ಕೊಡುಗೈ ದಾನಿ ವಿಪ್ರೋ ಸ್ಥಾಪಕ ಅಜೀಂ ಪ್ರೇಮ್ ಜಿಯವರ 350 ಕೋಟಿ ಫಾರ್ಮ್ ಹೌಸ್ ಇದು!
ಕೊಡುಗೈ ದಾನಿ ಎಂದೇ ಖ್ಯಾತರಾಗಿರುವ ಬೆಂಗಳೂರು ಮೂಲದ ಬಿಲೇನಿಯರ್ ಅಜೀಂ ಪ್ರೇಮ್ ಜಿಯವರು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಿರ್ಮಿಸಿರುವ ಭವ್ಯವಾದ ಫಾರ್ಮ್ ಹೌಸ್ ಹೇಗಿದೆ ನೋಡಿ.
ದೇಶದ ಬಿಲೇನಿಯರ್‌ಗಳಲ್ಲಿ ಒಬ್ಬರಾದ ಅಜೀಂ ಪ್ರೇಮ್ ಜಿಯವರು (Azim Premji) ದಾನ ಮಾಡೋದ್ರಲ್ಲಿ ಸದಾ ಮುಂದು. ವಿಪ್ರೋ ಸ್ಥಾಪಕರ ನೆಟ್ ವರ್ಥ್ 11.6 ಬಿಲಿಯನ್ ಡಾಲರ್. ಇವರು ವಿಶ್ವದಲ್ಲೇ ಬಿಲೇನಿಯರ್ ಪಟ್ಟಿಯಲ್ಲಿ 154ನೇ ಸ್ಥಾನದಲ್ಲಿದ್ದಾರೆ.
ಕೊಡುಗೈ ದಾನಿಯಾಗಿರುವ ಬೆಂಗಳೂರು ಮೂಲದ ಉದ್ಯಮಿ, ವಿಪ್ರೋ ಸಂಸ್ಥಾಪಕ ಅಜೀಂ ಪ್ರೇಮ್‌ಜಿ ದಾನ ಮಾಡೋದರಲ್ಲಿ ನಂ. 1 ಸ್ಥಾನದಲ್ಲಿರುತ್ತಾರೆ. . 2021ರಲ್ಲಿ ಅಜೀಂ ನಿತ್ಯ 27 ಕೋಟಿ ರೂಪಾಯಿಯಂತೆ ಒಂದು ವರ್ಷದಲ್ಲಿ ಒಟ್ಟಾರೆ 9713 ಕೋಟಿ ರು.ಗಳನ್ನು ವಿವಿಧ ಕಾರ್ಯಕ್ರಮಗಳಿಗಾಗಿ ವಿನಿಯೋಗಿಸಿದ್ದಾರೆ. ಇಂದಿಗೂ ಅದೇ ದಾನ ಕಾರ್ಯಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ.
ಬಿಲೆನಿಯರ್ ಅಜೀಂ ಪ್ರೇಮ್ ಜೀ ಅವರು ಬೆಂಗಳೂರಿನಲ್ಲೆ ನೆಲೆಸಿದ್ದು, ಇಲ್ಲಿನ ವೈಟ್ ಫೀಲ್ಡ್ ನಲ್ಲಿ ಐಷಾರಾಮಿ ಫಾರ್ಮ್ ಹೌಸ್ (luxury farmhouse) ನಿರ್ಮಿಸಿದ್ದಾರೆ. 6000 ಸ್ಕ್ವೇರ್ ಫೀಟ್ ವಿಸ್ತೀರ್ಣದಲ್ಲಿರುವ ಈ ಬಂಗಲೆ ವಾವ್ ಎನಿಸುವಷ್ಟು ಅದ್ಭುತವಾಗಿದೆ.
