ಜುಲೈನಲ್ಲಿ 12 ದಿನ ಬ್ಯಾಂಕ್‌ಗಳಿಗೆ ರಜೆ; ಯಾವ್ಯಾವ ದಿನ? ಇಲ್ಲಿದೆ ಸಂಪೂರ್ಣ ಪಟ್ಟಿ
ಜುಲೈ ತಿಂಗಳಲ್ಲಿ ಬ್ಯಾಂಕ್‌ನಲ್ಲಿ ಏನಾದ್ರೂ ಮುಖ್ಯ ಕೆಲಸವಿದ್ರೆ, ಮೊದಲೇ ಪ್ಲ್ಯಾನ್ ಮಾಡಿಕೊಳ್ಳುವುದು ಉತ್ತಮ. ಯಾಕಂದ್ರೆ, ಈ ತಿಂಗಳು ಬರೋಬ್ಬರಿ 12 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಹೀಗಾಗಿ ಹಲವು ದಿನ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ.

ಜುಲೈ 2026 ಬ್ಯಾಂಕ್ ರಜೆ ಪಟ್ಟಿ:
12 ದಿನ ಬ್ಯಾಂಕ್‌ಗಳು ಬಂದ್
ಜುಲೈ ಬ್ಯಾಂಕ್ ರಜೆಗಳ ಲಿಸ್ಟ್
ಜುಲೈ ತಿಂಗಳ ಬ್ಯಾಂಕ್ ರಜೆ
ರಿಸರ್ವ್ ಬ್ಯಾಂಕ್ ನಿಯಮಗಳ ಪ್ರಕಾರ, ಜುಲೈ 11 (ಎರಡನೇ ಶನಿವಾರ) ಮತ್ತು ಜುಲೈ 25 (ನಾಲ್ಕನೇ ಶನಿವಾರ) ರಂದು ದೇಶದಾದ್ಯಂತ ಎಲ್ಲಾ ಬ್ಯಾಂಕ್ ಶಾಖೆಗಳು ಮುಚ್ಚಿರುತ್ತವೆ. ಇದಲ್ಲದೆ, ಜುಲೈ 5, 12, 19 ಮತ್ತು 26 ರಂದು ಬರುವ ನಾಲ್ಕು ಭಾನುವಾರಗಳಂದು ಕೂಡ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವುದಿಲ್ಲ.
ಇದನ್ನೂ ಓದಿ: ಭಾರತದಲ್ಲಿ ಕೆಲಸ ಮಾಡುವ ಅತ್ಯುತ್ತಮ ಕಂಪನಿಗಳ ಪೈಕಿ ಮುಕೇಶ್ ಅಂಬಾನಿ ರಿಲಯನ್ಸ್‌ಗೆ ಎಷ್ಟನೇ ಸ್ಥಾನ?
ಸ್ಥಳೀಯ ರಜೆಗಳು
ಇದರೊಂದಿಗೆ, ರಾಜ್ಯಗಳಿಗೆ ಅನುಗುಣವಾಗಿ ಇನ್ನೂ 6 ಸ್ಥಳೀಯ ರಜೆಗಳನ್ನು ಘೋಷಿಸಲಾಗಿದೆ. ಇದರಿಂದಾಗಿ ಜುಲೈ ತಿಂಗಳಲ್ಲಿ ಒಟ್ಟು 12 ದಿನಗಳ ಕಾಲ ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುವುದಿಲ್ಲ. ಹಾಗಾಗಿ, ಬ್ಯಾಂಕ್ ಶಾಖೆಗೆ ನೇರವಾಗಿ ಹೋಗಿ ಮಾಡಬೇಕಾದ ಕೆಲಸಗಳಿದ್ದರೆ, ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಮೊದಲೇ ಮುಗಿಸಿಕೊಳ್ಳುವುದು ಅನಗತ್ಯ ತೊಂದರೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Rules Change: ಕ್ಯಾಲೆಂಡರ್ ಪೇಜ್ ಮಾತ್ರವಲ್ಲ, ಜುಲೈ 1ರಿಂದ LPG, ಆಧಾರ್ ಕಾರ್ಡ್‌ನಲ್ಲಿ ಬದಲಾವಣೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

