ತಿಂಗಳಿಗೆ 5,10,20 ಸಾವಿರ SIP: ನೀವು ಕೋಟ್ಯಾಧಿಪತಿಗಳಾಗಲು ಎಷ್ಟು ವರ್ಷ ಬೇಕು?
ಮ್ಯೂಚುಯಲ್ ಫಂಡ್ SIPಗಳನ್ನು ಪ್ರಾರಂಭಿಸುವಾಗ ಹೂಡಿಕೆದಾರರಿಗೆ ಹಲವು ಆಯ್ಕೆಗಳಿವೆ. ಈ ಪೈಕಿ ಒಂದು ಕೋಟಿ ರುಪಾಯಿ ಗಳಿಸಲು ತಿಂಗಳಿಗೆ ಎಷ್ಟು ಸಾವಿರ ಹೂಡಿಕೆ ಮಾಡಿದರೆ, ಎಷ್ಟು ವರ್ಷಕ್ಕೆ ಕೋಟಿ ಗಳಿಸಬಹುದು ಎನ್ನುವುದನ್ನು ನೋಡೋಣ ಬನ್ನಿ
ಹಣ ಸಂಪಾದಿಸಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಸಂಪಾದಿಸಿದ ಹಣವನ್ನು ಸರಿಯಾದ ರೀತಿಯಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಹಣ ಗಳಿಸಬಹುದು. ಇತ್ತೀಚಿನ ದಿನಗಳಲ್ಲಿ ಹಣ ಹೂಡಿಕೆ ಮಾಡಲು ಹೆಚ್ಚಿನ ಜನರು ಆಯ್ಕೆ ಮಾಡಿಕೊಳ್ಳುತ್ತಿರುವ ಉತ್ತಮ ಮಾರ್ಗವೆಂದರೆ ಮ್ಯೂಚುಯಲ್ ಫಂಡ್ SIP. SIP ಅಂದರೆ ತಿಂಗಳಿಗೆ ನಿಗದಿತ ಹಣ ಹೂಡಿಕೆ ಮಾಡುವ ಯೋಜನೆ. ತುಂಬಾ ಸರಳವಾಗಿ ಹೆಚ್ಚು ನಷ್ಟವಿಲ್ಲದೆ, ತಿಂಗಳಿಗೆ ಸ್ವಲ್ಪ ಹಣ ಉಳಿಸಿ ಹೂಡಿಕೆ ಮಾಡಬಹುದು.
ಮ್ಯೂಚುಯಲ್ ಫಂಡ್ SIPಗಳನ್ನು ಪ್ರಾರಂಭಿಸುವಾಗ ಹೂಡಿಕೆದಾರರಿಗೆ ಹಲವು ಆಯ್ಕೆಗಳಿವೆ. ಅವರ ಆರ್ಥಿಕ ಗುರಿಗಳು ಮತ್ತು ಅಪಾಯ ಸಹಿಷ್ಣುತೆಯನ್ನು ಆಧರಿಸಿ, ಸಂಶೋಧನೆ ಮಾಡಿ ಉತ್ತಮವಾದದ್ದನ್ನು ಆರಿಸಿಕೊಳ್ಳುವುದು ಮುಖ್ಯ.
ಪ್ರತಿ ತಿಂಗಳು SIP ಮೂಲಕ ಹಣ ಹೂಡಿಕೆ ಮಾಡಿ ಎಷ್ಟು ಸಮಯದಲ್ಲಿ ಒಂದು ಕೋಟಿ ರೂಪಾಯಿಗಳನ್ನು ಗಳಿಸಬಹುದು ಎಂದು ಈಗ ನೋಡೋಣ.
ತಿಂಗಳಿಗೆ ರೂ.5000, ರೂ.10,000, ರೂ.20,000 ಹೀಗೆ ಮೂರು ರೀತಿಯಲ್ಲಿ SIP ಕಟ್ಟುವುದರಿಂದ ಒಂದು ಕೋಟಿ ರೂಪಾಯಿಗಳ ಗುರಿಯನ್ನು ತಲುಪಬಹುದೇ ಎಂದು ನೋಡೋಣ.
ತಿಂಗಳಿಗೆ ರೂ. 5,000 SIP ಕಟ್ಟಿದರೆ 22 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಗಳಿಸಬಹುದು. ಒಟ್ಟು ಹೂಡಿಕೆ ರೂ. 13.20 ಲಕ್ಷ.
ತಿಂಗಳಿಗೆ ರೂ. 10,000 SIP ಕಟ್ಟಿದರೆ 18 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಗಳಿಸಬಹುದು. ಒಟ್ಟು ಹೂಡಿಕೆ ರೂ. 21.60 ಲಕ್ಷ.
ತಿಂಗಳಿಗೆ ರೂ. 20,000 SIP ಕಟ್ಟಿದರೆ 14 ವರ್ಷಗಳಲ್ಲಿ ಒಂದು ಕೋಟಿ ರೂಪಾಯಿ ಗಳಿಸಬಹುದು. ಒಟ್ಟು ಹೂಡಿಕೆ ರೂ. 33.60 ಲಕ್ಷ.
ಮೇಲಿನ ಲೆಕ್ಕಾಚಾರಗಳು ಅಂದಾಜು. ನಿಮ್ಮ ಹೂಡಿಕೆಯ ಮೌಲ್ಯ ಮಾರುಕಟ್ಟೆಯ ಏರಿಳಿತಗಳನ್ನು ಅವಲಂಬಿಸಿ ಬದಲಾಗಬಹುದು.