹಾಗೂ 168 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. ಪ್ರತಿ ದಿನ 2 ಜಿಬಿ ಡೇಟಾ ಬಳಕೆ ಮಾಡಬಹುದು. ನಿಗದಿತಿ ಮಿತಿ ಮುಗಿದರೆ ಡೇಟಾ ಸ್ಪೀಡ್ 64 Kbps ಪಡೆದುಕೊಳ್ಳಲಿದೆ.
ಈ ಪ್ಲಾನ್‌ನಲ್ಲೂ ಅನ್‌ಲಿಮಿಟೆಡ್ ಕರೆ, ಪ್ರತಿ ದಿನ 100 ಎಸ್ಎಂಎಸ್, ಜಿಯೋ ಸಿನಿಮಾ, ಜಿಯೋ ಟಿವಿ,ಜಿಯೋ ಕ್ಲೌಡ್ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಲಿದೆ. ಪ್ರತಿಸ್ಪರ್ಧಿಗಳಿಗೆ ಠಕ್ಕರ್ ನೀಡಲು ಜಿಯೋ ಹಲವು ಆಫರ್ ಘೋಷಿಸಿದೆ. ಇದೀಗ ಹೊಸ ವರ್ಷಕ್ಕೆ ಮತ್ತಷ್ಟು ಆಫರ್ ಘೋಷಿಸಲು ಜಿಯೋ ಸಜ್ಜಾಗಿದೆ.