ಸಾವಿರಾರು ಕೋಟಿ ಒಡೆಯ ಮುಕೇಶ್ ಅಂಬಾನಿಗೆ ಫ್ರೀ ಆಫರ್ ಕೊಟ್ಟ ಮಕ್ಕಳು; ಏನ್ಮಾಡ್ತಾರೆ ರಿಲಯನ್ಸ್ ಮಾಲೀಕ?
ಬ್ಯುಸಿನೆಸ್ ಅಂದ್ರೆ ಪೈಪೋಟಿ ಜಗತ್ತು. ಬ್ಯುಸಿನೆಸ್‌ನಲ್ಲಿ ಬುದ್ಧಿವಂತಿಕೆ ಎಷ್ಟು ಮುಖ್ಯವೋ ಗ್ರಾಹಕರ ಅವಶ್ಯಕತೆಗಳನ್ನು ಅರಿತು ಹೆಜ್ಜೆ ಇಡೋದೂ ಅಷ್ಟೇ ಮುಖ್ಯ. ರಿಲಯನ್ಸ್ ಮತ್ತು ಹಾಟ್‌ಸ್ಟಾರ್ ನಡುವಿನ ಒಂದು ಬಿಸಿನೆಸ್ ಡೀಲ್‌ನಲ್ಲಿ ಒಂದು ಸಣ್ಣ ಅಂತರದಿಂದಾಗಿ ಒಬ್ಬ ಆ್ಯಪ್ ಡೆವಲಪರ್, ಇಬ್ಬರು ಮಕ್ಕಳು ಅಖಾಡಕ್ಕೆ ಇಳಿದಿದ್ದಾರೆ. ಈಗ ಆ ಮಕ್ಕಳು ರಿಲಯನ್ಸ್ ಅಂಬಾನಿ ಅವರಿಗೆ ಫ್ರೀ ಆಫರ್ ಘೋಷಿಸಿದ್ದಾರೆ. ಈ ಮಕ್ಕಳು ಯಾರು? ಅವರು ಘೋಷಿಸಿದ ಆಫರ್ ಏನು? ಇಂಥ ಹೆಚ್ಚಿನ ವಿವರಗಳನ್ನು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಟಾಪ್ 10ರಲ್ಲಿ ಇರುತ್ತಾರೆ. ರಿಲಯನ್ಸ್ ಇಂಡಸ್ಟ್ರೀಸ್ ಕಾಲಿಡದ ಕ್ಷೇತ್ರವಿಲ್ಲ ಅಂದ್ರೆ ತಪ್ಪಾಗಲಿಕ್ಕಿಲ್ಲ. ಟೆಲಿಕಾಂ, ಪೆಟ್ರೋಲ್, ಎಲೆಕ್ಟ್ರಾನಿಕ್ಸ್, ಸೂಪರ್ ಮಾರ್ಕೆಟ್, ಬಟ್ಟೆ ಅಂಗಡಿ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ರಿಲಯನ್ಸ್ ವ್ಯಾಪಾರ ಮಾಡ್ತಿದೆ.
ಈಗ 8,49,926 ಕೋಟಿ ರೂಪಾಯಿ ಆಸ್ತಿಯೊಂದಿಗೆ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ. ಅವರ ರಿಲಯನ್ಸ್ ಇಂಡಸ್ಟ್ರೀಸ್ 17,27,000 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳದೊಂದಿಗೆ ಭಾರತದ ಅತ್ಯಂತ ದೊಡ್ಡ ಕಂಪನಿಯಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಅವರ ಜಿಯೋ ಸಿನಿಮಾ, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನ್ನು ಖರೀದಿಸಲು ವಾಲ್ಟ್ ಡಿಸ್ನಿಯೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾರುಕಟ್ಟೆ ತಜ್ಞರು ಹೇಳ್ತಿದ್ದಾರೆ. ಎರಡೂ ಕಂಪನಿಗಳನ್ನು ವಿಲೀನಗೊಳಿಸಲು ಅಂಬಾನಿ ಯೋಚಿಸ್ತಿದ್ದು, ಅದಕ್ಕೆ ಸಂಬಂಧಿಸಿದ ಕೆಲಸಗಳು ನಡೆಯುತ್ತಿವೆ.
ಅಂಬಾನಿ ಹಾಟ್‌ಸ್ಟಾರ್ ಖರೀದಿಸಿದ್ರೆ ಅದರ ಹೆಸರು ಜಿಯೋ ಹಾಟ್‌ಸ್ಟಾರ್ ಆಗಬಹುದು. ಹೀಗಾಗಿ JioHotstar.com ಡೊಮೇನ್‌ಗೆ ಬೇಡಿಕೆ ಹೆಚ್ಚಾಗಿದೆ. ಆದ್ರೆ ಈ ಡೊಮೇನ್‌ನ್ನು ಈಗಾಗಲೇ ದೆಹಲಿಯ ಒಬ್ಬ ಆ್ಯಪ್ ಡೆವಲಪರ್ ಖರೀದಿಸಿದ್ದಾರೆ. ಹಾಟ್‌ಸ್ಟಾರ್ ವಿಷಯದಲ್ಲಿ ವಾಲ್ಟ್ ಡಿಸ್ನಿ ಮತ್ತು ಜಿಯೋ ನಡುವೆ ಒಪ್ಪಂದ ಪೂರ್ಣಗೊಳ್ಳುವ ಮುನ್ನವೇ ಡೊಮೇನ್ ಖರೀದಿಸಿದ್ದಾರೆ.
ದೆಹಲಿಯ ಒಬ್ಬ ಆ್ಯಪ್ ಡೆವಲಪರ್ ಈ ಡೊಮೇನ್ ಖರೀದಿಸಿದ್ದಾರೆ. ಕಳೆದ ತಿಂಗಳು JioHotstar.com ಡೊಮೇನ್‌ನ್ನು ಒಂದು ಕೋಟಿ ರೂಪಾಯಿಗೆ ಮಾರಾಟಕ್ಕೆ ಇಟ್ಟಿದ್ದರು. ಕೇಂಬ್ರಿಡ್ಜ್‌ನಲ್ಲಿ ಓದಬೇಕು ಅನ್ನೋ ತನ್ನ ಕನಸನ್ನು ನನಸಾಗಿಸಿಕೊಳ್ಳಲು ಈ ಡೊಮೇನ್ ಮಾರ್ತಿದ್ದೇನೆ ಅಂತ ಆ್ಯಪ್ ಡೆವಲಪರ್ ಹೇಳಿದ್ದರು. ಒಂದು ಕೋಟಿ ರೂಪಾಯಿಗೆ ಈ ಡೊಮೇನ್ ಮಾರ್ತೀನಿ ಅಂತ ಮೊದಲು ರಿಲಯನ್ಸ್‌ಗೆ ಆಫರ್ ಕೊಟ್ಟಿದ್ದರು. ಆದ್ರೆ ಅಂಬಾನಿ ಒಪ್ಪಿಕೊಂಡಿರಲಿಲ್ಲ.
ಈ ನಡುವೆ ಈ ಡೀಲ್‌ಗೆ ಇಬ್ಬರು ಅಣ್ಣ ತಂಗಿಯರು ಎಂಟ್ರಿ ಕೊಟ್ಟರು. 15 ವರ್ಷದ ಈ ಮಕ್ಕಳು ಜೈನಮ್ ಮತ್ತು ಜೀವಿಕಾ ಡೊಮೇನ್‌ನ್ನು ಆ್ಯಪ್ ಡೆವಲಪರ್‌ನಿಂದ ಖರೀದಿಸಿದರು. ಒಂದು ಕೋಟಿ ರೂಪಾಯಿ ಕೊಟ್ಟು ಖರೀದಿಸಿದರು.
