ಇಳಿಕೆ ಕಾಣುತ್ತಿರುವ ಚಿನ್ನ ಬೆಲೆ ಇಸ್ರೇಲ್-ಇರಾನ್ ಯುದ್ಧದಿಂದ ಪಾತಾಳಕ್ಕೆ ಕುಸಿಯುತ್ತಾ?
ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಯುದ್ಧ ಆರಂಭಗೊಳ್ಳುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಭಾರಿ ಕುಸಿತವಾಗಿದೆ. ಇಂದು ಕೂಡ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ. ಇಸ್ರೇಲ್-ಇರಾನ್ ಯುದ್ಧದಿಂದ ಚಿನ್ನದ ಬೆಲೆ ಮತ್ತಷ್ಟು ಕುಸಿಯುತ್ತಾ?

ಚಿನ್ನದ ಬೆಲೆ ಕಳೆದ ಕೆಲ ದಿನಗಳಿಂದ ಇಳಿಕೆಯತ್ತ ಸಾಗಿದೆ. ಭಾರತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ. ಇದು ಜನಸಾಮಾನ್ಯರ ಮುಖದಲ್ಲಿ ಮಂದಹಾಸ ಮೂಡಿಸಿದೆ. 1 ಲಕ್ಷ ರೂಪಾಯಿ ಗಡಿ ದಾಟಿದ್ದ ಚಿನ್ನ ಇದೀಗ ನಿಧಾನವಾಗಿ ಇಳಿಕೆಯಾಗುತ್ತಿದೆ. ವಿಶೇಷ ಅಂದರೆ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ ಆರಂಭಗೊಂಡ ಬಳಿಕ ಹಂತ ಹಂತವಾಗಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ಇದೀಗ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಚಿನ್ನದ ಬೆಲೆಯಲ್ಲೂ ಭಾರಿ ಇಳಿಕೆಯಾಗಿದೆ.
ಇರಾನ್-ಇಸ್ರೇಲ್ ಯುದ್ಧದಿಂದ ಹಲವು ವಸ್ತುಗಳ ಬೆಲೆ ಏರಿಕೆ ಬಿಸಿ ಶುರುವಾಗಿದೆ. ಪ್ರಮುಖವಾಗಿ ತೈಲ ಬೆಲೆ, ಗ್ಯಾಸ್ ಸೇರಿದಂತೆ ಹಲವು ಬೆಲೆಗಳಲ್ಲಿ ಭಾರಿ ಏರಿಕೆ ಸಾಧ್ಯತೆ ದಟ್ಟವಾಗಿದೆ. ಆದರೆ ಚಿನ್ನದ ಬೆಲೆ ಮಾತ್ರ ಕುಸಿತವಾಗುತ್ತಿದೆ. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದಿಂದ ಚಿನ್ನದ ದರ ಮತ್ತಷ್ಟು ಇಳಿಕೆಯಾಗಿ, ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗುತ್ತಾ ಅನ್ನೋ ಪ್ರಶ್ನೆಗಳು ಎದ್ದಿದೆ. ಇದಕ್ಕೆ ತಜ್ಞರು ಉತ್ತರ ನೀಡಿದ್ದಾರೆ.
ಇರಾನ್ ಇಸ್ರೇಲ್ ಯುದ್ದದಿಂದ ತೈಲ ಬೆಲೆ ಹೆಚ್ಚಳ, ಈಕ್ವಿಟಿ ಮಾರುಕಟ್ಟೆಯಲ್ಲಿ ತಲ್ಲಣ ಸೇರಿದಂತೆ ಹಲವು ಬದಲಾವಣೆಯಾಗಿದೆ. ಆದರೆ ಚಿನ್ನ ಮಾರುಕಟ್ಟೆಗೆ ಯಾವುದೇ ಆತಂಕ ಎದುರಾಗಿಲ್ಲ. ಬದಲಾಗಿ ಚಿನ್ನ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗುತ್ತಿದೆ. ಇದಕ್ಕೆ ಪ್ರಮುಖ ಕಾರಣ ಈ ಯುದ್ಧದಿಂದ ಅಮೆರಿಕನ್ ಡಾಲರ್ ಮೇಲೆ ಇದುವರೆಗೂ ಯಾವುದೇ ಪರಿಣಾಮ ಬೀರಿಲ್ಲ. ಇಷ್ಟೇ ಅಲ್ಲ ಸದ್ಯ ಎಲ್ಲರ ಚಿತ್ತ ಡೋನಾಲ್ಡ್ ಟ್ರಂಪ್ ತೆರಿಗೆ ನೀತಿ, ಜೊತೆಗೆ ಫೆಡರಲ್ ಬ್ಯಾಂಕ್ ಬಡ್ಡಿದರದ ಮೇಲೆ ಚಿನ್ನದ ಬೆಲೆ ನಿಂತಿದೆ.
