ಮುಕೇಶ್ ಅಂಬಾನಿಗೆ ಭಾರತಕ್ಕಿಂತ ವಿದೇಶದಲ್ಲೇ ದುಬಾರಿ ಆಸ್ತಿಗಳಿವೆ ಗೊತ್ತಾ!?
ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾಗಿರುವ ಮುಖೇಶ್ ಅಂಬಾನಿ ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಅದ್ದೂರಿಯಾದ ಮನೆ, ಆಸ್ತಿ ಹೊಂದಿದ್ದಾರೆ. ಇಲ್ಲಿ ವಿದೇಶ ಆಸ್ತಿಗಳು ಮತ್ತು ಅದರ ಮೌಲ್ಯವನ್ನು ನೀಡಲಾಗಿದೆ.
ಯುಕೆಯಲ್ಲಿರುವ ಸ್ಟೋಕ್ ಪಾರ್ಕ್: ಲಂಡನ್‌ನಲ್ಲಿರುವ 900 ವರ್ಷಗಳಷ್ಟು ಹಳೆಯದಾದ ಐತಿಹಾಸಿಕ ಹೋಟೆಲ್ ಮುಖೇಶ್ ಅಂಬಾನಿ ಅವರ ಒಡೆತನದಲ್ಲಿದೆ. 2020 ರಲ್ಲಿ 57 ಮಿಲಿಯನ್ ಅಂದರೆ ಸುಮಾರು 592 ಕೋಟಿ ರೂ. ಕೊಟ್ಟು ಖರೀದಿ ಮಾಡಿದರು. ಸ್ಟೋಕ್ ಪಾರ್ಕ್ ಕೆಲವು ಅತ್ಯುತ್ತಮ ಐಷಾರಾಮಿ ಸೌಲಭ್ಯಗಳಿದೆ. 1760 ರಲ್ಲಿ ಸೈನಿಕ ಮತ್ತು ವಿದ್ವಾಂಸ ಜಾನ್ ಪೆನ್ ನಿರ್ಮಿಸಿದ ಈ ಹೋಟೆಲ್ 49 ಐಷಾರಾಮಿ ಕೊಠಡಿಗಳು ಮತ್ತು ಮೂರು ರೆಸ್ಟೋರೆಂಟ್‌ಗಳನ್ನು ಹೊಂದಿದೆ. ಜೊತೆಗೆ 4000 ಚದರ ಅಡಿ ಜಿಮ್, ಗಾಲ್ಫ್ ಕೋರ್ಸ್, ಹದಿಮೂರು ಬಹು-ಮೇಲ್ಮೈ ಟೆನ್ನಿಸ್ ಕೋರ್ಟ್ ಮತ್ತು ಒಳಾಂಗಣ ಈಜುಕೊಳಗಳನ್ನು ಹೊಂದಿದೆ. ತಮ್ಮ ಕಿರಿಯ ಮಗ ಅನಂತ್ ಅಂಬಾನಿ ಮದುವೆಯನ್ನು ಜುಲೈನಲ್ಲಿ ಇಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಬೀಚ್ ಸೈಡ್ ವಿಲ್ಲಾ: 2022 ರಲ್ಲಿ ಮುಕೇಶ್ ಅಂಬಾನಿ ದುಬೈನಲ್ಲಿ ಪಾಮ್ ಜುಮೇರಾ ಅವರ ಐಷಾರಾಮಿ ಆಸ್ತಿಯನ್ನು ಖರೀದಿಸಿದರು. ಕಿರಿಯ ಮಗ ಅನಂತ್ ಅಂಬಾನಿಗಾಗಿ ದುಬೈನ ಪಾಮ್ ಜುಮೇರಾದಲ್ಲಿ 3,000 ಚದರ ಅಡಿಯ ಮಹಲು ಖರೀದಿ ಮಾಡಿದ್ದು, ಹತ್ತು ಮಲಗುವ ಕೋಣೆಗಳು, ವಿಶಾಲವಾದ ಊಟದ ಪ್ರದೇಶ, ಒಳಾಂಗಣ ಮತ್ತು ಹೊರಾಂಗಣ ಪೂಲ್‌ಗಳು ಖಾಸಗಿ ಸ್ಪಾ ಮತ್ತು ಸಲೂನ್ ಅನ್ನು ಹೊಂದಿದೆ. ಇದು 70 ಮೀಟರ್ ಉದ್ದದ ಖಾಸಗಿ ಬೀಚ್‌ಗೆ ವಿಶೇಷ ಪ್ರವೇಶ ಹೊಂದಿದೆ. 80 ಮಿಲಿಯನ್ ಅಂದರೆ 650 ಕೋಟಿ ರೂ ಗೆ ಖರೀದಿ ಮಾಡಿದ್ದಾರೆ.
