ಇಳಿಕೆ ಹಾದಿಯಲ್ಲಿ ಚಿನ್ನ, ಕಡಿಮೆಯಾದ ಬಂಗಾರದ ಬೆಲೆ; 5 ದಿನದಲ್ಲಿ 3,130 ರೂಪಾಯಿ ಕುಸಿತ!
Gold And Silver Price: ದೇಶದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯತ್ತ ಸಾಗುತ್ತಿದೆ. ಕಳೆದ 5 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,130 ರೂಪಾಯಿಯವರೆಗೆ ಇಳಿಕೆ ಕಂಡು ಬಂದಿದೆ. ಇಂದು 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆ ಇಳಿಕೆಯಾಗಿದೆ, ಆದರೆ ಬೆಳ್ಳಿ ದರ ಸ್ಥಿರವಾಗಿದೆ.

ದೇಶದಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಬಳಿಕ ಚಿನ್ನದ ಬೆಲೆಯಲ್ಲಿ ಇಳಿಕೆಯತ್ತ ಸಾಗುತ್ತಿದೆ. ಗುಡ್ ರಿಟರ್ನ್ಸ್ ವರದಿ ಪ್ರಕಾರ, ಕಳೆದ 5 ದಿನಗಳಲ್ಲಿ 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 3,130 ರೂಪಾಯಿಯವರೆಗೆ ಇಳಿಕೆ ಕಂಡು ಬಂದಿ
ಹೌದು, ಏಪ್ರಿಲ್ 22ರಂದು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 1 ಲಕ್ಷ ರೂ.ಯ ಗಡಿಯನ್ನು ದಾಟಿತ್ತು. ಮರುದಿನವೇ 3,000 ರೂ.ಗಳಷ್ಟು ಕುಸಿತ ಕಂಡು ಬಂದಿತ್ತು. ನಂತರ ಇಳಿಕೆಯ ಮಾರ್ಗದಲ್ಲಿಯೇ ಚಿನ್ನ ಸಾಗುತ್ತಿದೆ. ಇಂದು ಸಹ ಚಿನ್ನದ ಬೆಲೆ ಕಡಿಮೆಯಾಗಿದೆ.
ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ ಬೆಲೆ ಇಳಿಕೆಯಾಗಿದೆ. ಆದ್ರೆ ಬೆಳ್ಳಿ ದರ ಸ್ಥಿರವಾಗಿದೆ. 1 ಕೆಜಿ ಬೆಳ್ಳಿ ಬೆಲೆಯೂ ಲಕ್ಷಕ್ಕೂ ಅಧಿಕವಾಗಿದೆ. ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,002 ರೂಪಾಯಿ
8 ಗ್ರಾಂ: 72,016 ರೂಪಾಯಿ
10 ಗ್ರಾಂ: 90,020 ರೂಪಾಯಿ
100 ಗ್ರಾಂ: 9,00,200 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,821 ರೂಪಾಯಿ
8 ಗ್ರಾಂ: 78,568 ರೂಪಾಯಿ
10 ಗ್ರಾಂ: 98,210 ರೂಪಾಯಿ
100 ಗ್ರಾಂ: 9,82,100 ರೂಪಾಯಿ
ದೇಶದಲ್ಲಿಂದು 18 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ:7,366 ರೂಪಾಯಿ
8 ಗ್ರಾಂ: 58,928 ರೂಪಾಯಿ
10 ಗ್ರಾಂ: 73,660 ರೂಪಾಯಿ
100 ಗ್ರಾಂ: 7,36,600 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?
ದೇಶದ ಪ್ರಮುಖ ನಗರಗಳಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನದ ದರ ಈ ರೀತಿಯಾಗಿದೆ. ಚೆನ್ನೈ: 90,020 ರೂಪಾಯಿ, ಮುಂಬೈ: 90,020 ರೂಪಾಯಿ, ಬೆಂಗಳೂರು: 90,020 ರೂಪಾಯಿ, ದೆಹಲಿ: 90,170 ರೂಪಾಯಿ, ಹೈದರಾಬಾದ್: 90,020 ರೂಪಾಯಿ, ಕೇರಳ: 90,020 ರೂಪಾಯಿ, ಅಹಮದಾಬಾದ್: 90,070 ರೂಪಾಯಿ, ಚಂಡೀಗಢ: 90,170 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ದೇಶದಲ್ಲಿ ಚಿನ್ನದ ಜೊತೆ ಬೆಳ್ಳಿ ದರದಲ್ಲಿಯೂ ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ.
10 ಗ್ರಾಂ: 1,009 ರೂಪಾಯಿ
100 ಗ್ರಾಂ: 10,090 ರೂಪಾಯಿ
1000 ಗ್ರಾಂ: 1,00,900 ರೂಪಾಯಿ