ಸಿಂಪಲ್ ಆದ್ರೂ ಗ್ಲಾಮರಸ್ ಆಗಿದ್ದಾರೆ ಅಂಬಾನಿ ಸೊಸೆ ಶ್ಲೋಕಾ, ಇಲ್ಲಿವೆ ವಿಶೇಷ ಚಿತ್ರಗಳು!
ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ಮುಕೆಶ್ ಅಂಬಾಣಿ ಹಾಗೂ ನೀತಾ ಅಂಬಾನಿ ಹಿರಿಯ ಮಗ ಆಕಾಶ್ ಅಂಬಾನಿಯ ಮದುವೆ ಶ್ಲೋಕಾ ಮೆಹ್ತಾ ಜೊತೆ 2019ರ ಜೊತೆ ಮಾರ್ಚ್ 9ರಂದು ನಡೆದಿದೆ. ಶ್ಲೋಕಾ ಮೆಹ್ತಾ ದೇಶದ ಪ್ರಸಿದ್ಧ ವಜ್ರ ವ್ಯಾಪಾರಿ ರಸೇಲ್ ಮೆಹ್ತಾರ ಮಗಳು. ಅಂಬಾನಿ ಹಾಗೂ ಮೆಹ್ತಾ ಕುಟುಂಬದ ನಡುವೆ ಈ ಹಿಂದೆ ವ್ಯಾಪಾರದ ಸಂಬಂಧವಿತ್ತು. ಹೀಗಾಗಿ ಪರಸ್ಪರ ಭೇಟಿ ಸಾಮಾನ್ಯವಾಗಿತ್ತು. ಆಕಾಶ್ ಅಂಬಾನಿಯಂತೆ ಶ್ಲೋಕಾ ಶಿಕ್ಷಣ ವಿದೇಶದಲ್ಲಿ ಪಡದಿದ್ದಾರೆ. ಅವರು ಸಾಮಾಜಿಕ ಕಾರ್ಯಗಳಿಂದಲೂ ಗುರುತಿಸಿಕೊಂಡಿದ್ದಾರೆ. ಇನ್ನು ಅಂಬಾನಿ ಕುಟುಂಬದ ಸೊಸೆಯಾದಾಗಿನಿಂದ ಶ್ಲೋಕಾ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿರುತ್ತಾರೆ. ಕೆಲ ಸಮಯದ ಹಿಂದೆ ಶ್ಲೋಕಾ ಕೆಂಪು ಬಣ್ಣದ ಬಟ್ಟೆಯಲ್ಲಿ ಕಂಡು ಬಂದಿದ್ದರು. ಈ ಫೋಟೋ ಭಾರೀ ವೈರಲ್ ಆಗಿತ್ತು. ಇದರಲ್ಲಿ ಅವರು ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣುತ್ತಿದ್ದರು. ಇಲ್ಲಿದೆ ನೋಡಿ ಶ್ಲೋಕಾರ ಕೆಲ ವಿಶೇಷ ಫೋಟೋಗಳು.
ಈ ಫೋಟೋದಲ್ಲಿ ಶ್ಲೋಕ ಕೆಂಪು ಬಣ್ಣದ ಶಾರ್ಟ್ ಫ್ಲೋರಲ್ ಬಟ್ಟೆ ಧರಿಸಿದ್ದಾರೆ. ಇನ್ನು ಅನಾಮಿಕ ಖನ್ನಾ ಡಿಸೈನ್ ಮಾಡಿದ್ದಾರೆ. ಈ ವನ್ ಶೋಲ್ಡರ್ ಲೆಸ್ ಡ್ರೆಸ್‌ನಲ್ಲಿ ಹಿಂಬದಿಯಲ್ಲಿ ಬ್ಲೋ ಟ್ರೆಲ್ ಹಾಕಲಾಗಿದೆ. ಇದರೊಂದಿಗೆ ಅವರು ತಮ್ಮ ಕೂದಲನ್ನು ಬಿಟ್ಟಿದ್ದಾರೆ. ಇದರೊಂದಿಗೆ ಅವರು ವಜ್ರದ ಕಿವಿಯೋಲೆ ಹಾಕಿಕೊಂಡಿದ್ದಾರೆ.
ಶ್ಲೋಕಾರ ಈ ಫೋಟೋಳನ್ನು ಅವರ ಮೇಕಪ್ ಆರ್ಟಿಸ್ಟ್ ಪ್ರಿಯಾಂಕಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಸೆಲೆಬ್ರಿಟಿ ಆರ್ಟಿಸ್ಟ್ ಓಜಸ್ ರಜನಿ ಕೂಡಾ ಶ್ಲೋಕಾರ ಕೆಲ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದರೊಂದಿಗೆ ಸುಂದರಿ ಶ್ಲೋಕಾ ತುಂಬಾ ವಿನಯವಂತರೂ ಎಂದು ಬರೆದಿದ್ದಾರೆ.
ಗಂಡ ಆಕಾಶ್ ಅಂಬಾನಿ ಜೊತೆ ಶ್ಲೋಕಾ ಮೆಹ್ತಾ ಸಾಂಪ್ರದಾಯಿಕ ಉಡುಗೆಯಲ್ಲಿ. ಶ್ಲೋಕ ಪಾಶ್ಚಾತ್ಯ ಉಡುಪು ಧರಿಸುವುದು ಬಹಳ ವಿರಳ.
ಕಾರ್ಯಕ್ರಮವೊಂದರಲ್ಲಿ ಪತಿ ಆಕಾಶ್ ಅಂಬಾನಿ ಜೊತೆ ಶ್ಲೋಕಾ. ಇಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಕೂಡಾ ಇದ್ದಾರೆ. ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಶ್ಲೋಕಾರ ಗೆಳೆತಿಯರೂ ಹೌದು.
ಗಂಡನೊಂದಿಗೆ ಶ್ಲೋಕಾ ಔಂಟಿಂಗ್‌ಗೆ ಹೊರಟಿರುವುದು. ಇದು ಶ್ಲೋಕಾ ಹಾಗೂ ಆಕಾಶ್ ಅಂಬಾನಿಯ ಸ್ಪೆಷಲ್ ಫೋಟೋ ಆಗಿದೆ.
ಪತಿ ಜೊತೆ ಕ್ರಿಕೆಟ್ ವೀಕ್ಷಿಸುತ್ತಿರುವ ಶ್ಲೋಕಾ
ಶ್ಲೋಕಾರ ಪ್ರತಿಯೊಂದೂ ಬಟ್ಟೆಯೂ ವಿಶೇಷವಾಗಿ ಡಿಸೈನಿಂಗ್ ಮಾಡಲಾಗುತ್ತದೆ.
ಶ್ಲೋಕಾರ ಮೇಕಪ್ ಆರ್ಟಿಸ್ಟ್ ಪ್ರಿಯಾಂಕಾ ಈ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
ಶ್ಲೋಕಾರ ನಗು ಬಹಳ ಆಕರ್ಷಣೀಯವಾಗಿದೆ.