ಚೀನಾ ಹಾಗೂ ರಷ್ಯಾ ಕೇಂದ್ರ ಬ್ಯಾಂಕ್ ಭೌತಿಕ ಚಿನ್ನ ಸಂಗ್ರಹಿಸುತ್ತಿದೆ. ಇನ್ನು ಅಮೆರಿಕ, ಚೀನಾ ಹಾಗೂ ರಷ್ಯಾದಲ್ಲಿ ಸಣ್ಣ ಬದಲಾವಣೆ ಚಿನ್ನದ ಬೆಲೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಆದರೆ ಇದುವರೆಗೆ ಇಸ್ರೇಲ್-ಇರಾನ್ ಯುದ್ಧ ಚಿನ್ನದ ಮೇಲೆ ಪರಿಣಾಮ ಬೀರಿಲ್ಲ. ಜೊತೆಗೆ ಡಾಲರ್ ಬೆಲೆಯಲ್ಲಿ ಯಾವುದೇ ವ್ಯತ್ಯಸಾಗದೇ ಇರುವುದು ಪ್ರಮುಖ ಕಾರಣವಾಗಿದೆ. ಇನ್ನು ಫೆಡರಲ್ ಬ್ಯಾಂಕ್ ಬಡ್ಡಿ ದರದಲ್ಲಿ ಹೆಚ್ಚಿನ ಬದಲಾವಣೆ ಮಾಡದೇ ಯಥಾ ಸ್ಥಿತಿ ಕಾಪಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ.
ಕಳೆದವಾರ ನಿರೀಕ್ಷೆಗಿಂ ಕಡಿಮೆ ಹಣದುಬ್ಬರ ಕೂಡ ಚಿನ್ನದ ದರ ಇಳಿಕೆಯಲ್ಲಿ ಸಹಕರಿಸಿದೆ.ಇತ್ತ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕ ಸೆಂಟ್ರಲ್ ಬ್ಯಾಂಕ್ ಬ್ಯಾಂಕ್ ನೀತಿ ಸಡಿಲಗೊಳಿಸುವ ಸಾಧ್ಯತೆ. ಈ ಎಲ್ಲಾ ಕಾರಣಗಳಿಂದ ಸದ್ಯ ಚಿನ್ನದ ಬೆಲೆ ಇಳಿಕೆಯಾಗಿದೆ. ಆದರೆ ಇರಾನ್ ಹಾಗೂ ಇಸ್ರೇಸ್ ಯುದ್ಧ ಹೀಗೆ ಮುಂದುವರಿದರೆ, ಚಿನ್ನದ ಮೇಲೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಇಷ್ಟೇ ಅಲ್ಲ ಅಮೆರಿಕನ್ ಡಾಲರ್ ಮೇಲೆ ವ್ಯತಿರಿಕ್ತ ಪರಿಣಾಮ ಕೂಡ ಚಿನ್ನದ ಬೆಲೆಯಲ್ಲಿ ವ್ಯತ್ಯಾಸ ಮಾಡಲಿದೆ.
ಡೋನಾಲ್ಡ್ ಟ್ರಂಪ್ ಸುಂಕ ನೀತಿಯಲ್ಲಿ ಹೆಚ್ಚಿನ ಸಡಿಲಿಕೆಯನ್ನು ನಿರೀಕ್ಷಿಸುತ್ತಿದ್ದಾರೆ. ಮುಂದಿನ ವಾರ ಟ್ರಂಪ್ ಸುಂಕದ ಹೊಸ ದರ ಪಟ್ಟಿ ಘೋಷಣೆಯಾಗಲಿದೆ. ಈ ನೀತಿ ಪೂರಕವಾಗಿದ್ದರೆ ಚಿನ್ನದ ದರದಲ್ಲಿ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ. ಆದರೆ ವ್ಯತಿರಿಕ್ತವಾದರೆ ಚಿನ್ನದ ಬೆಲೆ ಮತ್ತೆ ಏರಿಕೆಯಾಗುವ ಸಾಧ್ಯತೆ ಇದೆ.