ಕಡಿಮೆ ಬಂಡಾವಳದೊಂದಿಗೆ ಈ ಬ್ಯುಸಿನೆಸ್ ಶುರು ಮಾಡಿ;ತಿಂಗಳಿಗೆ ಲಕ್ಷ ಲಕ್ಷ ಆದಾಯ!
ಕಡಿಮೆ ಬಂಡವಾಳದೊಂದಿಗೆ ಸ್ವಂತ ಉದ್ಯೋಗ ಶುರು ಮಾಡ್ಬೇಕು ಅಂತ ಆಸೆ ಇದ್ಯಾ? ಟೈಲ್ಸ್ ತಯಾರಿಕೆ ಒಳ್ಳೆ ಬಿಸಿನೆಸ್ ಐಡಿಯಾ. ಯಾವ ಯಂತ್ರ ಬೇಕು, ರಾ ಮೆಟೀರಿಯಲ್ಸ್ ಏನು, ಹೇಗೆ ತಯಾರಿಸೋದು ಅನ್ನೋ ಪೂರ್ತಿ ಮಾಹಿತಿ ಇಲ್ಲಿದೆ.
ಸಣ್ಣ ಬಂಡವಾಳದ ಉದ್ಯಮಗಳು
ಎಲ್ಲರಿಗೂ ಒಳ್ಳೆ ಬ್ಯುಸಿನೆಸ್ ಶುರು ಮಾಡಬೇಕು ಅಂತಾ ಆಸೆ ಇರುತ್ತೆ ಆದರೆ ಬಂಡವಾಳ ಸಾಕಷ್ಟು ಇರುವುದಿಲ್ಲ. ಇರುವ ಬಂಡಾವಳದಲ್ಲಿ ಯಾವ ಉದ್ಯೋಗ ಮಾಡಬಹುದು ಎಂಬ ಮಾಹಿತಿಯಾಗಲಿ, ಐಡಿಯಾವಾಗಲಿ ಇಲ್ಲದೆ ಚಡಪಡಿಸುತ್ತಿರುತ್ತಾರೆ. ಅಂತವರಿಗಾಗಿಯೇ ಇಲ್ಲಿದೆ ಸೂಕ್ತವಾದ ಬ್ಯುಸಿನೆ. ಕಡಿಮೆ ಹೂಡಿಕೆಯಲ್ಲಿ ಚೆನ್ನಾಗಿ ದುಡ್ದು ಮಾಡ್ಬೇಕಾ? ಜೊತೆಗೆ ಇನ್ನೂ ನಾಲ್ಕು ಜನಕ್ಕೆ ಕೆಲಸ ಕೊಡ್ಬೇಕಾ? ಹಾಗಾದ್ರೆ ಈ ಸೂಪರ್ ಬಿಸಿನೆಸ್ ಐಡಿಯಾ ನಿಮಗೆ ಪಕ್ಕಾ ಉಪಯೋಗಕ್ಕೆ ಬರುತ್ತೆ. ಕೆಲಸ ಚಿಕ್ಕದಾಗಿರಲಿ, ದೊಡ್ಡದಾಗಿರಲಿ, ಒಂದಲ್ಲ ಒಂದು ದಿನ ಸಕ್ಸಸ್ ಫುಲ್ ಬಿಸಿನೆಸ್ ಇದು.
ಬಿಸಿನೆಸ್ ಐಡಿಯಾ
ಬಹುತೇಕರು ಬ್ಯುಸಿನೆಸ್ ಮಾಡಲು ಸರಿಯಾದ ಮಾಹಿತಿ, ಪ್ಲಾನ್ ಇಲ್ಲದೆ ಈ ಐಡಿಯಾ ಬಿಟ್ಟುಬಿಡ್ತಾರೆ. ಮಾರ್ಕೆಟ್ ಏನು ಬಯಸ್ತಿದೆ ಅಂತ ಗೊತ್ತಾಗಿ, ಒಂದು ಸ್ಟ್ರಾಟಜಿ ಇಟ್ಕೊಂಡು ಬಿಸಿನೆಸ್ ಶುರು ಮಾಡಿದ್ರೆ ಚೆನ್ನಾಗಿ ದುಡ್ದು ಮಾಡೋದಷ್ಟೇ ಅಲ್ಲ, ಸಮಾಜದಲ್ಲಿ ಒಳ್ಳೆ ಹೆಸರು ಸಿಗುತ್ತೆ. ಸರಿಯಾದ ಬಿಸಿನೆಸ್ ಐಡಿಯಾ ತುಂಬಾ ಮುಖ್ಯ. ಟೈಲ್ಸ್ ತಯಾರಿಕೆ ಬಿಸಿನೆಸ್‌ಗೆ ಮೀಡಿಯಂ, ಅಂದ್ರೆ ಸ್ವಲ್ಪ ಹೂಡಿಕೆ ಸಾಕು.