ಹಳೆ ಕಾಲದ ಸಾಂಪ್ರದಾಯಿಕ ಮನೆಯಂತಿರುವ (Traditonal House) ಈ ಫಾರ್ಮ್ ಹೌಸ್ (Farm House) ರಸ್ಟಿಕ್ ಟ್ರೆಡಿಶನಲ್ ಲುಕ್ ನಲ್ಲಿ (traditional rustic look) ನಿರ್ಮಿಸಲಾಗಿದೆ. ಮನೆಯ ಛಾವಣಿಯನ್ನು ಹಂಚಿನಿಂದ ನಿರ್ಮಿಸಲಾಗಿದ್ದು, ಅದ್ಭುತವಾಗಿ ಕಾಣಿಸುತ್ತದೆ,
ವುಡನ್ ಪ್ಯಾನೆಲ್ ಮತ್ತು ಡೆಕೋರೇಶನ್ ಹೊಂದಿರುವ ಈ ಐಷಾರಾಮಿ ಬಂಗಲೆಯು ಪ್ರಾಚೀನ ಮತ್ತು ಹಳ್ಳಿಗಾಡಿನ ಲುಕ್ ನಲ್ಲಿ ನಿರ್ಮಿಸಲಾಗಿದೆ, ಇಲ್ಲಿ ಅವರೊಬ್ಬ ಉದ್ಯಮಿ ಮತ್ತು ಬಿಜಿನೆಸ್ ಮೆನ್ ಆಗಿ ಮಾಡಿದ ಎಲ್ಲಾ ಸಾಧನೆಗಳ ಪ್ರಶಸ್ತಿಯನ್ನು ಕಾಣಬಹುದು.
ಈ ಅದ್ಭುತವಾದ ಫಾರ್ಮ್ ಹೌಸ್ (farm house) ಬೆಲೆ ಬರೋಬ್ಬರಿ 350 ಕೋಟಿ ರೂ ಎಂದು ಅಂದಾಜಿಸಲಾಗಿದೆ. ತೋಟದ ಮನೆಯಂತೆ ವಿನ್ಯಾಸಗೊಳಿಸಲಾದ ಇದರ ವಿನ್ಯಾಸದ ಹಿಂದಿನ ತತ್ವಶಾಸ್ತ್ರವು ಸಾಂಪ್ರದಾಯಿಕ ವಾಸ್ತುಶಿಲ್ಪದ ಮೇಲೆ ಕೇಂದ್ರೀಕೃತವಾಗಿದೆ, ಈ ಬಂಗಲೆಯ ಪ್ರತಿಯೊಂದು ಕಲ್ಲು ಮತ್ತು ಇಂಟೀರಿಯರ್ ಟ್ರೆಡಿಶನಲ್ ಆಗಿದೆ.
ಅಜೀಂ ಪ್ರೇಮ್ ಜಿ ಅವರ ಮನೆಯ ಲಿವಿಂಗ್ ರೂಮ್ ಸಾಫ್ಟ್ ವರ್ಮ್ ಬಣ್ಣಗಳಲ್ಲಿದೆ. ಇದು ಅತಿಥಿಗ಼ಳಿಗೆ ಅದ್ಭುತ ವಾತಾವರಣ ಸೃಷ್ಟಿಸುತ್ತೆ.ಸಂಕೀರ್ಣವಾದ ವಿವರ ಮತ್ತು ಐಷಾರಾಮಿ ಬಟ್ಟೆಗಳಿಂದ ಅಲಂಕರಿಸಲ್ಪಟ್ಟ ಭವ್ಯವಾದ ಪೀಠೋಪಕರಣಗಳು ಮಾಲೀಕರ ಅಭಿರುಚಿಗೆ ಸಾಕ್ಷಿಯಾಗಿದೆ. ಕೋಣೆಯನ್ನು ಸೊಗಸಾದ ಕಲಾಕೃತಿಗಳಿಂದ ಅಲಂಕರಿಸಲಾಗಿದೆ.
ತಮ್ಮ ಪ್ರಾಥಮಿಕ ನಿವಾಸದ ಹೊರತಾಗಿ, ಅಜೀಂ ಪ್ರೇಮ್‌ಜಿ ಅವರ ಅಪಾರ ಸಂಪತ್ತು ಮತ್ತು ಯಶಸ್ಸನ್ನು ಪ್ರತಿಬಿಂಬಿಸುವ ಹಲವಾರು ಬಂಗಲೆಗಳನ್ನು ಹೊಂದಿದ್ದಾರೆ. ವಿವಿಧ ಸ್ಥಳಗಳಲ್ಲಿ ವಿಭಿನ್ನವಾದ ಮನೆಗಳನ್ನು ಇವರು ಕಟ್ಟಿಸಿದ್ದಾರೆ. ಅಜೀಂ ಪ್ರೇಮ್ ಜಿ ಅವರ ಇತರ ಬಂಗಲೆಗಳ ವಿವರಗಳನ್ನು ಖಾಸಗಿಯಾಗಿ ಇಡಲಾಗಿದೆ. ಆದರೂ ಅದೆಷ್ಟು ಐಷಾರಾಮಿಯಾಗಿರಬಹುದು ಅನ್ನೋದನ್ನು ನೀವು ಊಹಿಸಬಹುದು.