ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಎಫೆಕ್ಟ್: ಬೆಳ್ಳಿ ಮತ್ತೆ ₹20,000 ಕುಸಿತ! ಚಿನ್ನದ ಬೆಲೆ ಎಷ್ಟಿದೆ?
ನವದೆಹಲಿ: ಜನವರಿ ಕೊನೆಯಿಂದಲೇ ಇಳಿಮುಖದ ಹಾದಿ ಹಿಡಿದಿದ್ದ ಚಿನ್ನ ಮತ್ತೆ ಇದೀಗ ಕೊಂಚ ಏರಿಕೆ ಕಂಡಿದೆ. ಜನವರಿ 04ರ ಅಂತ್ಯದ ವೇಳೆಗೆ ಚಿನ್ನ ಹಾಗೂ ಬೆಳ್ಳಿಯ ದರ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ

ಚಿನ್ನದ ಬೆಲೆಯಲ್ಲಿ ಮತ್ತೆ ಕುಸಿತ
ನಿರಂತರ ನಾಗಾಲೋಟದ ಬಳಿಕ ಇಳಿಮುಖವಾಗಿರುವ ಬೆಳ್ಳಿಯ ಬೆಲೆ ಕುಸಿತ ಮುಂದುವರೆದಿದೆ. ಇದು ಬೆಳ್ಳಿ ಖರೀದಿಸುವವರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.
ಮಂಗಳವಾರ ಮತ್ತೆ ಒಂದು ಕೆ.ಜಿಗೆ 20,000 ಕುಸಿತ
ಸೋಮವಾರ ಬೆಂಗಳೂರಿನಲ್ಲಿ ಕೆ.ಜಿ.ಗೆ 3,00,000 ರು. ಇದ್ದ ದರ ಮಂಗಳವಾರ 20,000 ರು. ಕುಸಿದು 2,80,000 ರು. ಆಗಿದೆ.
ಆಭರಣ ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ
ಅತ್ತ 22 ಕ್ಯಾರಟ್‌ನ 10 ಗ್ರಾಂ ಚಿನ್ನದ ದರದಲ್ಲಿ ಅಲ್ಪ ಏರಿಕೆಯಾಗಿದ್ದು, 14,040 ರು. ಇದ್ದದ್ದು 14,110 ರು. ಆಗಿದೆ.
24 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಏರಿಕೆ
24 ಕ್ಯಾರಟ್‌ನ 10 ಗ್ರಾಂ ಚಿನ್ನದ ಬೆಲೆ 760 ರು. ಏರಿಕೆ ಕಂಡಿದ್ದು, 15,317 ರು. ಇಂದ 15,393 ರು. ಆಗಿದೆ.
₹ ಮೌಲ್ಯವೃದ್ಧಿ:
ಭಾರತ-ಅಮೆರಿಕ ನಡುವೆ ಸೋಮವಾರ ತಡರಾತ್ರಿ ಘೋಷಣೆಯಾದ ವ್ಯಾಪಾರ ಒಪ್ಪಂದದಿಂದ ರೂಪಾಯಿಯ ಬಲವರ್ಧನೆಯಾಗಿದೆ.
ಡಾಲರ್ ಎದುರು 122 ಪೈಸೆ ರುಪಾಯಿ ಮೌಲ್ಯ ಏರಿಕೆ
ಅಮೆರಿಕದ ಡಾಲರ್ ಎದುರು 122 ಪೈಸೆ(ಶೇ.1.33) ಏರಿಕೆಯೊಂದಿಗೆ ರೂಪಾಯಿ ಮೌಲ್ಯ 90.27ಕ್ಕೆ ತಲುಪಿದೆ. ಇದು ಕಳೆದ ಎರಡೂವರೆ ವಾರದಲ್ಲಿ ಆದ ಅತಿಹೆಚ್ಚು ಏರಿಕೆ ಎನ್ನಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

