ಚಿನ್ನದ ಬೆಲೆಯಲ್ಲಿ ಮತ್ತೆ ದಾಖಲೆಯ ಕುಸಿತ, ಹೀಗಿದೆ ಇಂದಿನ ದರ
ದೀಪಾವಳಿಗೆ ತೆರೆ, ಚಿನ್ನದ ದರವೂ ಇಳಿಕೆ| ಎರಡು ದಿನ ಕೊಂಚ ಏರಿದ್ದ ಚಿನ್ನದ ಬೆಲೆ ಮತ್ತೆ ಕುಸಿತ| ಹೀಗಿದೆ ನೋಡಿ ಇಂದು ನ.24ರ ಗೋಲ್ಡ್ ರೇಟ್
ಭಾರತದಲ್ಲಿ ಅತಿ ಹೆಚ್ಚು ಸಡಗರದಿಂದ ಆಚರಿಸಲಾಗುವ ದೀಪಾವಳಿ ಹಬ್ಬ ಕೊನೆಗೊಂಡಿದೆ. ದೀಪಾವಳಿಗೂ ಮುನ್ನ ಭಾರೀ ಏರಿಕೆ ಕಂಡಿದ್ದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದ್ದು ಗ್ರಾಹಕರಿಗೆ ಭಾರೀ ಖುಷಿ ಕೊಟ್ಟಿದೆ.
ಹೌದು ಕೊರೋನಾ ನಡುವೆ ಏರಿದ್ದ ಚಿನ್ನದ ರೇಟ್ ಹಬ್ಬ ಮುಗಿಯುತ್ತಿದ್ದಂತೆಯೇ ಕುಸಿದಿದೆ.
ಇಂದು ಬೆಂಗಳೂರಿನಲ್ಲಿ 10 ಗ್ರಾಂಗೆ 22 ಕ್ಯಾರೆಟ್ ಚಿನ್ನದ 10 ರೂ. ಕುಸಿದು 47,100 ರೂಪಾಯಿ ಆಗಿದೆ.
ಇನ್ನು, 24 ಕ್ಯಾರೆಟ್ನ 10 ಗ್ರಾಂ ಚಿನ್ನದ ದರದಲ್ಲೂ 10 ರೂ. ಇಳಿಕೆಯಾಗಿ 51,380 ರೂಪಾಯಿ ಆಗಿದೆ.
ಇನ್ನು ಇತ್ತ ಬೆಳ್ಳಿ ದರದಲ್ಲೂ 100ರೂ ಇಳಿಕೆಯಾಗಿದ್ದು,. ಒಂದು ಕೆ. ಜಿ. ಬೆಳ್ಳಿ ದರ 63,100ರೂ ಆಗಿದೆ.
ಒಂದು ವಾರದಲ್ಲಿ ದಾಖಲೆಯ ಇಳಿಕೆ: ದೀಪಾವಳಿ ಕೊನೆಗೊಂಡ ಮರುದಿನದಿಂದಲೇ ಚಿನ್ನದ ದರ ಇಳಿಕೆ ಕಾಣಲಾರಂಭಿಸಿದೆ. ಈ ಮೂಲಕ ಕಳೆದೊಂದು ವಾರದಲ್ಲಿ ಒಟ್ಟು 810 ರೂ. ಇಳಿಕೆ ಕಂಡಿದೆ.
ಇನ್ನೂ ಏರಿಕೆಯಾಗಲಿದೆ ಚಿನ್ನದ ಬೆಲೆ: ಶೀಘ್ರವೇ ಆಭರಣ ಚಿನ್ನದ ಬೆಲೆ 55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದ್ದಾರೆ. ಕೊರೋನಾ ಸೋಂಕು ಹರಡುವಿಕೆ ಇನ್ನೂ ನಿಂತಿಲ್ಲ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಿದೆ.
ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ. ಹೀಗಾಗಿ, ಚಿನ್ನ ಖರೀದಿ ಮಾಡಬೇಕು ಎನ್ನುವ ಆಲೋಚನೆಯಲ್ಲಿದ್ದವರು ಚಿಂತಾಕ್ರಾಂತರಾಗಿದ್ದಾರೆ. ಚಿನ್ನ ಖರೀದಿ ಮಾಡಬೇಕೋ ಅಥವಾ ಬೇಡವೋ ಎನ್ನುವ ಗೊಂದಲದಲ್ಲಿದ್ದಾರೆ.