200 ರೂಪಾಯಿ ನೋಟುಗಳು ವಾಪಾಸ್? ಸ್ಪಷ್ಟನೆ ನೀಡಿದ ಆರ್‌ಬಿಐ
ಜನವರಿ ಮಧ್ಯದಲ್ಲಿ ದೊಡ್ಡ ಸುದ್ದಿ ಬಂದಿದೆ. 2000 ರೂಪಾಯಿ ನೋಟಿನ ನಂತರ, 200 ರೂಪಾಯಿ ನೋಟು ರದ್ದಾಗಲಿದೆ ಎನ್ನುವ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಲ್ಲಾ 200 ರೂಪಾಯಿ ನೋಟುಗಳನ್ನು ಮಾರುಕಟ್ಟೆಯಿಂದ ಹಿಂಪಡೆಯಬಹುದು ಎಂದು ವರದಿಗಳು ತಿಳಿಸಿದ್ದು, ಈ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟನೆಯನ್ನೂ ನೀಡಿದೆ.
ಭಾರತದ ಮಾರುಕಟ್ಟೆಯಲ್ಲಿ ಅತ್ಯತ ಹೆಚ್ಚು ಚಲಾವಣೆ ಆಗುವ ನೋಟುಗಳು 500 ರೂಪಾಯಿ ಹಾಗೂ 200 ರೂಪಾಯಿ ನೋಟುಗು. ಬಹುತೇಕ ಎಲ್ಲರ ಜೇಬಿನಲ್ಲಿ 200 ರೂಪಾಯಿ ನೋಟು ಇರುತ್ತದೆ.
ಮೋದಿ ಸರ್ಕಾರ ಈ ಪ್ರಸ್ತುತ ನೋಟನ್ನು ರದ್ದುಗೊಳಿಸಲಿದೆಯೇ? ರಿಸರ್ವ್ ಬ್ಯಾಂಕ್ ಇದ್ದಕ್ಕಿದ್ದಂತೆ ದೊಡ್ಡ ಅಪ್‌ಡೇಟ್‌ಅನ್ನು ನೀಡಿದೆ. ಈ ಬಗ್ಗೆ ನೋಟಿಫಿಕೇಶನ್‌ಅನ್ನು ನೀಡಿದೆ. ನೋಟಿಫಿಕೇಶ್‌ನಲ್ಲಿ ಇರೋದನು ಅನ್ನೋದನ್ನು ತಿಳಿದರೆ ನಿಮಗೆ ಅಚ್ಚರಿಯಾಗೋದು ಖಂಡಿತ.
2000 ರೂಪಾಯಿ ನೋಟುಗಳನ್ನು ವಾಪಾಸ್ ಪಡೆದುಕೊಂಡ ನಂತರ, ದೇಶದಲ್ಲಿ 200 ಮತ್ತು 500 ರೂಪಾಯಿ ನಕಲಿ ನೋಟುಗಳು ನಿರಂತರವಾಗಿ ಹೆಚ್ಚುತ್ತಿವೆ ಎಂದು ಆರ್‌ಬಿಐ ಹೇಳಿದೆ. ವಹಿವಾಟಿನ ಸಮಯದಲ್ಲಿ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.
ನಿಜವಾದ ನೋಟನ್ನು ಹೀಗೆ ಗುರುತಿಸಿ: ನೋಟಿನ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ಬರೆಯಲಾದ 200 ರೂ., ಮಧ್ಯದಲ್ಲಿ ಮಹಾತ್ಮ ಗಾಂಧಿಯವರ ಸ್ಪಷ್ಟ ಚಿತ್ರ, ಸೂಕ್ಷ್ಮ ಅಕ್ಷರಗಳಲ್ಲಿ 'RBI', 'ಭಾರತ್', 'ಇಂಡಿಯಾ' ಮತ್ತು '200', ಬಲಭಾಗದಲ್ಲಿ ಅಶೋಕ ಸ್ತಂಭದ ಚಿಹ್ನೆ ಇರಬೇಕು.
₹500ರ ನಕಲಿ ನೋಟು ಗುರುತಿಸುವುದು ಹೇಗೆ? ಇಲ್ಲಿದೆ ಆರ್‌ಬಿಐ ಮಾರ್ಗಸೂಚಿ
ನಕಲಿ ನೋಟುಗಳ ಹರಡುವಿಕೆಯನ್ನು ತಡೆಗಟ್ಟಲು, ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರು ಜಾಗರೂಕರಾಗಿರಬೇಕು ಎಂದು ಒತ್ತಾಯಿಸಿದೆ. ವಹಿವಾಟಿನ ಸಮಯದಲ್ಲಿ ನೋಟುಗಳನ್ನು ಸರಿಯಾಗಿ ಪರಿಶೀಲಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಯಾರಾದರೂ ನಕಲಿ ನೋಟು ಪಡೆದರೆ, ತಕ್ಷಣವೇ ಸ್ಥಳೀಯ ಆಡಳಿತ ಅಥವಾ ಸಂಬಂಧಪಟ್ಟ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲು ಸೂಚಿಸಲಾಗಿದೆ. ಅದರೊಂದಿಗೆ 200 ರೂಪಾಯಿ ನೋಟನ್ನು ವಾಪಾಸ್ ಪಡೆದುಕೊಳ್ಳುವ ಯಾವುದೇ ಉದ್ದೇಶವಿಲ್ಲ ಎಂದೂ ಆರ್‌ಬಿಐ ತಿಳಿಸಿದೆ.
ಕರ್ನಾಟಕದ ಬೆಳಗಾವಿಯ ಬ್ಯಾಂಕ್ ಸೇರಿದಂತೆ ದೇಶದ 4 ಸಹಕಾರಿ ಬ್ಯಾಂಕ್‌ಗಳಿಗೆ ಆರ್‌ಬಿಐನಿಂದ ದಂಡ!