ಇಂದು ಚಿನ್ನದ ಬೆಲೆಯಲ್ಲಿ 11,400 ರೂಪಾಯಿ ಇಳಿಕೆ: ಗ್ರಾಹಕರು ಖುಷ್, ಖರೀದಿಗೆ ಇದುವೇ ಶುಭ ಮುಹೂರ್ತ
Gold And Silver Price today: ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. 22, 24 ಮತ್ತು 18 ಕ್ಯಾರಟ್ ಚಿನ್ನದ ದರಗಳು ಇಳಿಕೆಯಾಗಿವೆ. ಬೆಳ್ಳಿ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.

ಇಂದು ಚಿನ್ನದ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. ಭಾನುವಾರ ಬೆಲೆ ಸ್ಥಿರವಾಗಿದ್ರೆ, ಸೋಮವಾರ ದರ ಇಳಿಕೆಯಾಗಿತ್ತು. 1 ಲಕ್ಷದ ಗಡಿ ದಾಟಿದ್ದ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ.
22, 24 ಮತ್ತು 18 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಪ್ರತಿದಿನವೂ ಇಳಿಕೆಯಾಗುತ್ತಿರುತ್ತದೆ. ಹಾಗಾಗಿ ಖರೀದಿಗೂ ಮುನ್ನ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳಬೇಕು. ಇಂದು ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,037 ರೂಪಾಯಿ
8 ಗ್ರಾಂ: 80,296 ರೂಪಾಯಿ
10 ಗ್ರಾಂ: 1,00,370 ರೂಪಾಯಿ
100 ಗ್ರಾಂ:10,03,700 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,200 ರೂಪಾಯಿ
8 ಗ್ರಾಂ: 73,600 ರೂಪಾಯಿ
10 ಗ್ರಾಂ: 92,000 ರೂಪಾಯಿ
100 ಗ್ರಾಂ: 9,20,000 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 7,528 ರೂಪಾಯಿ
8 ಗ್ರಾಂ: 60,224 ರೂಪಾಯಿ
10 ಗ್ರಾಂ: 75,280 ರೂಪಾಯಿ
100 ಗ್ರಾಂ: 7,52,800 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 92,000 ರೂಪಾಯಿ, ಮುಂಬೈ: 92,000 ರೂಪಾಯಿ, ದೆಹಲಿ: 92,150 ರೂಪಾಯಿ, ಕೋಲ್ಕತ್ತಾ: 92,000 ರೂಪಾಯಿ, ಬೆಂಗಳೂರು: 92,000 ರೂಪಾಯಿ, ವಡೋದರಾ: 92,050 ರೂಪಾಯಿ, ಪುಣೆ: 92,000 ರೂಪಾಯಿ, ಹೈದರಾಬಾದ್: 92,000 ರೂಪಾಯಿ.
ದೇಶದಲ್ಲಿಂದು ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,100 ರೂಪಾಯಿ
100 ಗ್ರಾಂ: 11,000 ರೂಪಾಯಿ
1000 ಗ್ರಾಂ: 1,10,000 ರೂಪಾಯಿ
ಎಷ್ಟು ಇಳಿಕೆ?
22 ಕ್ಯಾರಟ್ 100 ಗ್ರಾಂ: 11,400 ರೂಪಾಯಿ
24 ಕ್ಯಾರಟ್ 100 ಗ್ರಾಂ: 10,500 ರೂಪಾಯಿ
18 ಕ್ಯಾರಟ್ 100 ಗ್ರಾಂ: 8,600 ರೂಪಾಯಿ
ಬೆಳ್ಳಿ ಏರಿಕೆ
100 ಗ್ರಾಂ ಬೆಳ್ಳಿ ಬೆಲೆಯಲ್ಲಿ 100 ರೂ.ಗಳಷ್ಟು ಏರಿಕೆಯಾಗಿದೆ.