Trump-Ambani Alliance: ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮುಕೇಶ್ ಅಂಬಾನಿ ಮಹತ್ವದ ಬಿಸಿನೆಸ್ ಡೀಲ್
ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಇದೀಗ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಜೊತೆ ಮಹತ್ವದ ಬಿಸಿನೆಸ್ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಮೂಲಕ ಇಬ್ಬರು ಬಿಸಿನೆಸ್ ಪಾರ್ಟ್ನರ್ ಆಗಿ ಹೊರಹೊಮ್ಮಿದ್ದಾರೆ. ಇದು ಎಷ್ಟು ಕೋಟಿ ರೂಪಾಯಿ ಡೀಲ್?

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹಾಗೂ ಭಾರತದ ಉದ್ಯಮಿ ಮುಕೇಶ್ ಅಂಬಾನಿ ಇದೀಗ ಬ್ಯೂಸಿನೆಸ್ ಪಾರ್ಟ್ನರ್. ಹೌದು, ಮಹತ್ವದ ಒಪ್ಪಂದಲ್ಲಿ ಅಂಬಾನಿ ಇದೀಗ ಟ್ರಂಪ್ ಕಂಪನಿ ಜೊತೆಗೆ ಪಾಲುದಾರಿಕೆ ಮಾಡಿದ್ದಾರೆ. ಹೌದು, ಮುಕೇಶ್ ಅಂಬಾನಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಇದೀಗ ಹೊಸ ಅಧ್ಯಾಯ ಆರಂಭಿಸಿದ್ದಾರೆ. ಡೋನಾಲ್ಡ್ ಟ್ರಂಪ್ ಅವರ ರಿಯಲ್ ಎಸ್ಟೇಟ್ ಕಂಪನಿ ಜೊತೆ ಪಾಲುದಾರಿಕೆ ಮಾಡಿಕೊಂಡಿರುವ ಮುಕೇಶ್ ಅಂಬಾನಿಯ ರಿಲಯನ್ಸ್ 4IR ರಿಯಾಲಿಟಿ ಡೆವಲಪ್‌ಮೆಂಟ್ ಕಂಪನಿ ಭಾರಿ ಹೂಡಿಕೆ ಮಾಡುತ್ತಿದೆ.
ಟ್ರಂಪ್ ರಿಯಲ್ ಎಸ್ಟೇಟ್ ಕಂಪನಿಗೆ ಡೆವಲಪ್‌ಮೆಂಟ್ ಶುಲ್ಕವಾಗಿ ಬರೋಬ್ಬರಿ 10 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಪಾವತಿಸಿದ್ದಾರೆ. ಮುಕೇಶ್ ಅಂಬಾನಿ ಹಾಗೂ ಟ್ರಂಪ್ ರಿಲಯಲ್ ಎಸ್ಟೇಟ್ ಉದ್ಯಮ ಪಾಲುದಾರಿಕೆ ಕುರಿತು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಈ ಮೂಲಕ ಟ್ರಂಪ್ ಹಾಗೂ ಅಂಬಾನಿ ಪಾರ್ಟ್ನರ್‌ಶಿಪ್ ಇದೀಗ ವಿಶ್ವದ ಪ್ರಮುಖ ಉದ್ಯಮಿಗಳ ಪಟ್ಟಿಯಲ್ಲಿ ದಾಖಲಾಗಿದೆ.
ಟ್ರಂಪ್ ಹಾಗೂ ಅಂಬಾನಿ ರಿಯಲ್ ಎಸ್ಟೇಟ್ ಹೂಡಿಕೆ ಮೂಲಕ ಮುಂಬೈ, ಅಮೆರಿಕ, ವಿಯೆಟ್ನಾಂ, ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವೆಡೆ ಯೋಜನೆ ರೂಪಿಸಲಿದೆ. ವಿವಿಧ ರಾಷ್ಟ್ರಗಳಲ್ಲಿ ಹೂಡಿಕೆ ಮಾಡಲಿದೆ. ಈಗಾಗಲೇ ಟ್ರಂಪ್ 44.6 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತವನ್ನು ಹೂಡಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಅಂಬಾನಿ ಕೂಡ ಟ್ರಂಪ್ ಜೊತೆ ಕೈಜೋಡಿಸಿದ್ದಾರೆ.
ಮುಂಬೈನಲ್ಲಿ ಅಂಬಾನಿ ಹಾಗೂ ಟ್ರಂಪ್ ಯಾವ ಯೋಜನೆ ರೂಪಿಸಿದ್ದಾರೆ? ಹೂಡಿಕೆ ಎಷ್ಟು ಮಾಡಲಿದ್ದಾರೆ ಅನ್ನೋ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಇತ್ತೀಚೆಗೆ ಖತಾರ್‌ನಲ್ಲಿ ನಡೆದ ಎಕಾನಾಮಿಕ್ ಫೋರಂನಲ್ಲಿ ಟ್ರಂಪ್ ರಿಯಲ್ ಎಸ್ಟೇಟ್ ಉದ್ಯಮ ವಿಸ್ತರಣೆ ಕುರಿತು ಮಾತಾಡಿದ್ದರು. ಟ್ರಂಪ್ ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಉದ್ಯಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅಂಬಾನಿ ಜೊತೆ ಸೇರಿ ತಮ್ಮ ಸಾಮ್ರಾಜ್ಯ ವಿಸ್ತರಿಸಿದ್ದಾರೆ.
ಡೋನಾಲ್ಡ್ ಟ್ರಂಪ್ ತಮ್ಮ ಉದ್ಯಮ ಸಾಮ್ರಾಜ್ಯವನ್ನು ಸಹೋದರ್ ಏರಿಕ್ ಜೊತೆ ಸೇರಿ ನಡೆಸುತ್ತಿದ್ದಾರೆ. ಡೊನಾಲ್ಡ್ ಟ್ರಂಪ್ ಜೂನಿಯರ್ ಕೂಡ ಈ ಉದ್ಯಮದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇತ್ತ ಮುಕೇಶ್ ಅಂಬಾನಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಉದ್ಯಮನ್ನು ವಿಸ್ತರಿಸುತ್ತಿದ್ದಾರೆ.