ಅಂಬಾನಿ ಜಿಯೋ ಘೋಷಣೆಗೆ ಹಲವರು ಶಾಕ್, ದಿನ 2ಜಿಬಿ ಡೇಟಾ, ಫ್ರಿ ಚಾನೆಲ್ ಸೇರಿ ಹಲವು ಆಫರ್
ಮುಕೇಶ್ ಅಂಬಾನಿ ಆಫರ್‌ಗೆ ಪ್ರತಿಸ್ಪರ್ಧಿಗಳು ಶಾಕ್ ಆಗಿದ್ದಾರೆ. ಕಾರಣ ಹೊಸ ಪ್ಲಾನ್ ಮೂಲಕ ಪ್ರತಿ ದಿನ 2ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಝೀ5, ಸೋನಿ, ಡಿಸ್ಕವರಿ ಪ್ಲಸ್ ಸೇರಿದಂತೆ ಹಲವು ಚಾನೆಲ್ ಸಬ್‌ಸ್ಕ್ರಿಪ್ಶನ್ ನೀಡಲಾಗಿದೆ. ಹೊಸ ಆಫರ್ ಕುರಿತ ಫುಲ್ ಡಿಟೇಲ್ಸ್

ರಿಲಯನ್ಸ್ ಜಿಯೋ ಹೊಸ ಹೊಸ ಪ್ಲಾನ್ ಘೋಷಣೆ ಮಾಡುತ್ತಿದೆ. ಅತೀ ಕಡಿಮೆ ಬೆಲೆಗೆ ಡೇಟಾ, ಕಾಲ್ ಸೇರಿದಂತೆ ಹಲವು ಆಫರ್ ನೀಡುತ್ತಿದೆ. ಇದೀಗ ಜಿಯೋ ಹೊಸ ಆಫರ್ ಘೋಷಿಸಿದೆ. ಈ ರೀಚಾರ್ಜ್ ಮಾಡಿದರೆ 28 ದಿನಗಳ ಕಾಲ ಪ್ರತಿ ದಿನ 2 ಜಿಬಿ 5ಜಿ ಡೇಟಾ ಸಿಗಲಿದೆ. ಇದರ ಜೊತೆಗೆ ಅನ್‌ಲಿಮಿಟೆಡ್ ಕಾಲ್ ಸೌಲಭ್ಯವೂ ಸಿಗಲಿದೆ. ಪ್ರತಿ ದಿನ 100 ಎಸ್ಎಂಎಸ್ ಉಚಿತ.

ಕೇವಲ ಕಾಲ್, ಡೇಟಾ ಮಾತ್ರವಲ್ಲ, ಈ ಪ್ಲಾನ್ ಪ್ರಮುಖವಾಗಿ ಚಾನೆಲ್ ಸಬ್‌ಸ್ಕ್ರಿಪ್ಶನ್ ಕೂಡ ನೀಡಲಿದೆ. ಸೋನಿ LIV, ZEE5, ಲಯನ್‌ಗೇಟ್ ಪ್ಲಾಟ್, ಡಿಸ್ಕವರಿ ಪ್ಲಸ್, ಸನ್ NXT, ಕಾಂಚನ್ ಲಂಕಾ, ಪ್ಲಾನೆಟ್ ಮರಾಠಿ, ಚೌಪಾಲ್, ಫ್ಯಾನ್‌ಕೋಡ್, ಜಿಯೋ ಟಿವಿ ಆ್ಯಪ್ ಮೂಲಕ ಹೊಯಿಚೊಯಿ ಚಾನೆಲ್ ಉಚಿತ ಸಬ್‌ಸ್ಕ್ರಿಪ್ಶನ್ ಸಿಗಲಿದೆ.
