5 ವರ್ಷದೊಳಗೆ 8 ರಾಜ್ಯಗಳಲ್ಲಿ 75 ಸಾವಿರ ಕೋಟಿ ಹೂಡಿಕೆ ನಮ್ಮ ಗುರಿ: ಮುಕೇಶ್ ಅಂಬಾನಿ
ಮುಕೇಶ್ ಅಂಬಾನಿಯವರು ಮುಂದಿನ ಐದು ವರ್ಷಗಳಲ್ಲಿ ದೇಶದ 8 ರಾಜ್ಯಗಳಲ್ಲಿ ₹75,000 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಈ ಹೂಡಿಕೆಯು 25 ಲಕ್ಷಕ್ಕೂ ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಈ ಪ್ರದೇಶದ ಜನರ ಜೀವನ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

75 ಸಾವಿರ ಹೂಡಿಕೆ
ದೇಶದ ನಂಬರ್ ಒನ್ ಶ್ರೀಮಂತ ಉದ್ದಿಮಿಯಾಗಿರುವ ಮುಕೇಶ್ ಅಂಬಾನಿ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ ನಾವು ದೇಶದ ಈ ರಾಜ್ಯಗಳಲ್ಲಿ 75 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದೇವೆ. ಈ ಸಂಬಂಧ ರಾಜ್ಯದ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
2025ರ ಹೂಡಿಕೆದಾರರ ಶೃಂಗಸಭೆ
ರಿಲಯನ್ಸ್ ಸಮೂಹದ ಟೆಲಿಕಾಂ ಸಂಸ್ಥೆ ಜಯೋ ಸುಮಾರು 50 ಲಕ್ಷ ಬಳಕೆದಾರರನ್ನು ಹೊಂದಿದೆ. 5G ಸೇವೆಯನ್ನು ಸಹ ರಿಲಯನ್ಸ್ ಜಿಯೋ ನೀಡುತ್ತಿದೆ. ಈ ಮೂಲಕ ದೇಶದ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿದೆ. 2025ರ ಹೂಡಿಕೆದಾರರ ಶೃಂಗಸಭೆಯಲ್ಲಿ ಭಾಗಿಯಾಗಿದ್ದ ಮುಕೇಶ್ ಅಂಬಾನಿ, ಜಿಯೋ ಈಗಾಗಲೇ 50 ಲಕ್ಷಕ್ಕೂ ಹೆಚ್ಚು 5G ಚಂದಾದಾರರೊಂದಿಗೆ ಶೇ.90 ಜನತೆಗೆ ಸೇವೆಯನ್ನು ನೀಡಿದೆ ಎಂದು ಹೇಳಿದ್ದಾರೆ.
ಈಶಾನ್ಯ ರಾಜ್ಯಗಳಲ್ಲಿ ಹೂಡಿಕೆ
ರಿಲಯನ್ ಇಂಡಸ್ಟ್ರೀಸ್ ಲಿಮಿಟೆಡ್ ಕಳೆದ 40 ವರ್ಷಗಳಲ್ಲಿ ಭಾರತದ ಈಶಾನ್ಯ ರಾಜ್ಯಗಳಲ್ಲಿ ಸುಮಾರು 30 ಸಾವಿರ ಕೋಟಿ ರೂ. ಹೂಡಿಕೆ ಮಾಡಿದೆ. ಮುಂದಿನ ಐದು ವರ್ಷಗಳಲ್ಲಿ ನಮ್ಮ ಹೂಡಿಕೆಯನ್ನು ದ್ವಿಗುಣಗೊಳಿಸಲಾಗುವುದು. ಈಶಾನ್ಯ ರಾಜ್ಯಗಳಲ್ಲಿ 75 ಸಾವಿರ ಹೂಡಿಕೆ ಮಾಡುವುದು ನಮ್ಮ ಗುರಿಯಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.
25 ಲಕ್ಷಕ್ಕೂ ಅಧಿಕ ಉದ್ಯೋಗವಕಾಶ
ಈ ಹೂಡಿಕೆ ನೇರ ಮತ್ತು ಪರೋಕ್ಷವಾಗಿ 25 ಲಕ್ಷಕ್ಕೂ ಅಧಿಕ ಉದ್ಯೋಗವಕಾಶಗಳನ್ನು ಸೃಷ್ಟಿಸಲಿದೆ. ಈಶಾನ್ಯ ರಾಜ್ಯಗಳ 45 ಮಿಲಿಯನ್ ಜನರ ಜೀವನಮಟ್ಟವನ್ನು ಹೂಡಿಕೆ ಸುಧಾರಿಸಲಿದೆ. ಈಶಾನ್ಯ ರಾಜ್ಯಗಳ ಜನತೆಗೆ ಅತ್ಯುತ್ತಮ ಕ್ಯಾನ್ಸರ್ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ಮುಕೇಶ್ ಅಂಬಾನಿ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳು
ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ , ಸಿಕ್ಕಿಂ ಮತ್ತು ತ್ರಿಪುರ. ಈ ಆರು ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಹೂಡಿಕೆ ಸಂಬಂಧ ರಿಲಯನ್ಸ್ ಮಾತುಕತೆ ನಡೆಸುತ್ತಿದೆ.