ಭಾರತದಂತೆ ಕರೆನ್ಸಿಯಾಗಿ ರೂಪಾಯಿ ಬಳಸುವ ದೇಶಗಳು!
ರೂಪಾಯಿಯನ್ನು ಕರೆನ್ಸಿಯಾಗಿ ಹೊಂದಿರುವ ದೇಶಗಳು: ಭಾರತದಂತೆಯೇ ಇನ್ನೂ ಅನೇಕ ದೇಶಗಳು ತಮ್ಮ ದೇಶದ ಹಣವನ್ನು ರೂಪಾಯಿ ಎಂದು ಕರೆಯುತ್ತವೆ. ಆ ದೇಶಗಳು ಯಾವುವು ಎಂದು ತಿಳಿಯೋಣ.

ರೂಪಾಯಿಯನ್ನು ಕರೆನ್ಸಿಯಾಗಿ ಹೊಂದಿರುವ ದೇಶಗಳು
ಭಾರತದಲ್ಲಿ ಬಳಸುವ ಹಣವನ್ನು ಭಾರತೀಯ ರೂಪಾಯಿ ಎಂದು ಕರೆಯಲಾಗುತ್ತದೆ. ಅದೇ ರೀತಿ ಇತರ ದೇಶಗಳಲ್ಲಿಯೂ ರೂಪಾಯಿ ಹೆಸರನ್ನು ಆಯಾ ದೇಶಗಳ ಹೆಸರಿನೊಂದಿಗೆ ಸೇರಿಸಿ ಕರೆಯಲಾಗುತ್ತದೆ. ಹೆಸರು ಒಂದೇ ಆಗಿದ್ದರೂ ಅವುಗಳ ಮೌಲ್ಯ ದೇಶದಿಂದ ದೇಶಕ್ಕೆ ಬದಲಾಗುತ್ತದೆ ಎಂಬುದನ್ನು ಗಮನಿಸಬೇಕು.
ಪಾಕಿಸ್ತಾನದ ಕರೆನ್ಸಿ
ಪಾಕಿಸ್ತಾನದಲ್ಲಿ ಚಲಾವಣೆಯಲ್ಲಿರುವ ಹಣವನ್ನು ರೂಪಾಯಿ ಎಂದೇ ಕರೆಯಲಾಗುತ್ತದೆ. ಇದನ್ನು ಪಾಕಿಸ್ತಾನಿ ರೂಪಾಯಿ (PKR) ಎಂದು ಕರೆಯಲಾಗುತ್ತದೆ.
ನೇಪಾಳದ ಕರೆನ್ಸಿ
ಭಾರತದ ಮತ್ತೊಂದು ನೆರೆಯ ರಾಷ್ಟ್ರ ನೇಪಾಳದಲ್ಲಿಯೂ ಹಣವನ್ನು ರೂಪಾಯಿ ಹೆಸರಿನಲ್ಲಿಯೇ ಚಲಾವಣೆಯಲ್ಲಿದೆ. ಇದನ್ನು ನೇಪಾಳ ರೂಪಾಯಿ (NPR) ಎಂದು ಕರೆಯಲಾಗುತ್ತದೆ.
ಶ್ರೀಲಂಕಾದ ಕರೆನ್ಸಿ
ಶ್ರೀಲಂಕಾದಲ್ಲಿ ಬಳಸುವ ಹಣವನ್ನು ರೂಪಾಯಿ ಎಂದೇ ಕರೆಯುತ್ತಾರೆ. ಅದು ಶ್ರೀಲಂಕಾ ರೂಪಾಯಿ (LKR) ಆಗಿದೆ. ಆದ್ರೆ ಹಣದ ಮೌಲ್ಯ ಬೇರೆಯಾಗಿರುತ್ತದೆ.
ಮಾಲ್ಡೀವ್ಸ್ ಕರೆನ್ಸಿ
ಮಾಲ್ಡೀವಿಯನ್ ರುಫಿಯಾ (MVR) ಪ್ರವಾಸಕ್ಕೆ ಹೆಸರುವಾಸಿಯಾದ ದ್ವೀಪ ರಾಷ್ಟ್ರ ಮಾಲ್ಡೀವ್ಸ್‌ನಲ್ಲಿ ಬಳಸುವ ಹಣವಾಗಿದೆ. ಭಾರತೀಯರು ಅಧಿಕವಾಗಿ ಮಾಲ್ಡೀವ್ಸ್ ದ್ವೀಪಕ್ಕೆ ಭೇಟಿ ನೀಡುತ್ತಿರುತ್ತಾರೆ,
ಸೀಶೆಲ್ಸ್ ಕರೆನ್ಸಿ
ಸೀಶೆಲ್ಸ್ ರೂಪಾಯಿಯನ್ನು ಬಳಸುವ ಮತ್ತೊಂದು ಪುಟ್ಟ ದ್ವೀಪ ರಾಷ್ಟ್ರ. ಸೀಶೆಲೋಯಿಸ್ ರೂಪಾಯಿ (SCR) ಇಲ್ಲಿ ಚಲಾವಣೆಯಲ್ಲಿರುವ ಹಣ.
ಮಾರಿಷಸ್ ಕರೆನ್ಸಿ
ಮಾರಿಷಸ್ ದೇಶದಲ್ಲಿಯೂ ರೂಪಾಯಿಯೇ ಜನರ ಬಳಕೆಯಲ್ಲಿದೆ. ಆ ದೇಶದಲ್ಲಿ ಹಣದ ಹೆಸರು ಮಾರಿಷಿಯನ್ ರೂಪಾಯಿ (MUR) ಎಂದು ಕರೆಯುತ್ತಾರೆ.
ಇಂಡೋನೇಷ್ಯಾ ಕರೆನ್ಸಿ
ಇಂಡೋನೇಷ್ಯಾ ಕೂಡ ರೂಪಾಯಿಯನ್ನೇ ಬಳಸುತ್ತದೆ. ಇಂಡೋನೇಷಿಯನ್ ರುಪಿಯಾ (IDR) ಹೆಸರಿನಲ್ಲಿ ಇಂಡೋನೇಷ್ಯಾದಲ್ಲಿ ರೂಪಾಯಿ ಚಲಾವಣೆಯಲ್ಲಿದೆ.