ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದ ಬಂಗಾರ; ಚಿನ್ನದಂಗಡಿಗೆ ಹೋಗೋಕು ಇನ್ಮುಂದೆ ಧಮ್ ಬೇಕು!
Gold And Silver Price: ಚಿನ್ನದ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನ 1,04,950 ರೂಪಾಯಿ. ತಲುಪಿದೆ. ಬೆಳ್ಳಿ ಬೆಲೆಯೂ ಏರಿಕೆ ಕಂಡಿದೆ.

ಚಿನ್ನದ ಬೆಲೆ ಹಂತ ಹಂತವಾಗಿ ಏರಿಕೆಯಾಗುತ್ತಲೇ ಇದೆ. ಆದ್ರೆ ಇಂದು ಹಳದಿ ಲೋಹ ತನ್ನ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿದೆ. ಇನ್ಮುಂದೆ ಚಿನ್ನದಂಗಡಿಗೆ ಹೋಗಬೇಕೆಂದ್ರೆ ಗುಂಡಿಗೆ ಗಟ್ಟಿಯಾಗಿರಬೇಕಾಗುತ್ತದೆ. 1 ಗ್ರಾಂ ಚಿನ್ನ ಖರೀದಿ ಮಾಡೋಕೆ ಸಾಮಾನ್ಯ ಕೂಲಿಕಾರರು ನಾಲ್ಕು ದಿನ ದುಡಿಯಬೇಕಾಗುತ್ತದೆ.
ಇಂದು ಚಿನ್ನದ ಬೆಲೆಯಲ್ಲಿ ಗಣನೀಯವಾಗಿ ಏರಿಕೆ ಕಂಡು ಬಂದಿದೆ. 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,640 ರೂಪಾಯಿ ಏರಿಕೆ ಕಂಡು ಬಂದಿದೆ. ಇನ್ನು 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 1,500 ರೂಪಾಯಿ ಏರಿಕೆಯಾಗಿದೆ. ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ಭಾರತದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 9,620 ರೂಪಾಯಿ
8 ಗ್ರಾಂ: 76,960 ರೂಪಾಯಿ
10 ಗ್ರಾಂ: 96,200 ರೂಪಾಯಿ
100 ಗ್ರಾಂ: 9,62,000 ರೂಪಾಯಿ
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 10,495 ರೂಪಾಯಿ
8 ಗ್ರಾಂ: 83,960 ರೂಪಾಯಿ
10 ಗ್ರಾಂ: 1,04,950 ರೂಪಾಯಿ
100 ಗ್ರಾಂ: 10,49,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿಂದು ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಬೆಲೆ ಹೀಗಿದೆ. ಚೆನ್ನೈ: 96,200 ರೂಪಾಯಿ, ಮುಂಬೈ: 96,200 ರೂಪಾಯಿ, ದೆಹಲಿ: 96,350 ರೂಪಾಯಿ, ಕೋಲ್ಕತ್ತಾ: 96,200 ರೂಪಾಯಿ, ಬೆಂಗಳೂರು: 96,200 ರೂಪಾಯಿ, ಪುಣೆ: 96,200 ರೂಪಾಯಿ, ವಡೋದರ: 96,250 ರೂಪಾಯಿ, ಅಹಮದಬಾದ್: 96,250 ರೂಪಾಯಿ
ದೇಶದಲ್ಲಿಂದು ಬೆಳ್ಳಿ ಬೆಲೆ
ಇಂದು ಚಿನ್ನದ ಜೊತೆಯಲ್ಲಿಯೂ ಬೆಳ್ಳಿ ಬೆಲೆ ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 1,100 ರೂಪಾಯಿಗಳಷ್ಟು ಏರಿಕೆಯಾಗಿದೆ. ಇಂದಿನ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
10 ಗ್ರಾಂ: 1,210 ರೂಪಾಯಿ
100 ಗ್ರಾಂ: 12,100 ರೂಪಾಯಿ
1000 ಗ್ರಾಂ: 1,21,000 ರೂಪಾಯಿ