ವಿಶ್ವದ ದಿಗ್ಗಜ ನಾಯಕರ ಮಹಾಮೇಳ, ಜಿ20 ಶೃಂಗಸಭೆಗೆ ಭಾರತ ಖರ್ಚು ಮಾಡಿದ್ದೆಷ್ಟು?
18ನೇ ಆವೃತ್ತಿಯ ಜಿ20 ಸಮಾವೇಶ ಇಂದಿನಿಂದ ನವದೆಹಲಿಯ ಭಾರತ ಮಂಟಪದಲ್ಲಿಆರಂಭವಾಗಲಿದೆ. ಹಾಗಿದ್ದಲ್ಲಿ, ಕಳೆದ 8 ವರ್ಷಗಳ ಜಿ20 ಶೃಂಗಸಭೆಗೆ ಆಗಿರುವ ಖರ್ಚುಗಳೆಷ್ಟು, ಭಾರತ ಮಾಡುತ್ತಿರುವ ಖರ್ಚು ಎಷ್ಟು ಎನ್ನುವ ವಿವರ ಇಲ್ಲಿದೆ. ಇಂದಿನ ಡಾಲರ್‌ನ ಮೌಲ್ಯದಲ್ಲಿ ಈ ಲೆಕ್ಕಾಚಾರಗಳಿವೆ.
ಕೆನಡಾ: 2010ರಲ್ಲಿ ಜಿ20 ಶೃಂಗಸಭೆಯಲ್ಲಿ ಕೆನಡಾ ಅಯೋಜನೆ ಮಾಡಿತ್ತು. ಇದಕ್ಕಾಗಿ ಕೆನಡಾ ಖರ್ಚು ಮಾಡಿದ್ದು ಬರೋಬ್ಬರಿ 1 ಬಿಲಿಯನ್ ಯುಎಸ್ ಡಾಲರ್. ಅಂದರೆ, ಈಗಿನ ಲೆಕ್ಕಾಚಾರದಲ್ಲಿ 8295 ಕೋಟಿ ರೂಪಾಯಿಗಳು.
ಫ್ರಾನ್ಸ್: ಮರುವರ್ಷ ಅಂದರೆ, 2011ರಲ್ಲಿ ವಿಶ್ವದ ಅಗ್ರ ನಾಯಕರ ಜಿ20 ಶೃಂಗಸಭೆ ಆಯೋಜನೆ ಮಾಡಿದ್ದು ಫ್ರಾನ್ಸ್ ದೇಶ. ಅದಕ್ಕಾಗಿ ಫ್ರಾನ್ಸ್ ತನ್ ಖಜಾನೆಯಿಂದ 86 ಮಿಲಿಯನ್ ಯುಎಸ್ ಡಾಲರ್ ಖರ್ಚು ಮಾಡಿತ್ತು. ಅಂದರೆ ಬರೀ 713 ಕೋಟಿ ರೂಪಾಯಿ ಖರ್ಚು ಮಾಡಿತ್ತು.
ಆಸ್ಟ್ರೇಲಿಯಾ: 2012 ಹಾಗೂ 13ರಲ್ಲಿ ಮೆಕ್ಸಿಕೋ ಹಾಗೂ ರಷ್ಯಾ ದೇಶಗಳು ಜಿ20 ನಡೆಸಿದ್ದರೂ ಇದರ ಖರ್ಚಿನ ಮಾಹಿತಿಯಿಲ್ಲ. 2014ರಲ್ಲಿ ಆಸ್ಟ್ರೇಲಿಯಾದ ಜಿ20 ಸಮಾವೇಶಕ್ಕಾಗಿ 320 ಮಿಲಿಯನ್ ಡಾಲರ್ ಹಣ ಖರ್ಚು ಮಾಡಿತ್ತು. ಅಂದರೆ 2654 ಕೋಟಿ ರೂಪಾಯಿ ಹಣ ವೆಚ್ಚ ಮಾಡಿತ್ತು.