ಕೇಂಬ್ರಿಡ್ಜ್‌ನಲ್ಲಿ ಓದಬೇಕು ಅನ್ನೋ ಕನಸು ನನಸಾಗಿಸಿಕೊಳ್ಳಲು ಹಣ ಇಲ್ಲದ್ದಕ್ಕೆ ಡೊಮೇನ್ ಮಾರ್ತಿದ್ದೇನೆ ಅಂತ ಡೆವಲಪರ್ ಹೇಳಿದ್ದರು. ಅವರ ಓದಿಗೆ ಸಹಾಯ ಮಾಡಬೇಕು ಅನ್ನೋ ಉದ್ದೇಶದಿಂದ ಡೊಮೇನ್ ಖರೀದಿಸಿದೆವು ಅಂತ ಜೈನಮ್ ಮತ್ತು ಜೀವಿಕಾ ಹೇಳಿದ್ದಾರೆ.
ಈ ಅಣ್ಣ ತಂಗಿಯರು ದುಬೈನಲ್ಲಿ ವಾಸವಾಗಿದ್ದಾರೆ. ಅಲ್ಲಿ ಓದ್ತಾ ಸಣ್ಣಪುಟ್ಟ ಸೇವಾ ಕಾರ್ಯಕ್ರಮಗಳನ್ನು ಮಾಡ್ತಾರೆ. sevakarmy.com ಅನ್ನೋ ಹೆಸರಿನಲ್ಲಿ ಸಾಮಾಜಿಕ ಸೇವೆ ಮಾಡ್ತಿದ್ದಾರೆ. ರಿಲಯನ್ಸ್‌ಗೆ ಪೈಪೋಟಿ ಕೊಡಲು JioHotstar.com ಡೊಮೇನ್ ಖರೀದಿಸಿಲ್ಲ, ಸೇವಾ ಕಾರ್ಯಕ್ರಮಗಳಿಗೆ ಅಂತ ಖರೀದಿಸಿದೆವು ಅಂತ ಹೇಳಿದ್ದಾರೆ.
ಈಗ ಈ ಡೊಮೇನ್‌ನ್ನು ಮುಖೇಶ್ ಅಂಬಾನಿ ಕಂಪನಿಗೆ ಫ್ರೀಯಾಗಿ ಕೊಡ್ತೀವಿ ಅಂತ ಜೈನಮ್ ಮತ್ತು ಜೀವಿಕಾ ಹೇಳಿದ್ದಾರೆ. ಸೇವೆಗಾಗಿ ಡೆವಲಪರ್‌ನಿಂದ ಡೊಮೇನ್ ಖರೀದಿಸಿದೆವು, ರಿಲಯನ್ಸ್ ಜಿಯೋ ಈ ಡೊಮೇನ್ ಖರೀದಿಸಲು ಬಯಸಿದ್ರೆ ಫ್ರೀಯಾಗಿ ಕೊಡ್ತೀವಿ ಅಂತ ಹೇಳಿದ್ದಾರೆ. ಹೀಗಾಗಿ jiohotstar.com ಡೊಮೇನ್ ಫ್ರೀಯಾಗಿ ಪಡೆಯುವ ಅವಕಾಶ ಮುಖೇಶ್ ಅಂಬಾನಿ ಕಂಪನಿಗೆ ಸಿಕ್ಕಿದೆ. ಮುಖೇಶ್ ಅಂಬಾನಿಗೆ ಫ್ರೀ ಆಫರ್ ಕೊಟ್ಟ ಈ ಮಕ್ಕಳ ನಿರ್ಧಾರವನ್ನು ರಿಲಯನ್ಸ್ ಒಪ್ಪಿಕೊಳ್ಳುತ್ತಾ ಅಥವಾ ಮುಂದಿನ ಹೆಜ್ಜೆ ಏನು ಅನ್ನೋದು ತಿಳಿಯಬೇಕಿದೆ.