ರತನ್ ಟಾಟಾ ಹುಡುಕಿ ಬಂದಿದ್ದ ಪ್ರಶಸ್ತಿಗಳು ಅಗಣಿತ: ಸಾಧಕನಿಗೆ ಪದ್ಮವಿಭೂಷಣ ಸೇರಿ ಹಲವು ಗೌರವ!
ವಿದೇಶಿ ನೆಲದಲ್ಲೂ ಭಾರತದ ಪುತ್ರ ರತನ್ ಟಾಟಾರಿಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಟಾಟಾ ಹಲವು ವಿದೇಶಿ ಸಂಸ್ಥೆಗಳೊಂದಿಗೆ ಸ್ನೇಹಯುತ ಸಂಬಂಧ ಹೊಂದಿದ್ದರು. ಉದ್ಯಮ ವಲಯದಲ್ಲಿ ರತನ್‌ರ ಸಾಧನೆ ಕಂಡು ಹಲವು ಪ್ರತಿಷ್ಠಿತ ಸಂಸ್ಥೆಗಳು ಅವರನ್ನು ತಮ್ಮ ಹಲವು ಸಮಿತಿಗಳಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸಿದ್ದವು.
ರತನ್ ಟಾಟಾರವರು ಪ್ರಧಾನಮಂತ್ರಿ ನೇತೃತ್ವದ ವಾಣಿಜ್ಯ ಮತ್ತು ಕೈಗಾರಿಕಾ ಸಮಿತಿಯ ಸದಸ್ಯರಾಗಿದ್ದರು. ಉದ್ಯಮ ವಲಯದಲ್ಲಿನ ಅಮೋಘ ಸೇವೆ ಗುರುತಿಸಿ ರತನ್‌ರಿಗೆ ದೇಶ ವಿದೇಶಗಳಿಂದ ಅನೇಕ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ.
-2000ರ ಜನವರಿ 26ರ ಗಣರಾಜ್ಯೋತ್ಸವದಂದು ಭಾರತದ 3ನೇ ಉನ್ನತ ನಾಗರಿಕ ಪ್ರಶಸ್ತಿ ಪದ್ಮಭೂಷಣ ಪ್ರದಾನ. -2008ರಲ್ಲಿ ಭಾರತ ಸರ್ಕಾರದಿಂದ 2ನೇ ದೊಡ್ಡ ನಾಗರಿಕ ಪ್ರಶಸ್ತಿ ಪದ್ಮವಿಭೂಷಣಕ್ಕೆ ಭಾಜನ. -2004ರಲ್ಲಿ ಚೀನಾ ದೇಶದಿಂದ ಗೌರವಾನ್ವಿತ ಆರ್ಥಿಕ ಸಲಹೆಗಾರ ಪ್ರಶಸ್ತಿ.
-2004ರಲ್ಲಿ ಬಂಡವಾಳ ಕ್ಷೇತ್ರದಲ್ಲಿ ನಿರ್ವಹಿಸುವ ಜವಾಬ್ದಾರಿಯುತ ಸೇವೆಗಾಗಿ ನೀಡುವ ಲಂಡನ್‌ನ ‘ಫಸ್ಟ್’ ಪ್ರಶಸ್ತಿ. -2006ರಲ್ಲಿ ಅಮೆರಿಕದ ಕಾರ್ನೆಲ್ ವಿವಿ ಸಹಕಾರ ಕ್ಷೇತ್ರದಲ್ಲಿ ನೀಡುವ ರಾಬರ್ಟ್ ಹಾಟ್‌ಫೀಲ್ಡ್ ಫೆಲೋಶಿಪ್ ಗೌರವ. -2007ರ ನವೆಂಬರ್‌ನ ಫಾರ್ಚೂನ್ ಮ್ಯಾಗಝೀನ್‌ನಲ್ಲಿ ವಿಶ್ವದ 25 ಅತಿ ಬಲಾಢ್ಯ ವಾಣಿಜ್ಯೋದ್ಯಮಿಗಳ ಪಟ್ಟಿಯಲ್ಲಿ ಸ್ಥಾನ.
-2008ರ ಮೇನಲ್ಲಿ ಇನ್ನೊಂದು ವಿಶ್ವ ಪತ್ರಿಕೆ ಟೈಂ ಮ್ಯಾಗಝೀನ್‌ನಲ್ಲಿ ಆ ವರ್ಷದ ವಿಶ್ವದ 100 ಹೆಚ್ಚು ಪ್ರಭಾವಿ ಜನರ ಪಟ್ಟಿಯಲ್ಲಿ ಸ್ಥಾನ (ನ್ಯಾನೋ ಕಾರು ಉತ್ಪಾದನೆಗಾಗಿ ಪರಿಗಣನೆ) -2008ರಲ್ಲಿ ಹೈಟೆಕ್ ವಲಯದ ಸೇವೆಗಾಗಿ ಸಿಂಗಪುರ ಸರ್ಕಾರದಿಂದ ಗೌರವಾನ್ವಿತ ಪೌರತ್ವ ಸ್ಥಾನ. (ಈ ಪ್ರಶಸ್ತಿ ಸ್ವೀಕರಿಸಿದ ಮೊದಲ ಭಾರತೀಯ). -2009ರಲ್ಲಿ ಬ್ರಿಟನ್‌ನಿಂದ ಪ್ರತಿಷ್ಠಿತ ‘ನೈಟ್ ಕಮಾಂಡರ್ ಆಫ್ ದ ಬ್ರಿಟಿಷ್ ಎಂಪೈರ್’ ಪ್ರಶಸ್ತಿ. (ಈ ಪ್ರಶಸ್ತಿ ಪಡೆದವರ ಹೆಸರಿನ ಹಿಂದೆ ಗೌರವವಾಗಿ ‘ಸರ್’ ಎಂಬ ಪದವನ್ನು ಪ್ರಯೋಗಿಸಲಾಗುತ್ತದೆ.)