ದುಬೈನ ಮತ್ತೊಂದು ವಸತಿ ಆಸ್ತಿ: ಮುಕೇಶ್ ಅಂಬಾನಿ ಪಾಮ್ ಜುಮೇರಾದಲ್ಲಿ ದುಬಾರಿ ಬಂಗಲೆಯನ್ನು ಖರೀದಿ ಮಾಡಿದ ನಂತರ ಅದರ ಸಮೀಪವೇ ಮತ್ತೊಂದು ಅದ್ದೂರಿ ವಿಲ್ಲಾ ಖರೀದಿಸಿದ್ದಾರೆ, ಕುವೈತ್ ಉದ್ಯಮಿ ಮೊಹಮ್ಮದ್ ಅಲ್ಶಯಾ ಅವರ ಕುಟುಂಬದಿಂದ ಇದನ್ನು ಖರೀದಿಸಿದ್ದಾರೆ. ಈ ಆಸ್ತಿಯು ಬೀಚ್ ಸೈಡ್ ವಿಲ್ಲಾದ ಸಮೀಪದಲ್ಲಿದೆ. ಇದರ ಮೌಲ್ಯ 163 ಮಿಲಿಯನ್ 1,350 ಕೋಟಿ ರೂ ಆಗಿದೆ.
ನ್ಯೂಯಾರ್ಕ್‌ನ ಮ್ಯಾಂಡರಿನ್ ಓರಿಯಂಟಲ್ ಹೋಟೆಲ್: ನ್ಯೂಯಾರ್ಕ್‌ನ ಕೊಲಂಬಸ್ ಸರ್ಕಲ್‌ನಲ್ಲಿರುವ 248 ಕೋಣೆಗಳ ಈ ಆಸ್ತಿಯು ನಗರದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿದೆ. ವಿವಿಧ ಹಾಲಿವುಡ್ ಸೆಲೆಬ್ರಿಟಿಗಳು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಹೋಟೆಲ್‌ನ ಅನ್ನು 2022 ರಲ್ಲಿ 98.15 ಮಿಲಿಯನ್ ಅಂದರೆ 2000 ಕೋಟಿ ಕೊಟ್ಟು ಖರೀದಿ ಮಾಡಲಾಯ್ತು.
ಇನ್ನು ಭಾರತದಲ್ಲಿ ಕೂಡ ಐಶಾರಾಮಿ ಆಸ್ತಿಗಳು ಮುಕೇಶ್ ಅಂಬಾನಿ ಬಳಿ ಇದೆ. ಮುಂಬೈನ ಅಂಟಿಲಿಯಾ 15,000 ಕೋಟಿ ಮೌಲ್ಯದ್ದಾಗಿದೆ. ಇದರಲ್ಲಿ ಇಡೀ ಕುಟುಂಬ ಮತ್ತು ಸಹಾಯಕರು ವಾಸಿಸುತ್ತಾರೆ. ಗುಜರಾತ್‌ನ ಚೋರ್ವಾಡ್‌ನಲ್ಲಿರುವ 100 ವರ್ಷ ಹಳೆಯ ಪೂರ್ವಜರ ಮನೆಯು ಧೀರೂಭಾಯಿ ಅಂಬಾನಿಯವರ ಬಾಲ್ಯದ ನಿವಾಸವಾಗಿದ್ದು, ಧೀರೂಭಾಯಿ ಅಂಬಾನಿ ಮೆಮೋರಿಯಲ್ ಹೌಸ್ ಆಗಿ ಪರಿವರ್ತಿಸಲಾಗಿದೆ. ಸಾಂಪ್ರದಾಯಿಕ ಗುಜರಾತಿ ಶೈಲಿಯನ್ನು ಇದು ಹೊಂದಿದೆ. ಇದಲ್ಲದೆ ಅನೇಕ ಆಸ್ತಿಗಳನ್ನು ಅಂಬಾನಿ ಕುಟುಂಬ ಹೊಂದಿದೆ.