ಈ 5 ಟ್ರಿಕ್ಸ್ ಗೊತ್ತಿದ್ರೆ ಕ್ರೆಡಿಟ್ ಕಾರ್ಡ್‌ನಿಂದ ನೀವೂ ಹಣ ಗಳಿಸಬಹುದು!
ಕ್ರೆಡಿಟ್ ಕಾರ್ಡ್‌ನಿಂದ ಹಣ ಗಳಿಸಿ: ಕ್ರೆಡಿಟ್ ಕಾರ್ಡ್ ಕೇವಲ ಖರ್ಚು ಮಾಡೋಕೆ ಅಲ್ಲ, ಸ್ವಲ್ಪ ಚಾಲಾಕಿತನದಿಂದ ವರ್ಷಕ್ಕೆ 10,000 ರೂ. ಗಿಂತ ಹೆಚ್ಚು ಗಳಿಸಬಹುದು. 5 ಟ್ರಿಕ್ಸ್ ಇಲ್ಲಿವೆ...

ಕ್ಯಾಶ್‌ಬ್ಯಾಕ್‌ನ ಸಂಪೂರ್ಣ ಲಾಭ ಪಡೆಯಿರಿ: ಪ್ರತಿ ಕಾರ್ಡ್‌ನಲ್ಲೂ ಕ್ಯಾಶ್‌ಬ್ಯಾಕ್ ಆಫರ್‌ಗಳಿವೆ. ಪೆಟ್ರೋಲ್, ಆನ್‌ಲೈನ್ ಶಾಪಿಂಗ್, ರೀಚಾರ್ಜ್ ಎಲ್ಲದರಲ್ಲೂ ಕ್ಯಾಶ್‌ಬ್ಯಾಕ್ ಸಿಗುತ್ತದೆ. ಸರಿಯಾಗಿ ಬಳಸಿದರೆ ವರ್ಷಕ್ಕೆ 3000–4000 ರೂ. ಲಾಭ ಪಡೆಯಬಹುದು. 'ಆಫರ್ ಝೋನ್' ನೋಡಿ.
EMI ಬದಲು ಪಾಯಿಂಟ್ಸ್ ಗಳಿಸಿ: EMI ಬದಲು 'ಪೂರ್ಣ ಪಾವತಿ' ಮಾಡಿ ರಿವಾರ್ಡ್ ಪಾಯಿಂಟ್ಸ್ ಗಳಿಸಿ. ಪ್ರತಿ 100 ರೂ.ಗೆ ಪಾಯಿಂಟ್ಸ್ ಸಿಗುತ್ತದೆ. ಇವುಗಳನ್ನು Amazon, Flipkart ವೋಚರ್‌ಗಳಾಗಿ ಪರಿವರ್ತಿಸಿ ವಾರ್ಷಿಕ 2-3 ಸಾವಿರ ಲಾಭ ಪಡೆಯಬಹುದು.
ವೆಲ್ಕಮ್ ಬೋನಸ್ ಬಿಡಬೇಡಿ: ಹೊಸ ಕಾರ್ಡ್‌ನ ಜಾಯಿನಿಂಗ್ ಬೋನಸ್/ಫ್ರೀ ವೋಚರ್‌ಗಳು 2000–5000 ರೂ. ಲಾಭ ನೀಡಬಲ್ಲವು. ವಾರ್ಷಿಕ ಶುಲ್ಕವಿಲ್ಲದ, ಶುಲ್ಕ ವಿನಾಯಿತಿ ಇರುವ ಕಾರ್ಡ್ ಆಯ್ಕೆ ಮಾಡಿ.
ಬಿಲ್ ಪೇ & ರೆಫರ್ ಮಾಡಿ ಗಳಿಸಿ: CRED, Paytm, Amazon Pay ನಂತಹ ಆ್ಯಪ್‌ಗಳು ಬಿಲ್ ಪಾವತಿಗೆ ರಿವಾರ್ಡ್ ನೀಡುತ್ತವೆ. ರೆಫರ್ ಮತ್ತು ಅರ್ನ್ ಆಫರ್‌ಗಳಿಂದ ವರ್ಷಕ್ಕೆ 3-4 ಸಾವಿರ ಗಳಿಸಬಹುದು.
ಆ್ಯನಿವರ್ಸರಿ & ಹಬ್ಬದ ಆಫರ್: ಆ್ಯನಿವರ್ಸರಿ ಗಿಫ್ಟ್‌ಗಳು, ಹಬ್ಬದ ರಿಯಾಯಿತಿಗಳು, ಬೋನಸ್ ರಿವಾರ್ಡ್‌ಗಳ ಲಾಭ ಪಡೆಯಿರಿ. ಹೀಗೆ ವರ್ಷಕ್ಕೆ 2 ರಿಂದ 4 ಸಾವಿರ ಹೆಚ್ಚುವರಿ ಲಾಭ ಪಡೆಯಬಹುದು.