ಕಡಿಮೆ ಹೂಡಿಕೆ ಬಿಸಿನೆಸ್
ಕನಿಷ್ಠ 250 ರಿಂದ 300 ಚದರ ಗಜ ಜಾಗ, ಕರೆಂಟ್, ನೀರಿನ ವ್ಯವಸ್ಥೆ ಇರಬೇಕು. ಜೊತೆಗೆ ಬೇಕಾದ ಪರವಾನಗಿ ಪಡೆಯಬೇಕು. ಈ ಬಿಸಿನೆಸ್‌ಗೆ ಕೆಲವು ಮುಖ್ಯ ಯಂತ್ರಗಳು ಬೇಕೇ ಬೇಕು. ಮೊದಲನೆಯದು ಕಾಂಕ್ರೀಟ್ ಮಿಕ್ಸರ್. ಇದು ಟೈಲ್ಸ್ ತಯಾರಿಕೆಗೆ ಕಾಂಕ್ರೀಟ್ ಮಿಶ್ರಣ ತಯಾರಿಸುತ್ತೆ. ಈ ಯಂತ್ರಗಳು ಬೇರೆ ಬೇರೆ ಬೆಲೆಯಲ್ಲಿ ಸಿಗುತ್ತವೆ. ಇನ್ನೊಂದು ಮುಖ್ಯ ಯಂತ್ರ ಅಂದ್ರೆ ಕಲರ್ ಮಿಕ್ಸರ್.
ಟೈಲ್ಸ್ ತಯಾರಿಕೆ
ಇದು ಕಾಂಕ್ರೀಟ್‌ಗೆ ಬಣ್ಣ ಬೆರೆಸುತ್ತೆ. ಟೈಲ್ಸ್‌ಗೆ ಆಕಾರ ಕೊಡೋ ಮೋಲ್ಡ್‌ಗಳು ಸಹ ಬೇಕು. ಟೈಲ್ಸ್‌ನ ವಿಧ, ಗಾತ್ರಕ್ಕೆ ತಕ್ಕಂತೆ ಈ ಮೋಲ್ಡ್‌ಗಳ ವಿನ್ಯಾಸ ಇರುತ್ತೆ. ಇವುಗಳ ಬೆಲೆ ಸುಮಾರು 100 ರೂ. ಮರಳು, ಕಲ್ಲುಪುಡಿ, ಸಿಮೆಂಟ್, ಅಲಂಕಾರಕ್ಕಾಗಿ ಬಣ್ಣದ ಪುಡಿ ಬೇಕಾಗುತ್ತದೆ. ಟೈಲ್ಸ್ ತಯಾರಿಸೋದು ತುಂಬಾ ಸಿಂಪಲ್. ಮೊದಲು ಕಾಂಕ್ರೀಟ್ ಮಾಡಲು ರಾ ಮೆಟೀರಿಯಲ್ಸ್ ಮಿಕ್ಸ್ ಮಾಡ್ಬೇಕು.
ಟೈಲ್ಸ್ ಬಿಸಿನೆಸ್
ನಂತರ ಕಲರ್ ಮಿಕ್ಸರ್‌ನಲ್ಲಿ ಬಣ್ಣ ಬೆರೆಸಿ, ಈ ಮಿಶ್ರಣವನ್ನು ಟೈಲ್ಸ್ ಮೋಲ್ಡ್‌ಗಳಲ್ಲಿ ಹಾಕಿ ಗಟ್ಟಿ ಮಾಡ್ಬೇಕು. ಒಂದು ಟೈಲ್ ತಯಾರಿಸಲು ಸುಮಾರು 10 ರೂ. ಖರ್ಚಾಗುತ್ತೆ. ಆದರೆ ಮಾರ್ಕೆಟ್‌ನಲ್ಲಿ ಒಂದು ಟೈಲ್‌ಗೆ 25 ರೂ. ಸಿಗುತ್ತೆ. ಹೋಲ್‌ಸೇಲ್‌ನಲ್ಲಿ 15 ರಿಂದ 20 ರೂ.ಗೆ ಮಾರಾಟ ಮಾಡಬಹುದು. ಹೀಗಾಗಿ ಚೆನ್ನಾಗಿ ಲಾಭ ಸಿಗುತ್ತೆ. ಚೆನ್ನಾಗಿ ಮಾರಾಟ ಆದ್ರೆ ಈ ಬಿಸಿನೆಸ್‌ನಲ್ಲಿ ತಿಂಗಳಿಗೆ ಒಳ್ಳೆ ದುಡ್ಡು ಮಾಡಬಹುದು.