ಭಾರತದ ಅತೀ ಶ್ರೀಮಂತರ ಮದುವೆಯ ನೆಚ್ಚಿನ ತಾಣ ಅಂಬಾನಿ ಜಿಯೋ ವರ್ಲ್ಡ್ ಸೆಂಟರ್; ದಿನದ ಬಾಡಿಗೆಯೆಷ್ಟು?
ಮುಕೇಶ್ ಅಂಬಾನಿಯವರ ಹೊಸ ಜಿಯೋ ವರ್ಲ್ಡ್ ಸೆಂಟರ್ ಅತಿ ಶ್ರೀಮಂತರ ನೆಚ್ಚಿನ ಮದುವೆಯ ಸ್ಥಳವಾಗಿದೆ. ಇದು ಒಂದು ದಿನದ ಬಾಡಿಗೆ ಎಷ್ಟು? ಇಲ್ಲಿರುವ ಐಷಾರಾಮಿ ಸೌಲಭ್ಯಗಳೇನು ಇಲ್ಲಿದೆ ಮಾಹಿತಿ.
90 ಶತಕೋಟಿಗೂ ಹೆಚ್ಚು ಆಸ್ತಿಯನ್ನು ಹೊಂದಿರುವ ಮುಕೇಶ್ ಅಂಬಾನಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಭಾರತದ ಅತಿದೊಡ್ಡ ಕಂಪನಿಗಳಲ್ಲಿ ಒಂದಾದ ರಿಲಯನ್ಸ್ ಇಂಡಸ್ಟ್ರೀಸ್‌ನ್ನು ಮುನ್ನಡೆಸುತ್ತಿದ್ದಾರೆ. ಹಲವು ಬ್ರ್ಯಾಂಡ್‌ಗಳು ರಿಲಯನ್ಸ್ ಇಂಡಸ್ಟ್ರೀಸ್ ಹೆಸರಲ್ಲಿ ಕೋಟಿ ಕೋಟಿ ಗಳಿಸುತ್ತಿವೆ.
ಮಾರ್ಚ್ 6ರಂದು ಜಿಯೋ ವರ್ಲ್ಡ್ ಸೆಂಟರ್‌ನಲ್ಲಿ ಧೀರೂಭಾಯಿ ಅಂಬಾನಿ ಸ್ಕ್ವೇರ್‌ನ್ನು ನೀತಾ ಅಂಬಾನಿ ಉದ್ಘಾಟಿಸಿದರು. ಜಿಯೋ ವರ್ಲ್ಡ್ ಗಾರ್ಡನ್ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿದೆ.
ಇದು ಐದು ಲಕ್ಷ ಚದರ ಅಡಿ ಭೂಮಿಯಲ್ಲಿ ಹರಡಿದೆ, ಇದು ಭಾರತದ ಅತಿದೊಡ್ಡ ಸಮಾವೇಶ ಕೇಂದ್ರವಾಗಿದೆ. ಜಿಯೋ ಉದ್ಯಾನವು ಒಂದು ಐಷಾರಾಮಿ ತಾಣವಾಗಿದ್ದು, ಎಲ್ಲಾ ಅಗತ್ಯ ಸೌಕರ್ಯಗಳನ್ನು ಒಳಗೊಂಡಿದೆ.
ಎಕನಾಮಿಕ್ ಟೈಮ್ಸ್‌ನ ವರದಿಯ ಪ್ರಕಾರ ಈ ಉದ್ಯಾನವು ಅಂತರಾಷ್ಟ್ರೀಯ ಸಮಾವೇಶ ಕೇಂದ್ರ, ಹೋಟೆಲ್‌ಗಳು, ಐಷಾರಾಮಿ ಮಾಲ್ ಸೇರಿದಂತೆ ಎರಡು ಮಾಲ್‌ಗಳು, ಪ್ರದರ್ಶನ ಕಲಾ ಥಿಯೇಟರ್ ಮತ್ತು ಮೇಲ್ಛಾವಣಿಯ ಡ್ರೈವ್-ಇನ್ ಚಲನಚಿತ್ರ ಥಿಯೇಟರ್ ಮತ್ತು ವಾಣಿಜ್ಯ ಕಚೇರಿಗಳನ್ನು ಹೊಂದಿದೆ.
ಜಿಯೋ ವರ್ಲ್ಡ್ ಸೆಂಟರ್‌ನ ಅಧಿಕೃತ ವೆಬ್‌ಸೈಟ್ ಪ್ರಕಾರ, ಇಡೀ ಉದ್ಯಾನವನ್ನು ವೈ-ಫೈ ಸಕ್ರಿಯಗೊಳಿಸಲಾಗಿದೆ. ಉದ್ಯಾನವು ಒಂದು ಸಮಯದಲ್ಲಿ 2,000 ಕಾರುಗಳು ಮತ್ತು SUV ಗಳಿಗೆ ಅವಕಾಶ ಕಲ್ಪಿಸುವ ಪಾರ್ಕಿಂಗ್ ಸ್ಥಳವನ್ನು ಹೊಂದಿದೆ.
ಈ ಜಿಯೋ ವರ್ಲ್ಡ್ ಗಾರ್ಡನ್‌ನ ಒಂದು ದಿನದ ಬಾಡಿಗೆ ವೆಚ್ಚ ಬರೋಬ್ಬರಿ 15 ಲಕ್ಷ ರೂ. ಆಗಿದೆ. ಇವೆಂಟ್ ಇಲ್ಲದ ದಿನದಂದು ಈ ಗಾರ್ಡನ್ ಸಂದರ್ಶಕರಿಗಾಗಿ ತೆರೆದಿರುತ್ತದೆ. 10 ರೂಪಾಯಿಗಳ ಅತೀ ಕಡಿಮೆ ಶುಲ್ಕವನ್ನು ಪಾವತಿಸಿ ಜನರು ಈ ಗಾರ್ಡನ್‌ನ್ನು ನೋಡಬಹುದು.