ಉಳಿದ ಸೂಪರ್ ಮಾರ್ಕೆಟ್‌ಗಳಿಗಿಂತ ಎಲ್ಲ ವಸ್ತುಗಳು D Mart ನಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ! ಯಾಕೆ?
D mart shopping is too cheap: ಇಂದು ಸಾಕಷ್ಟು ಸೂಪರ್ ಮಾರ್ಕೆಟ್‌ಗಳು ಬಂದಿವೆ. ಕಿರಾಣಿ ಅಂಗಡಿಗಳಲ್ಲಿ ಸಿಗುವ ವಸ್ತುಗಳು, ರೇಶನ್‌ಗಳಿಗಿಂತ ಕಡಿಮೆ ಬೆಲೆಗೆ ಈಗ ಡಿ-ಮಾರ್ಟ್ ವಸ್ತುಗಳ ಮಾರಾಟ ಮಾಡುತ್ತಿದೆ. ಇಷ್ಟೆಲ್ಲ ಕಡಿಮೆ ಬೆಲೆಗೆ ವಸ್ತುಗಳನ್ನು ಕೊಡೋದು ಯಾಕೆ?

ಸ್ವಂತ ಜಾಗ ಇರುತ್ತದೆ
ಇಂದು ಸಾಕಷ್ಟು ಶಾಪ್‌ಗಳು ರಸ್ತೆಗಳ ಮುಂದೆ ದೊಡ್ಡ ಜಾಗವನ್ನು ಬಾಡಿಗೆಗೆ ಪಡೆದು ವಸ್ತುಗಳ ಮಾರಾಟ ಮಾಡುತ್ತವೆ. ಹೀಗಾಗಿ ಬಾಡಿಗೆ ಹಣವೇ ಹೆಚ್ಚಿರುತ್ತದೆ. ಆದರೆ ಡಿ-ಮಾರ್ಟ್ ಮಾತ್ರ ಸ್ವಂತ ಜಾಗ ಖರೀದಿ ಮಾಡುತ್ತದೆ. ಹೀಗಾಗಿ ಲಾಭ ಆಗುತ್ತದೆ.

ಸಪ್ಲೈಯರ್‌ಗಳಿಗೆ ಬೇಗ ಹಣ ಕೊಡ್ತಾರೆ
ಕಂಪನಿಗಳಿಂದ ಅಥವಾ ಸಪ್ಲೈಯರ್‌ಗಳಿಂದ ಸೂಪರ್‌ಮಾರ್ಕೆಟ್‌ಗಳು ವಸ್ತುಗಳನ್ನು ಖರೀದಿ ಮಾಡುತ್ತವೆ. ಹೀಗಾಗಿ ಒಂದು ಅಥವಾ ಎರಡು ತಿಂಗಳ ನಂತರ ಹಣ ಕಟ್ಟುತ್ತವೆ. ಆದರೆ ಡಿ ಮಾರ್ಟವ ಮಾತ್ರ 7-10 ದಿನಗಳಲ್ಲಿ ಹಣ ಕೊಡುತ್ತದೆ. ಹೀಗಾಗಿ ಸಪ್ಲೈಯರ್‌ಗಳು ಒಂದಿಷ್ಟು ರಿಯಾಯಿತಿ ಕೊಡುತ್ತವೆ.
ದೊಡ್ಡ ಮಟ್ಟದಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತವೆ
ಭಾರತದಾದ್ಯಂತ ಡಿ-ಮಾರ್ಟ್ ಬ್ರ್ಯಾಂಚ್ ಇದ್ದು, ದೊಡ್ಡ ಪ್ರಮಾಣದಲ್ಲಿ ವಸ್ತುಗಳನ್ನು ಖರೀದಿ ಮಾಡುತ್ತದೆ. ಇಲ್ಲಿ ಮೀಡಿಯೇಟರ್ ಇರೋದಿಲ್ಲ, ಕಮಿಷನ್ ಕೂಡ ಇರೋದಿಲ್ಲ. ಹೀಗಾಗಿ ಡಿ-ಮಾರ್ಟ್‌ಗೆ ಅತ್ಯಂತ ಕಡಿಮೆ ಬೆಲೆಗೆ ವಸ್ತುಗಳು ಸಿಗುತ್ತವೆ.
ಕಡಿಮೆ ಇಂಟೀರಿಯರ್, ಜಾಹೀರಾತು ವೆಚ್ಚ
ಡಿ-ಮಾರ್ಟ್ ಶಾಪ್‌ನಲ್ಲಿ ಇಂಟಿರಿಯರ್ ಡಿಸೈನ್‌ಗೆ ಹೆಚ್ಚು ಹಣ ಕೊಡೋದಿಲ್ಲ. ಅಷ್ಟೇ ಅಲ್ಲದೆ ಕೋಟಿ ಕೋಟಿ ರೂಪಾಯಿ ಕೊಟ್ಟು ಜಾಹೀರಾತು ಕೂಡ ಕೊಡೋದಿಲ್ಲ. ಕಡಿಮೆ ಬೆಲೆ, ಉತ್ತಮ ಗುಣಮಟ್ಟದಿಂದಲೇ ಇದರ ಗ್ರಾಹಕರು ಹೆಚ್ಚಿದ್ದಾರೆ.
ಉತ್ತಮ ಗುಣಮಟ್ಟದ ವಸ್ತುಗಳು
ಸಿಂಪಲ್ ಆಗಿರುವ ಉತ್ತಮ ಗುಣಮಟ್ಟದ ವಸ್ತುಗೋಉ ಸಿಗುತ್ತದೆ. ಇಲ್ಲಿ ಐಷಾರಾಮಿ ವಸ್ತುಗಳು ಇರೋದಿಲ್ಲ. ನಿತ್ಯ ಬಳಸುವ ವಸ್ತುಗಳು, ಕಿರಾಣಿ ಪದಾರ್ಥಗಳು ಕಡಿಮೆ ಬೆಲೆಗೆ ಸಿಗುತ್ತದೆ. ಇವೆಲ್ಲ ಬೇಗ ಬೇಗ ಖಾಲಿ ಆಗುತ್ತದೆ, ಲಾಭವೂ ಆಗುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