-ಇದಲ್ಲದೇ ಓಹಿಯೋ ದೇಶದ ಸಂಶೋಧನಾ ವಿವಿ, ಬ್ಯಾಂಕಾಕ್‌ನ ಏಷಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಹಾಗೂ ಇಂಗ್ಲೆಂಡ್‌ನ ವಾರ್‌ವಿಕ್ ವಿವಿಗಳಿಂದ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ. - ರತನ್ ಟಾಟಾ ಜಗತ್ತಿನ 30 ಅತ್ಯಂತ ಪ್ರಭಾವಿ ವಾಣಿಜ್ಯೋದ್ಯಮಿಗಳಲ್ಲಿ ಒಬ್ಬರೆಂದು ಇಂಗ್ಲೆಂಡ್ ಮೂಲದ ಇ-ಮ್ಯಾಗಝೀನ್ ಕಾಂಟ್ರಾಕ್ಟ್ ಜನರಲ್ ಮಾಡಿದ ಸರ್ವೆಯಿಂದ ತಿಳಿಯುತ್ತದೆ.
ಹಲವು ವಿದೇಶಿ ಉದ್ಯಮ ಸಂಸ್ಥೆಗಳು, ವಿವಿಗಳಿಂದಲೂ ರತನ್‌ಗೆ ಗೌರವ: ವಿದೇಶಿ ನೆಲದಲ್ಲೂ ಭಾರತದ ಪುತ್ರ ರತನ್ ಟಾಟಾರಿಗೆ ಉನ್ನತ ಸ್ಥಾನಮಾನ ನೀಡಲಾಗಿತ್ತು. ಟಾಟಾ ಹಲವು ವಿದೇಶಿ ಸಂಸ್ಥೆಗಳೊಂದಿಗೆ ಸ್ನೇಹಯುತ ಸಂಬಂಧ ಹೊಂದಿದ್ದರು. ಉದ್ಯಮ ವಲಯದಲ್ಲಿ ರತನ್‌ರ ಸಾಧನೆ ಕಂಡು ಹಲವು ಪ್ರತಿಷ್ಠಿತ ಸಂಸ್ಥೆಗಳು ಅವರನ್ನು ತಮ್ಮ ಹಲವು ಸಮಿತಿಗಳಲ್ಲಿ ಉನ್ನತ ಸ್ಥಾನ ನೀಡಿ ಗೌರವಿಸಿದ್ದವು. ರತನ್ ಟಾಟಾ ಕೆಲವು ಉನ್ನತ ವಿದೇಶಿ ಸಂಸ್ಥೆಗಳ ಅಂತರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸದಸ್ಯರಾಗಿ ಗೌರವಿಸಲ್ಪಟ್ಟಿದ್ದರು. ಅವೆಂದರೆ..
- ಜಪಾನಿನ ಮಿಟ್ಸುಬಿಷಿ ಕಾರ್ಪೊರೇಷನ್, - ಅಮೆರಿಕದ ಇನ್ಯೂರೆನ್ಸ್ ಸಂಸ್ಥೆಯಾದ ಅಮೆರಿಕನ್ ಇಂಟರ್‌ನ್ಯಾಷನಲ್ ಗ್ರೂಪ್, - ವಿಶ್ವದ ಅತಿ ಹಳೆಯ ಹಣಕಾಸು ವಿಲೇವಾರಿ ಸಂಸ್ಥೆ ಹಾಗೂ - ಬೂಝ್ ಅಲೆನ್ ಹ್ಯಾಮಿಲ್ಟನ್ ಕನ್ಸಲ್ಟಿಂಗ್ ಸಂಸ್ಥೆ.
ಇದಲ್ಲದೇ ರತನ್ ಟಾಟಾರವರು ಯೂನಿವರ್ಸಿಟ್ ಆಫ್ ಸದರ್ನ್ ಕ್ಯಾಲಿಫೋರ್ನಿಯಾ (2005ರಲ್ಲಿ), ಪ್ರತಿಷ್ಠಿತ ಆಲ್ಮಾ ಮ್ಯಾಟರ್ ಶಿಕ್ಷಣ ಸಮೂಹ ಹಾಗೂ ನ್ಯೂಯಾರ್ಕ್‌ನ ಕಾರ್ನೆಲ್ ಯೂನಿವರ್ಸಿಟಿಗಳಂತಹ ಅತ್ಯುನ್ನತ ವಿವಿಗಳ ಮಂಡಳಿಗಳಲ್ಲಿ ಗೌರವಾನ್ವಿತ ಟ್ರಸ್ಟೀ ಆಗಿದ್ದರು. ಅಷ್ಟೇ ಅಲ್ಲ ಸೌತ್ ಆಫ್ರಿಕಾ ಗಣರಾಜ್ಯದ ಅಂತರಾಷ್ಟ್ರೀಯ ಬಂಡವಾಳ ಸಮಿತಿ ಸದಸ್ಯ ಹಾಗೂ ನ್ಯೂಯಾರ್ಕ್ ಷೇರು ವಿನಿಮಯ ಕೇಂದ್ರದ ಏಷ್ಯಾ ಪೆಸಿಫಿಕ್ ಭಾಗದ ಸಲಹಾ ಸಮಿತಿ ಸದಸ್ಯರಾಗಿದ್ದರು.