- Home
- Business
- ಸಂಬಳದಲ್ಲಿ ಖರ್ಚು-ವೆಚ್ಚ ತೆಗೆದು ಇನ್ನು ಹಣ ಉಳಿದಿದ್ಯಾ? ಹಾಗಿದ್ರೆ ಖರೀದಿಸಿ ಚಿನ್ನ, ಬೆಲೆ ಇಳಿಕೆ ನಂತರ ಪರಿಷ್ಕೃತ ದರ ಇಲ್ಲಿದೆ
ಸಂಬಳದಲ್ಲಿ ಖರ್ಚು-ವೆಚ್ಚ ತೆಗೆದು ಇನ್ನು ಹಣ ಉಳಿದಿದ್ಯಾ? ಹಾಗಿದ್ರೆ ಖರೀದಿಸಿ ಚಿನ್ನ, ಬೆಲೆ ಇಳಿಕೆ ನಂತರ ಪರಿಷ್ಕೃತ ದರ ಇಲ್ಲಿದೆ
Gold And Silver Price Today: ತಿಂಗಳ ಸಂಬಳದಲ್ಲಿ ಉಳಿದ ಹಣದಲ್ಲಿ ಚಿನ್ನ ಖರೀದಿಸಲು ಇದು ಸಕಾಲ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಮತ್ತು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಎಷ್ಟು ಇಳಿಕೆಯಾಗಿದೆ ಎಂಬುದರ ಮಾಹಿತಿ ಇಲ್ಲಿದೆ.

ಕೆಲವೊಂದು ಬಾರಿ ಸಂಬಳ ಹಣದಲ್ಲಿ ಒಂದಿಷ್ಟು ಹಣ ಉಳಿದಿರುತ್ತದೆ. ಮನೆಯ ಎಲ್ಲಾ ಖರ್ಚು ವೆಚ್ಚಗಳನ್ನು ತೆಗೆದು ಸ್ವಲ್ಪ ಹಣ ಮಿಕ್ಕಿರುತ್ತದೆ. ಈ ಹಣವನ್ನು ಹಾಗೆ ಇರಿಸಿಕೊಂಡು ಅದು ಸಹ ತಿಂಗಳ ಕೊನೆಗೆ ಖಾಲಿಯಾಗುತ್ತದೆ. ಈ ತಿಂಗಳ ಸಂಬಳದಲ್ಲಿ ಹಣ ಉಳಿದಿದ್ರೆ ಇಂದು ಚಿನ್ನವನ್ನು ಖರೀದಿಸಿ. ಕಾರಣ ಇವತ್ತು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
ಇಂದು ಒಂದು ಜೊತೆ ಬ್ರಾಂಡೆಡ್ ಬಟ್ಟೆ, ಶೂ, ಸನ್ ಗ್ಲಾಸ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿ ಮಾಡಲು 8 ರಿಂದ 10 ಸಾವಿರ ರೂಪಾಯಿ ಖರ್ಚು ಆಗುತ್ತದೆ. ಇದೇ ಹಣದಲ್ಲಿ ನಿಮಗೆ 1 ಗ್ರಾಂಗಿಂತಲೂ ಹೆಚ್ಚಿನ ಚಿನ್ನ ಸಿಗುತ್ತದೆ. ಭವಿಷ್ಯದಲ್ಲಿ ಈ ಚಿನ್ನವನ್ನು ಮಾರಾಟ ಮಾಡಬಹುದು. ಆದರೆ ಬಟ್ಟೆಗಳನ್ನು ಮಾರಾಟ ಮಾಡಲು ಆಗಲ್ಲ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಎಂದು ನೋಡೋಣ ಬನ್ನಿ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,209 ರೂಪಾಯಿ
8 ಗ್ರಾಂ: 65,672 ರೂಪಾಯಿ
10 ಗ್ರಾಂ: 82,090 ರೂಪಾಯಿ
100 ಗ್ರಾಂ: 8,20,900 ರೂಪಾಯಿ
ದೇಶದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,955 ರೂಪಾಯಿ
8 ಗ್ರಾಂ: 71,640 ರೂಪಾಯಿ
10 ಗ್ರಾಂ: 89,550 ರೂಪಾಯಿ
100 ಗ್ರಾಂ: 8,95,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 82,090 ರೂಪಾಯಿ, ಮುಂಬೈ: 82,090 ರೂಪಾಯಿ, ದೆಹಲಿ: 82,240 ರೂಪಾಯಿ, ಬೆಂಗಳೂರು: 82,090 ರೂಪಾಯಿ, ಕೋಲ್ಕತ್ತಾ: 82,090 ರೂಪಾಯಿ, ಹೈದರಾಬಾದ್: 82,090 ರೂಪಾಯಿ, ಪುಣೆ: 82,090 ರೂಪಾಯಿ
ಎಷ್ಟು ಇಳಿಕೆ?
ಇಂದು ದೇಶದಲ್ಲಿ 22 ಮತ್ತು 24 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 100 ರೂ.ಗಳಷ್ಟು ಇಳಿಕೆಯಾಗಿದೆ. ಪ್ರತಿನಿತ್ಯ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿದೆ. ಚಿನ್ನದ ಜೊತೆಯಲ್ಲಿ ಬೆಳ್ಳಿ ದರವೂ ಇಳಿಕೆಯಾಗಿದೆ. 1 ಕೆಜಿ ಬೆಳ್ಳಿ ದರದಲ್ಲಿ 100 ರೂ.ಗಳಷ್ಟು ಕಡಿಮೆಯಾಗಿದೆ.
ಇಂದಿನ ಬೆಳ್ಳಿ ಬೆಲೆ
ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಇದರಿಂದ ದೇಶೀಯ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ರೂಪಾಯಿ ಮೌಲ್ಯದಲ್ಲಿ ಏರಿಕೆ, ಇಳಿಕೆಯಾದಂತೆಯೂ ಚಿನ್ನ ಬೆಳ್ಳಿ ದರ ವ್ಯತ್ಯಾಸವಾಗುತ್ತಿದೆ. ಇಂದು ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.
10 ಗ್ರಾಂ: 1,028 ರೂಪಾಯಿ
100 ಗ್ರಾಂ: 10,280 ರೂಪಾಯಿ
1000 ಗ್ರಾಂ: 1,02,800 ರೂಪಾಯಿ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.