ಜೆಡಬ್ಲ್ಯು ಕೆಲ್ಲಿ ಅವರ ಸಹಿ ಇರುವ 1 ರೂಪಾಯಿ ನೋಟು ನಿಮ್ಮಲಿದ್ಯಾ? ಇದ್ದಲ್ಲಿ ಲಕ್ಷಾಧಿಪತಿ ಆಗಬಹುದು..
1935 ರಲ್ಲಿ ಬ್ರಿಟಿಷ್ ಇಂಡಿಯಾ ಗವರ್ನರ್ ಜೆ.ಡಬ್ಲ್ಯೂ. ಕೆಲ್ಲಿ ಅವರ ಸಹಿಯುಳ್ಳ ಒಂದು ರೂಪಾಯಿ ನೋಟು ಇದ್ದರೆ, ನೀವು 7 ಲಕ್ಷ ರೂಪಾಯಿ ಗಳಿಸಬಹುದು.
ಒಂದು ರೂಪಾಯಿ ನೋಟು
1935 ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಬಿಡುಗಡೆಯಾದ ಒಂದು ರೂಪಾಯಿ ನೋಟು ಇದ್ದರೆ, ಆನ್‌ಲೈನ್ ಹರಾಜಿನಲ್ಲಿ 7 ಲಕ್ಷ ರೂ.ವರೆಗೆ ಗಳಿಸಬಹುದು. ಗವರ್ನರ್ ಜೆ.ಡಬ್ಲ್ಯೂ. ಕೆಲ್ಲಿ ಅವರ ಸಹಿಯುಳ್ಳ ನೋಟು ನಿಮ್ಮನ್ನು ಲಕ್ಷಾಧಿಪತಿಯನ್ನಾಗಿ ಮಾಡಬಹುದು.
ಹಳೆಯ 1 ರೂಪಾಯಿ ನೋಟು
ನೀವು ಹಳೆಯ ನೋಟು ಮತ್ತು ನಾಣ್ಯಗಳನ್ನು ಸಂಗ್ರಹಿಸುವವರಾಗಿದ್ದರೆ, ನಿಮಗೆ ಅದೃಷ್ಟ ಸಿಗಲಿದೆ. ಹಳೆಯ ನೋಟು ಮತ್ತು ನಾಣ್ಯಗಳಿಗೆ ಬೇಡಿಕೆ ಹೆಚ್ಚಿದೆ. ಕೆಲವು ಆನ್‌ಲೈನ್ ಹರಾಜುಗಳಲ್ಲಿ ಹಳೆಯ ನೋಟುಗಳು ಲಕ್ಷಾಂತರ ರೂಪಾಯಿಗೆ ಮಾರಾಟವಾಗುತ್ತಿವೆ.
1935 ರ ಒಂದು ರೂಪಾಯಿ ನೋಟು
ಹಳೆಯ ನೋಟುಗಳ ಬೇಡಿಕೆಗೆ ಸಾಕ್ಷಿಯಾಗಿರುವ ಒಂದು ವೇದಿಕೆ 'ಕಾಯಿನ್ ಬಜಾರ್'. ಅಲ್ಲಿ ಅನೇಕರು ಹಳೆಯ ನೋಟು ಮತ್ತು ನಾಣ್ಯಗಳನ್ನು ಲಾಭದಾಯಕ ಬೆಲೆಗೆ ಮಾರಾಟ ಮಾಡುತ್ತಾರೆ ಹಾಗೂ ಕೊಳ್ಳುತ್ತಾರೆ. 1 ರೂಪಾಯಿ, 2 ರೂಪಾಯಿ ನೋಟುಗಳನ್ನು ಸಹ ಈ ವೇದಿಕೆಯಲ್ಲಿ ಮಾರಾಟ ಮಾಡಬಹುದು.
ಜೆ.ಡಬ್ಲ್ಯೂ. ಕೆಲ್ಲಿ ಅವರ ಸಹಿ ಇರುವ ನೋಟು
ಒಂದು ರೂಪಾಯಿ ನೋಟಿಗೆ ಹೆಚ್ಚಿನ ಬೆಲೆ ಏಕೆ ಎಂದು ನೀವು ಆಶ್ಚರ್ಯಪಡಬಹುದು. 29 ವರ್ಷಗಳ ಹಿಂದೆ ಭಾರತ ಸರ್ಕಾರ 1 ರೂಪಾಯಿ ನೋಟಿನ ಮುದ್ರಣ ನಿಲ್ಲಿಸಿತ್ತು. 2015 ರಲ್ಲಿ ಮತ್ತೆ ಪರಿಚಯಿಸಲಾಯಿತು. ಆದರೆ, ಸ್ವಾತಂತ್ರ್ಯಪೂರ್ವದ 1 ರೂ. ನೋಟಿಗೆ ಹರಾಜಿನಲ್ಲಿ ಹೆಚ್ಚಿನ ಬೆಲೆ ಇದೆ.
7 ಲಕ್ಷ ಮೌಲ್ಯದ ನೋಟು
ಬ್ರಿಟಿಷ್ ಇಂಡಿಯಾದ ಅಪರೂಪದ 1 ರೂ. ನೋಟನ್ನು ಅನೇಕರು ಹುಡುಕುತ್ತಿದ್ದಾರೆ. 1935 ರಲ್ಲಿ ಗವರ್ನರ್ ಜೆ.ಡಬ್ಲ್ಯೂ. ಕೆಲ್ಲಿ ಅವರ ಸಹಿಯುಳ್ಳ ನೋಟು ಬಿಡುಗಡೆಯಾಯಿತು. 80 ವರ್ಷ ಹಳೆಯ ಈ ನೋಟು ಹರಾಜಿನಲ್ಲಿ 7 ಲಕ್ಷ ರೂ. ಮೌಲ್ಯದ್ದಾಗಿದೆ.
ಅಮೆರಿಕದ ಕಂಪನಿಯಿಂದ ವಾರ್ಷಿಕ 4.3 ಕೋಟಿ ಪ್ಯಾಕೇಜ್ ಪಡೆದ ಐಐಟಿ ವಿದ್ಯಾರ್ಥಿ!
ಹಳೆಯ ನೋಟುಗಳ ಹರಾಜು
ಹಳೆಯ ನೋಟುಗಳನ್ನು ಮಾರಾಟ ಮಾಡಲು 'ಕಾಯಿನ್ ಬಜಾರ್', ಬಳಸಬಹುದು. ಆದರೆ, ಹಳೆಯ ನೋಟುಗಳನ್ನು ಖರೀದಿಸಲು ಅಥವಾ ಮಾರಾಟ ಮಾಡಲು ಆರ್‌ಬಿಐ ಅಧಿಕೃತವಾಗಿ ಅನುಮತಿ ನೀಡಿಲ್ಲ.
EPFO 3.0: ಎಟಿಎಂ ಮೂಲಕವೂ ಪಿಎಫ್ ವಿತ್‌ಡ್ರಾ ಮಾಡೋಕೆ ಸಿಗಲಿದೆ ಅವಕಾಶ!