ಈ ಪ್ಲಾನ್ ಬೆಲೆ 445 ರೂಪಾಯಿ. ಒಂದು ತಿಂಗಳ ಕಾಲ ಅಂದರೆ 28 ದಿನ ವ್ಯಾಲಿಟಿಡಿ ಹೊಂದಿರುವ ಈ ಪ್ಲಾನ್‌ನಲ್ಲಿ ಹೈಸ್ಪೀಡ್ ಇಂಟರ್ನಟ್ ಸೇವೆ ಲಭ್ಯವಿದೆ. ಕಾಲ್, ಡೇಟಾ ಹಾಗೂ ಮನೋರಂಜನೆಗೆ ಬೇಕಿದ್ದವರು ತ್ರಿ ಇನ್ ಒನ್ ಪ್ಯಾಕ್ ಆಗಿ ಈ 445 ರೂಪಾಯಿ ರೀಚಾರ್ಜ್ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಇದು ಬಳಕೆದಾರರ ಹೊರೆ ಕಡಿಮೆ ಮಾಡಲಿದೆ.
ಹೊಸ ಪ್ಲಾನ್ ಮೂಲಕ ರಿಲಯನ್ಸ್ ಜಿಯೋ ಇದೀಗ ಗ್ರಾಹಕರಿಗೆ ಮತ್ತೆ ಭರ್ಜರಿ ಆಫರ್ ನೀಡುತ್ತಿದೆ. ಇತ್ತೀಚೆಗೆ ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆಯಿಂದ ಜಿಯೋ ಭಾರಿ ಹಿನ್ನಡೆ ಅನುಭವಿಸಿತ್ತು. ಇದರಕ್ಕೆ ಪ್ರತಿಯಾಗಿ ಹೊಸ ಹೊಸ ಆಫರ್ ನೀಡುತ್ತಿದೆ. ಈ ಪೈಕಿ 445 ರೂಪಾಯಿ ಕೂಡ ಇದೇ ರೀತಿಯ ಆಫರ್ ಆಗಿದೆ.
ಇತ್ತೀಚೆಗೆ ಟ್ರಾಯ್ ನಿರ್ದೇಶನದ ಮೇರೆಗೆ ವಾಯ್ಸ್ ಹಾಗೂ ಎಸ್ಎಂಎಸ್ ಪ್ಲಾನ್ ಕೂಡ ಜಿಯೋ ಘೋಷಿಸಿದೆ. ಈ ವಿಭಾಗದಲ್ಲಿ ಎರಡು ರೀಚಾರ್ಜ್ ಪ್ಲಾನ್ ಘೋಷಣೆ ಮಾಡಲಾಗಿದೆ. ಒಂದು 448 ರೂಪಾಯಿ ಹಾಗೂ 1748 ರೂಪಾಯಿ. ಎರಡೂ ಪ್ಲಾನ್‌ಗಳು ವಾಯ್ಸ್ ಒನ್ಲಿ ಹಾಗೂ ಎಸ್ಎಂಎಸ್ ಪ್ಲಾನ್ ಆಗಿದೆ.
448 ರೂಪಾಯಿ ಪ್ಲಾನ್ 84 ದಿನಗಳ ವ್ಯಾಲಿಟಿಡಿ ಹೊಂದಿದೆ. ಇನ್ನು 1748 ರೂಪಾಯಿ ಪ್ಲಾನ್ 336 ದಿನ ವ್ಯಾಲಿಟಿಡಿ ಹೊಂದಿದೆ. ಎರಡೂ ಪ್ಲಾನ್‌ಗಳು ಅನ್‌ಲಿಮಿಟೆಡ್ ವಾಯ್ಸ್ ಕಾಲ್ ನೀಡುತ್ತದೆ. ಇನ್ನು 448 ರೂಪಾಯಿ ಪ್ಲಾನ್‌ನಲ್ಲಿ ಒಟ್ಟು 1,000 ಎಸ್ಎಂಎಸ್ ಉಚಿತವಾಗಿದ್ದರೆ, 1748 ರೂಪಾಯಿ ಪ್ಲಾನ್‌ನಲ್ಲಿ 3,600 ಎಸ್ಎಂಎಸ್ ಪ್ಲಾನ್ ಉಚಿತವಾಗಿ ನೀಡಲಾಗಿದೆ.