ಚಿನ್ನದ ಬೆಲೆಯಲ್ಲಿ 700 ರೂ.ವರೆಗೆ ಇಳಿಕೆ; ಚಿನ್ನದಂಥಾ ಅವಕಾಶ ಮಿಸ್ ಮಾಡ್ಕೊಂಡು ನಿರಾಶರಾಗಬೇಡಿ
Gold And Silver Price Today: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದ್ದು, ಇಂದು 22 ಕ್ಯಾರಟ್ ಚಿನ್ನದ ಬೆಲೆ 10 ಗ್ರಾಂಗೆ 87,190 ರೂ. ಮತ್ತು 24 ಕ್ಯಾರಟ್ ಚಿನ್ನದ ಬೆಲೆ 95,170 ರೂ. ಆಗಿದೆ. ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದ್ದು, 10 ಗ್ರಾಂ ಬೆಳ್ಳಿ 997 ರೂ.ಗೆ ಲಭ್ಯವಿದೆ.

ಚಿನ್ನದ ಬೆಲೆ ಅಷ್ಟು ಏರಿಕೆಯಾಗುತ್ತೆ? ಇಷ್ಟು ಹೆಚ್ಚಾಗುತ್ತೆ ಎಂಬ ವಿಶ್ಲೇಷಣೆಯ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದ್ರೆ ಪ್ರತಿನಿತ್ಯ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ವ್ಯತ್ಯಾಸ ಆಗುತ್ತಿರುತ್ತವೆ. ಸತತವಾಗಿ ದರ ಇಳಿಕೆಯಾಗುತ್ತಿದೆ ಅಂದ್ರೆ ಯಾವುದೇ ದಿನ ದಿಢೀರ ಬೆಲೆ ಹೆಚ್ಚಾಗುತ್ತದೆ. ಹಾಗಾಗಿ ಬೆಲೆ ಸ್ಥಿರವಾಗಿ ಇಳಿಕೆಯಾದ ಚಿನ್ನ ಖರೀದಿಸೋದು ಉತ್ತಮ.
ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಇಳಿಕೆಯಾಗುತ್ತಲಿದೆ. ಮಂಗಳವಾರ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆಯಲ್ಲಿ 350 ರೂ.ಗಳವರೆಗೆ ಕಡಿಮೆಯಾಗಿತ್ತು. ಮೂರು ದಿನಗಳಲ್ಲಿ ಒಟ್ಟು 700 ರೂ.ಗಳವರೆಗೆ ದರ ಕಡಿಮೆಯಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,719 ರೂಪಾಯಿ
8 ಗ್ರಾಂ: 69,752 ರೂಪಾಯಿ
10 ಗ್ರಾಂ: 87,190 ರೂಪಾಯಿ
100 ಗ್ರಾಂ: 8,71,900 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,517 ರೂಪಾಯಿ
8 ಗ್ರಾಂ: 76,136 ರೂಪಾಯಿ
10 ಗ್ರಾಂ: 95,170 ರೂಪಾಯಿ
100 ಗ್ರಾಂ: 9,51,700 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,190 ರೂಪಾಯಿ, ಬೆಂಗಳೂರು: 87,190 ರೂಪಾಯಿ, ಮುಂಬೈ: 87,190 ರೂಪಾಯಿ, ಪುಣೆ: 87,190 ರೂಪಾಯಿ, ದೆಹಲಿ: 87,340 ರೂಪಾಯಿ, ಕೋಲ್ಕತ್ತಾ: 87,190 ರೂಪಾಯಿ, ಹೈದರಾಬಾದ್: 87,190 ರೂಪಾಯಿ, ಕೇರಳ: 87,190 ರೂಪಾಯಿ., ಅಹಮದಾಬಾದ್: 87,190 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 997 ರೂಪಾಯಿ
100 ಗ್ರಾಂ: 9,970 ರೂಪಾಯಿ
1000 ಗ್ರಾಂ: 99,700 ರೂಪಾಯಿ
ಬೆಲೆ ಏರಿಕೆಗೆ ಕಾರಣವೇನು?
ಸ್ಥಳೀಯ ಆಭರಣ ವ್ಯಾಪಾರಿಗಳು ಮತ್ತು ಚಿಲ್ಲರೆ ವ್ಯಾಪಾರಿಗಳಿಂದ ಚಿನ್ನಕ್ಕೆ ಭಾರೀ ಬೇಡಿಕೆ ಸೃಷ್ಟಿಯಾದ ಕಾರಣದ ದರದಲ್ಲಿ ಏರಿಕೆಯಾಗಿದೆ. ಇದರ ಜೊತೆಗೆ ಅಮೆರಿಕ ಮತ್ತು ಚೀನಾದ ನಡುವಿನ ಸುಂಕ ಸಮರದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನದ ಬೆಲೆ ಏರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗಿದೆ.