MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Business
  • ಆರ್‌ಸಿಬಿ ಅಭಿಮಾನಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್, ಸಂಭ್ರಮಕ್ಕೆ ಇನ್ನೇನು ಬೇಕು

ಆರ್‌ಸಿಬಿ ಅಭಿಮಾನಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್, ಸಂಭ್ರಮಕ್ಕೆ ಇನ್ನೇನು ಬೇಕು

ಐಪಿಎಲ್ 2025 ಟೂರ್ನಿಯಲ್ಲಿ ಆರ್‌ಸಿಬಿ ಅಬ್ಬರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಇದರ ಜೊತೆ ರಿಲಯನ್ಸ್ ಜಿಯೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ.

2 Min read
Author : Chethan Kumar
| Updated : Apr 07 2025, 11:23 PM IST
Share this Photo Gallery
  • FB
  • TW
  • Linkdin
  • Whatsapp
15

ಮುಕೇಶ್ ಅಂಬಾನಿ ಮಾಲೀಕತ್ವದ ಜಿಯೋ ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದೆ. ಹೌದು ಮುಂಬೈಇಂಡಿಯನ್ಸ್ ಅಲ್ಲ, ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಡಬಲ್ ಮಾಡಿದೆ. ಇದೀಗ ಚಿನ್ನಸ್ವಾಮೀ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳು ಬ್ರಾಡ್‌ಬ್ಯಾಂಡ್ ರೀತಿಯ ತಡೆರಹಿತ 5ಜಿ ಸೇವೆಯನ್ನು ಬಳಸಬಹುದು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜಿಯೋ 2,000ಕ್ಕೂ ಹೆಚ್ಚು ಸೆಲ್ ನಿಯೋಜಿಸಿದೆ. ಇದು ಮೊಬೈಲ್ ಬ್ರಾಡ್‌ಬ್ಯಾಂಡ್ ಅನುಭವವನ್ನು ಹೆಚ್ಚಿಸಿದೆ. 

25

ಜಿಯೋ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಅಭಿಮಾನಿಗಳಿಗೆ ಯಾವುದೇ ಅಡೆ ತಡೆ ಇಲ್ಲದೆ 5ಜಿ ಸೇವೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಗುವಂತೆ ಮಾಡಿದೆ. ಹೆಚ್ಚಿನ ಜನ ಸೇರುವ ಬಳಿಕ ಮೊಬೈಲ್ ನೆಟ್‌ವರ್ಕ್ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ ಅನ್ನೋ ಆರೋಪಕ್ಕೆ ಜಿಯೋ ಉತ್ತರ ನೀಡಿದೆ. ಜಿಯೋದ ಸುಧಾರಿತ 5ಜಿ ಸ್ಟ್ಯಾಂಡಲೋನ್ (ಎಸ್‌ಎ) ಆರ್ಕಿಟೆಕ್ಚರ್, ನೆಟ್‌ವರ್ಕ್ ಸ್ಲೈಸಿಂಗ್ ಸಾಮರ್ಥ್ಯ ಹಾಗೂ 5ಜಿ ಕ್ಯಾರಿಯರ್ ಮೂಲಕ ಈ ಸಾಧನೆ ಮಾಡಿದೆ. ಕ್ರಿಕೆಟ್ ಪಂದ್ಯದ ವೇಳೆ ಡೇಟಾ ಬೇಡಿಕೆ ಹೆಚ್ಚು. ಹೀಗಾಗಿ ಹೀಗಾಗಿ ಜಿಯೋ ತಡೆರಹಿತ 5ಜಿ ಸೇವೆ ಹೊಸ ತಂತ್ರಜ್ಞಾನದ ಮೂಲಕ ನೀಡುತ್ತಿದೆ.  

35

ಹೆಚ್ಚಿನ ಜನರು ಒಂದೆಡೆ ಸೇರಿದ್ದರೂ, ಅಪಾರ ಸಂಖ್ಯೆಯಲ್ಲಿ ಜನರು ಒಂದೇ ಟವರ್ ಅಥವಾ ಫ್ರೀಕ್ವೆನ್ಸಿ ಮೂಲಕ ನೆಟ್‌ವರ್ಕ್ ಬಳಸಿದರೂ ಡೇಟಾ ವೇಗದಲ್ಲಿ ಯಾವುದೇ ಕೊರತೆಯಾಗುವುದಿಲ್ಲ. ಇದು ಅತೀವೇಗದ ಡೇಟಾ ಸೌಲಭ್ಯ ನೀಡಲಿದೆ. ಇದರಿಂದಾಗಿ ಅಭಿಮಾನಿಗಳು ತಮ್ಮ ಲೈವ್ ಅನುಭವಗಳನ್ನು ಅಡೆತಡೆಯಿಲ್ಲದೆ ಹಂಚಿಕೊಳ್ಳಲು ನೆರವಾಗುತ್ತದೆ. 