ಚೀನಾ: ಬಹುಶಃ ಇತ್ತೀಚಿನ ವರ್ಷಗಳಲ್ಲಿ ಯಾವುದಾದರೂ ದೇಶ ಜಿ20ಗೆ ದಂಡಿಯಾಗಿ ಹಣ ಸುರಿದಿದ್ದೆಂದರೆ ಅದು ಚೀನಾ ಮಾತ್ರ. 2016ರ ಶೃಂಗಸಭೆಗಾಗಿ ಚೀನಾ ಬರೋಬ್ಬರಿ 24 ಬಿಲಿಯನ್ ಡಾಲರ್ ಹಣ ಖರ್ಚು ಮಾಡಿತ್ತು.
ಜರ್ಮನಿ: 2017ರಲ್ಲಿ ಜರ್ಮನಿ ಜಿ20 ಶೃಂಗಸಭೆಯನ್ನು ಆಯೋಜನೆ ಮಾಡಿತ್ತು. ಅದಕ್ಕಾಗಿ ಜರ್ಮನಿ 94 ಮಿಲಿಯನ್ ಡಾಲರ್ ಅಂದರೆ 779 ಕೋಟಿ ರೂಪಾಯಿ ಹಣವನ್ನು ಖರ್ಚು ಮಾಡಿತ್ತು.
ಅರ್ಜೆಂಟೀನಾ: 2018ರ ಜಿ20 ಶೃಂಗಸಭೆಗೆ ಅರ್ಜೆಂಟೀನಾ ಆತಿಥ್ಯ ವಹಿಸಿಕೊಂಡಿತ್ತು. ಇದಕ್ಕಾಗಿ ಅರ್ಜೆಂಟೀನಾ 928 ಕೋಟಿ ರೂಪಾಯಿ ಹಣ ಅಂದರೆ 112 ಮಿಲಿಯನ್ ಯುಎಸ್ ಡಾಲರ್ ಮೊತ್ತವನ್ನು ಖರ್ಚು ಮಾಡಿತ್ತು.
ಜಪಾನ್: ಜಪಾನ್ ತನ್ನ ಶೃಂಗಸಭೆಯನ್ನು 2019ರಲ್ಲಿ ಆಯೋಜನೆ ಮಾಡಿತ್ತು. ವಿಶ್ವ ನಾಯಕರ ಈ ಕಾರ್ಯಕ್ರಮಕ್ಕಾಗಿ 320 ಮಿಲಿಯನ್ ಯುಎಸ್ ಡಾಲರ್ ಅಂದರೆ, 2654 ಕೋಟಿ ರೂಪಾಯಿ ಹಣವನ್ನು ವ್ಯಯ ಮಾಡಿತ್ತು.
ಇಂಡೋನೇಷ್ಯಾ: ಕಳೆದ ವರ್ಷದ ಶೃಂಗಸಭೆಗೆ ಇಂಡೋನೇಷ್ಯಾ ಆತಿಥ್ಯ ವಹಿಸಿಕೊಂಡಿತ್ತು. ದ್ವೀಪರಾಷ್ಟ್ರ ಈ ಕಾರ್ಯಕ್ರಮಕ್ಕೆ ಖರ್ಚುಮಾಡಿದ್ದು ಬರೀ 33 ಮಿಲಿಯನ್ ಯುಎಸ್ ಡಾಲರ್ ಅಂದರೆ, ಬರೀ 273 ಕೋಟಿ ರೂಪಾಯಿ.
ಭಾರತ: ಈ ಬಾರಿ ಶೃಂಗಸಭೆ ಭಾರತದ ಆತಿಥ್ಯದಲ್ಲಿ ನಡೆಯುತ್ತಿದೆ. ಇದಕ್ಕಾಗಿ ಭಾರತ 120 ಮಿಲಿಯನ್ ಡಾಲರ್ ಹಣವನ್ನು ಅಂದರೆ, 995 ಕೋಟಿ ರೂಪಾಯಿ ಹಣವನ್ನು ಬರೀ ಈ ಕಾರ್ಯಕ್ರಮಕ್ಕ ಖರ್ಚು ಮಾಡುತ್ತಿದೆ. ಭದ್ರತೆಗಾಗಿಯೇ ಹೆಚ್ಚಿನ ಹಣ ವಿನಿಯೋಗವಾಗುತ್ತದೆ.