ಫಿಎಫ್ ನಿಯಮದಲ್ಲಿ ಮಹತ್ವದ ಬದಲಾವಣೆ, ಪ್ರತಿ ಉದ್ಯೋಗಿಗಳು ತಿಳಿದುಕೊಳ್ಳಿ ರೂಲ್ಸ್
ವೇತನ ಪಡೆಯುವ ಉದ್ಯೋಗಿಳಿಗೆ ಪಿಎಫ್ ಖಾತೆ ಅತ್ಯಂತ ಪ್ರಮುಖ. ಕೊನೆಯದಾಗಿ ಉಳಿಯುವ ಉಳಿತಾಯ ಮೊತ್ತ ಇದು ಮಾತ್ರ. ಆದರೆ ಪಿಎಫ್ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಪ್ರಾವಿಡೆಂಟ್ ಫಂಡ್‌ನ ವೈಯಕ್ತಿಕ ಮಾಹಿತಿ ಅಪ್‌ಡೇಟ್ ನಿಯಮಗಳಲ್ಲಿ ದೊಡ್ಡ ಬದಲಾವಣೆ.ಹೊಸ ನಿಯಮದ ಪ್ರಕಾರ, ಉದ್ಯೋಗಿಗಳು ತಮ್ಮ ಡೇಟಾವನ್ನು ತಾವೇ ಬದಲಾಯಿಸಬಹುದು.
ಪ್ರಾವಿಡೆಂಟ್ ಫಂಡ್ ಖಾತೆಯನ್ನು ಹೇಗೆ ಅಪ್‌ಡೇಟ್ ಮಾಡುವುದು ಎಂದು ತಿಳಿಯಿರಿ. ಸುಲಭ ವಿಧಾನ ಇಲ್ಲಿದೆ. ಮೊದಲಿಗೆ ನೀವು ಇಪಿಎಫ್‌ಒದ ಯುನಿಫೈಡ್ ಮೆಂಬರ್ ಪೋರ್ಟಲ್‌ಗೆ ಭೇಟಿ ನೀಡಿ ಬದಲಾವಣೆ ಮಾಡಿಕೊಳ್ಳಬಹುದು.
ಅಲ್ಲಿ ಯುಎಎನ್ ಸಂಖ್ಯೆ, ಪಾಸ್‌ವರ್ಡ್ ಮತ್ತು ಕ್ಯಾಪ್ಚಾ ನಮೂದಿಸಿ ಲಾಗಿನ್ ಮಾಡಿ.
ಲಾಗಿನ್ ಯಶಸ್ವಿಯಾದರೆ ಡ್ಯಾಶ್‌ಬೋರ್ಡ್ ತೆರೆಯುತ್ತದೆ. ಅಲ್ಲಿ ನೀವು 'ಮ್ಯಾನೇಜ್' ಆಯ್ಕೆಯನ್ನು ಕಾಣಬಹುದು.
'ಮ್ಯಾನೇಜ್' ಆಯ್ಕೆಯಲ್ಲಿ 'Modify Basic Details' ಮೇಲೆ ಕ್ಲಿಕ್ ಮಾಡಿ.
ನಂತರ ನಿಮ್ಮ ವೈಯಕ್ತಿಕ ಮಾಹಿತಿಯನ್ನು ನಮೂದಿಸಿ ಮತ್ತು ಸಲ್ಲಿಸಿ.
ಪ್ರೊಫೈಲ್ ಅಪ್‌ಡೇಟ್ ವಿಭಾಗದಲ್ಲಿ, 'Track Request' ಆಯ್ಕೆಗೆ ಹೋಗಿ ಅಪ್‌ಡೇಟ್ ಸ್ಥಿತಿ ತಿಳಿಯಿರಿ.
ಈ ಸುಲಭ ವಿಧಾನಗಳನ್ನು ಅನುಸರಿಸಿ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುಲಭವಾಗಿ ಬದಲಾಯಿಸಬಹುದು. ಬದಲಾಯಿಸುವಾಗ ಜಾಗರೂಕತೆ ವಹಿಸುವುದು ಅತ್ಯಗತ್ಯ. ಹೀಗಾಗಿ ಅಪ್‌ಡೇಟ್ ಮಾಡುವ ಮೊದಲು ಎರಡು ಬಾರಿ ಪರಿಶೀಲಿಸಿ.