45

ಉತ್ತರ ಪ್ರದೇಶದ ಮಹಾಕುಂಭದಲ್ಲಿ ರಿಲಯನ್ಸ್ ಜಿಯೋ ಇದೇ ತಂತ್ರಜ್ಞಾನದ ಮೂಲಕ ಇಂಟರ್ನೆಟ್ ನೀಡಿತ್ತು. ಮಹಾಕುಂಬಕ್ಕೆ ಪ್ರತಿ ದಿನ ಕೋಟಿ ಕೋಟಿ ಭಕ್ತರು ಆಗಮಿಸುತ್ತಿದ್ದರು. ಈ ವೇಳೆ ನೆಟ್‌ವರ್ಕ್ ಸಮಸ್ಯೆಯಾಗದಂತೆ ಜಿಯೋ ನೋಡಿಕೊಂಡಿದೆ. ಇದೇ ಮಾದರಿಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲೂ ತಂತ್ರಜ್ಞಾನ ಬಳಸಿ ಅಭಿಮಾನಿಗಳಿಗೆ ಡೇಟಾ ನೀಡಲಾಗುತ್ತಿದೆ. 

55

ಓಕ್ಲಾ ವರದಿ ಪ್ರಕಾರ, ಜಿಯೋ ಸರಾಸರಿ ಡೌನ್‌ಲೋಡ್ ವೇಗ 201.87 ಎಂಬಿಪಿಎಸ್ (Mbps) ಅನ್ನು ಸಾಧಿಸಿದ್ದು, ಇದು ಏರ್‌ಟೆಲ್‌ನ 165.23 ಎಂಬಿಪಿಎಸ್ (Mbps) ವೇಗಕ್ಕಿಂತ ಗಮನಾರ್ಹವಾಗಿ ಮೀರಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ಇದ್ದ ಹೊರತಾಗಿಯೂ ಹೆಚ್ಚಿನ ಟ್ರಾಫಿಕ್ ಇರುವ ಪರಿಸರದಲ್ಲಿ ತನ್ನ ನೆಟ್‌ವರ್ಕ್ ನಾಯಕತ್ವವನ್ನು ಪ್ರದರ್ಶಿಸಿದೆ. ಐಸಿಸಿ ಕ್ರಿಕೆಟ್ ಫೈನಲ್‌ ಸಮಯದಲ್ಲಿ ನೆಟ್‌ವರ್ಕ್‌ನ ಸಾಮರ್ಥ್ಯ ಮತ್ತು ಪಾರಮ್ಯವನ್ನು  ಮತ್ತಷ್ಟು ಪ್ರದರ್ಶಿಸಲಾಯಿತು. ಆ ವೇಳೆ ಜಿಯೋ ಒಂದೇ ದಿನದಲ್ಲಿ ದಾಖಲೆಯ 50 ಕೋಟಿ ಜಿಬಿ ಡೇಟಾ ಟ್ರಾಫಿಕ್ ಅನ್ನು ಪ್ರೊಸೆಸ್ ಮಾಡಿತು. ಇದು ಈ ಹಿಂದೆಂದೂ ಕಂಡಿರದ ಡೇಟಾ ಪರಿಮಾಣಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ತೋರಿಸಿತು.

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಆರ್‌ಸಿಬಿ
ಕ್ರಿಕೆಟ್
ಐಪಿಎಲ್
ಮುಕೇಶ್ ಅಂಬಾನಿ
ರಿಲಯನ್ಸ್ ಜಿಯೋ

Latest Videos
Recommended Stories
Recommended image1
ನಿಮ್ಮ ಹಳೆಯ ಚಿನ್ನ ಬದಲಾಯಿಸಿ ಹೊಸ ಒಡವೆಗಳನ್ನು ಕೊಳ್ಳಬೇಕೇ ಅಥವಾ ಬೇಡವೇ?, ಯಾವುದು ಬೆಸ್ಟ್?
Recommended image2
ಬೆಳಗ್ಗೆ ಎದ್ದಾಗ ಬಿಸಿನೆಸ್ ಧೂಳೀಪಟ.. AI ಹೊಡೆತಕ್ಕೆ ರಾತ್ರೋರಾತ್ರಿ ಕುಸಿದ ಸ್ಟಾರ್ಟ್‌ಅಪ್!
Recommended image3
Bharat Taxi Launch: ಚಾಲಕರಿಗೂ ಮಾಲೀಕರಾಗೋ ಅವಕಾಶ, ಅಮೂಲ್‌ ಮಾದರಿಯಲ್ಲಿ ಭಾರತ್‌ ಟ್ಯಾಕ್ಸಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved