MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ರತನ್‌ ಟಾಟಾರ ಒಡಹುಟ್ಟಿದ ತಮ್ಮನಿಗೂ ಮದುವೆಯಾಗಿಲ್ಲ, ಫೋನ್ ಕೂಡ ಬಳಸದೆ ಅತ್ಯಂತ ಸರಳ ಜೀವನ!

ರತನ್‌ ಟಾಟಾರ ಒಡಹುಟ್ಟಿದ ತಮ್ಮನಿಗೂ ಮದುವೆಯಾಗಿಲ್ಲ, ಫೋನ್ ಕೂಡ ಬಳಸದೆ ಅತ್ಯಂತ ಸರಳ ಜೀವನ!

ಟಾಟಾ ಸನ್ಸ್‌ನ ಮಾಜಿ ಅಧ್ಯಕ್ಷ ರತನ್‌ ಟಾಟಾ ಅವರು ಮದುವೆಯೇ ಆಗಿಲ್ಲ. ಹೀಗಾಗಿ ಅವರ ಮುಂದಿನ ಪೀಳಿಗೆ ಇಲ್ಲ. ಆದರೆ ಟಾಟಾ ಕುಟುಂಬದ ಜೊತೆಗೆ ಅತ್ಯಂತ ಅವಿನಾಭಾವವಾಗಿ ಜೀವನ ನಡೆಸುತ್ತಿದ್ದಾರೆ. ತಮ್ಮ ಒಡಹುಟ್ಟಿದವರ ಪೈಕಿ ತಮ್ಮ ಜಿಮ್ಮಿ ನೇವಲ್‌ ಅವರೊಂದಿಗೆ ತುಂಬಾ ಆತ್ಮೀಯತೆ ಹೊಂದಿದ್ದಾರೆ. ಆದರೆ ಜಿಮ್ಮಿ ನೇವಲ್‌ ಟಾಟಾ ಸಾರ್ವಜನಿಕ ಬದುಕು ಮತ್ತು ಮಾಧ್ಯಮದ ಜಗತ್ತಿನಿಂದ ದೂರ ಉಳಿದುಕೊಂಡಿದ್ದಾರೆ.

2 Min read
Author : Suvarna News
Published : Mar 28 2024, 04:28 PM IST
Share this Photo Gallery
  • FB
  • TW
  • Linkdin
  • Whatsapp
15

ದೇಶದ ಅತ್ಯಂತ ಪ್ರಭಾವಿ ಕುಟುಂಬಕ್ಕೆ ಸೇರಿದ್ದರೂ ಜಿಮ್ಮಿ ಮಾತ್ರ ಬಹಳ ಸರಳ ಜೀವನ ನಡೆಸುತ್ತಿದ್ದಾರೆ. ಮುಂಬೈನ ಕೊಲಾಬಾದಲ್ಲಿ ಸಾರ್ವಜನಿಕರ ದೃಷ್ಟಿಯಿಂದ ಬಹಳ ದೂರವಿರುವ 2BHK ಅಪಾರ್ಟ್‌ಮೆಂಟ್‌ನಲ್ಲಿ ಜೀವನ ಸಾಗಿಸುತ್ತಿದ್ದಾರೆ. ಕಳೆದ ವರ್ಷ ರತನ್‌ ಟಾಟಾ ತನ್ನ ಸಾಮಾಜಿಕ ಜಾಲತಾಣದಲ್ಲಿ 1945ರಲ್ಲಿ ತಮ್ಮನ ಜೊತೆಗೆ ತೆಗೆದ ಫೋಟೋವನ್ನು ಹಂಚಿಕೊಂಡು ನಮ್ಮ ಮಧ್ಯೆ ಯಾವ ಅಡ್ಡಿಯೂ ಬಂದಿಲ್ಲ ಎಂದು ಬರೆದುಕೊಂಡಿದ್ದರು.

25

ಜಿಮ್ಮಿ ಟಾಟಾ ಅವರು ಮೊಬೈಲ್‌ ಫೋನ್‌ ಕೂಡ ಹೊಂದಿರತೆ ಜೀವನ ನಡೆಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಅವರು ಎಲ್ಲ ದೈನಂದಿನ ಅಪ್‌ಡೇಟ್‌ಗಳನ್ನು ಪತ್ರಿಕೆ ಮೂಲಕವೇ ತಿಳಿದುಕೊಳ್ಳುತ್ತಾರಂತೆ.  ಆದರೆ ಟಾಟಾದ ವ್ಯವಹಾರಗಳಲ್ಲಿ ಅವರ ಪಾಲಿದೆ. ಅವರು ಇನ್ನೂ ಕೂಡ ಟಾಟಾ ಸನ್ಸ್‌, ಟಿಸಿಎಸ್‌, ಟಾಟಾ ಮೋಟಾರ್ಸ್‌, ಟಾಟಾ ಸ್ಟೀಲ್‌, ಟಾಟಾ ಪವರ್‌, ಇಂಡಿಯನ್‌ ಹೋಟೆಲ್ಸ್‌ ಮತ್ತು ಟಾಟಾ ಕೆಮಿಕಲ್ಸ್‌ನಲ್ಲಿ ಪ್ರಮುಖ ಷೇರುದಾರಾಗಿದ್ದಾರೆ. ಜತೆಗೆ, ಟಾಟಾ ಉದ್ಯಮದ ಪ್ರತಿಯೊಂದು ವ್ಯವಹಾರಗಳ ದೈನಂದಿನ ಬೆಳವಣಿಗೆಗಳ ಅಪ್‌ಡೇಟ್‌ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.

35

1989 ರಲ್ಲಿ ಅವರ ತಂದೆ ನೇವಲ್ ಟಾಟಾ ಅವರ ಮರಣದ ನಂತರ ಮತ್ತು ಅವರ ಇಚ್ಛೆಗೆ ಅನುಗುಣವಾಗಿ,  ಈ ಪಾತ್ರವನ್ನು ಆನುವಂಶಿಕವಾಗಿ ಪಡೆದರು. ಜಿಮ್ಮಿ ಅವರು ತೀವ್ರ ತಿಳುವಳಿಕೆಯುಳ್ಳ ಮತ್ತು ತೊಡಗಿಸಿಕೊಂಡಿರುವ ಸದಸ್ಯರಾಗಿದ್ದಾರೆ, ಅವರು ಟಾಟಾ ಗ್ರೂಪ್‌ನೊಳಗಿನ ಕಾರ್ಪೊರೇಟ್ ಬೆಳವಣಿಗೆಗಳ ಕುರಿತು ಹೆಚ್ಚು ಆಸಕ್ತಿ ವಹಿಸುತ್ತಾರೆ.

45

ರತನ್‌ ಟಾಟಾ ಅವರ ಸಹೋದರ ಜಿಮ್ಮಿ ಟಾಟಾ ಅವರಿಗೆ ಈಗ 82 ವರ್ಷ ವಯಸ್ಸು. ರತನ್ ಟಾಟಾ ಅವರಂತೆ ಇವರು ಕೂಡ ಅವಿವಾಹಿತರಾಗಿದ್ದು, ಅಪರೂಪಕ್ಕೆ ಅಪಾರ್ಟ್‌ಮೆಂಟ್‌ನಿಂದ ಹೊರಬರುತ್ತಾರೆ.  ಜಿಮ್ಮಿ ಹಾಗೂ ರತನ್‌ ಟಾಟ ಒಡಹುಟ್ಟಿದ ಸಹೋದರರಾಗಿದ್ದು, ನೇವಲ್‌ ಟಾಟಾ ಅವರ ಮೊದಲ ಪತ್ನಿ ಸೂನಿ ಕಮಿಷರಿಯಟ್ ಮಕ್ಕಳಾಗಿದ್ದಾರೆ. 

55

1989ರಲ್ಲಿ ತಂದೆ ನೇವಲ್‌ ಟಾಟಾ ನಿಧನಕ್ಕೂ ಮುನ್ನ ಬರೆದಿದ್ದ ಉಯಿಲಿನ ಅನುಸಾರ, ಜಿಮ್ಮಿ ಟಾಟಾ ಅವರು ಸರ್‌ ರತನ್‌ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿದ್ದಾರೆ. ಜಿಮ್ಮಿ ಹಾಗೂ ರತನ್‌ ಸಹೋದರರಿಗೆ ನೊಯೆಲ್‌ ಎಂಬ ಇನ್ನೊಬ್ಬ ಸಹೋದರನೂ ಇದ್ದಾರೆ. ನೊಯೆಲ್ ಟಾಟಾ ಅವರು ರತನ್ ಮತ್ತು ಜಿಮ್ಮಿ ಟಾಟಾ ಅವರ ಮಲ ಸಹೋದರರಾಗಿದ್ದಾರೆ (ತಂದೆ ಒಬ್ಬರೇ, ತಾಯಿ ಬೇರೆ ಬೇರೆ; ನೋಯೆಲ್‌ ಎರಡನೇ ತಾಯಿ ಮಗ).

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

SN
Suvarna News
ಟಾಟಾ

Latest Videos
Recommended Stories
Recommended image1
ಅಪರೂಪದ ಖನಿಜಕ್ಕಾಗಿ ಭಾರತ - ಬ್ರೆಜಿಲ್‌ ಡೀಲ್‌
Recommended image2
ಭಾರತದ ಮೇಲೆ ಶೇ.18 ಅಲ್ಲ, ಇನ್ನು ಶೇ.10 ತೆರಿಗೆ
Recommended image3
ಕೇವಲ ಇಷ್ಟು ಲಕ್ಷ ಪೋಸ್ಟ್ ಆಫೀಸ್‌ನಲ್ಲಿ ಹೂಡಿಕೆ ಮಾಡಿದ್ರೆ 5 ವರ್ಷ ಪ್ರತಿ ತಿಂಗಳು ಸಿಗುತ್ತೇ ₹9,250!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved