Rail Neer ಮಾರಾಟ ಮಾಡಿ IRCTC ಗಳಿಸಿದ ಹಣ ಕೇಳಿದ್ರೆ ಶಾಕ್ ಆಗ್ತೀರಿ
ಐಆರ್‌ಸಿಟಿಸಿ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದ್ದು, ರೈಲ್ ನೀರ್ ಮಾರಾಟದಿಂದ ಭಾರಿ ಲಾಭ ಗಳಿಸಿದೆ. ಒಟ್ಟಾರೆಯಾಗಿ ಐಆರ್‌ಸಿಟಿಸಿ 1,269 ಕೋಟಿ ರೂ. ಲಾಭ ಗಳಿಸಿದೆ.

ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡುವಾಗ ನೀವು ಕುಡಿಯಲು ಖರೀದಿಸುವ ನೀರಿನ ಬಾಟೆಲ್ Rail Neer ಬಾಟೆಲ್ ನೀಡಲಾಗುತ್ತದೆ. ಒಂದು Rail Neer ಬಾಟೆಲ್ ಬೆಲೆ 15 ರೂಪಾಯಿ ಆಗುತ್ತದೆ. ಈ ಕುಡಿಯುವ ನೀರಿನ ಬಾಟೆಲ್‌ನ್ನು ಐಆರ್‌ಸಿಟಿಸಿ (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಪೂರೈಸುತ್ತದೆ.
ಈ ರೈಲ್ ನೀರ್ ಬಾಟೆಲ್ ಮಾರಾಟ ಮಾಡುವ ಮೂಲಕ ಐಆರ್‌ಸಿಟಿಸಿ ಎಷ್ಟು ಕೋಟಿ ರೂಪಾಯಿ ಸಂಪಾದಸುತ್ತದೆ ಎಂಬುದರ ಮಾಹಿತಿ ಹೊರಬಂದಿದೆ. ಐಆರ್‌ಸಿಟಿಸಿ ತನ್ನ ನಾಲ್ಕನೇ ತ್ರೈಮಾಸಿಕ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.
IRCTCಯ ನಾಲ್ಕನೇ ತ್ರೈಮಾಸಿಕ ವರದಿ ಪ್ರಕಾರ, ಈ ಬಾರಿ 358 ಕೋಟಿ ರೂಪಾಯಿ ಲಾಭ ಗಳಿಸಿದೆ. ಕಳೆದ ವರ್ಷ ಐಆರ್‌ಸಿಟಿಸಿ 284 ಕೋಟಿ ರೂಪಾಯಿ ಲಾಭವನ್ನು ಗಳಿಸಿದ್ದು, ಈ ವರ್ಷ ಲಾಭದ ಪ್ರಮಾಣ ಏರಿಕೆಯಾಗಿದೆ. ಒಟ್ಟಾರೆಯಾಗಿ ಐಆರ್‌ಸಿಟಿಸಿ ತನ್ನ ಎಲ್ಲಾ ಕಾರ್ಯಚರಣೆಗಳಿಂದ 1,269 ಕೋಟಿ ರೂ. ಲಾಭ ಸಂಪಾದಿಸಿದೆ. ಈ ಲಾಭದ ಪ್ರಮಾಣ ಶೇ.10ರಷ್ಟು ಆಗಿದೆ. ಕಳೆದ ಹಣಕಾಸಿನ ವರ್ಷದಲ್ಲಿ ಐಆರ್‌ಸಿಟಿಸಿಯ ಲಾಭ 1,152 ಕೋಟಿ ರೂ. ಆಗಿತ್ತು.
ರೈಲ್ ನೀರ್
2025 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ IRCTC ರೈಲ್ ನೀರ್ ನಿಂದ 96 ಕೋಟಿ ರೂ. ಗಳಿಸಿದೆ. ಕಳೆದ ವರ್ಷ ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ಮೂರನೇ ತ್ರೈಮಾಸಿಕದಲ್ಲಿ IRCTC ರೈಲ್ ನೀರ್ ಲಾಭದ ಪ್ರಮಾಣವೂ ಇಷ್ಟೇ ಆಗಿತ್ತು. 2024ರ 4ನೇ ತ್ರೈಮಾಸಿಕದಲ್ಲಿ IRCTC ರೈಲ್ ನೀರ್‌ನಿಂದ 83 ಕೋಟಿ ರೂ. ಆಗಿತ್ತು.
ಅಡುಗೆ
IRCTC ಯ ಅಡುಗೆ ಸೇವೆ ಮೂಲಕ 2025 ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ 529 ಕೋಟಿ ರೂ. ಗಳಿಸಲಾಗಿದೆ. ಮೂರನೇ ತ್ರೈಮಾಸಿಕದಲ್ಲಿ 555 ಕೋಟಿ ರೂ.ಗಳಷ್ಟಿತ್ತು. ಮೂರರಿಂದ ನಾಲ್ಕನೇ ತ್ರೈಮಾಸಿಕಕ್ಕೆ ಲಾಭದ ಪ್ರಮಾಣ ಕೊಂಚ ಇಳಿಕೆಯಾಗಿದೆ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಅಡುಗೆ ಸೇವೆಯಿಂದ ಐಆರ್‌ಸಿಟಿಸಿ 531 ಕೋಟಿ ರೂ. ಗಳಿಸಿತ್ತು.
ಇಂಟರ್‌ನೆಟ್ ಟಿಕೆಟ್‌ಗಳು
2025 ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇಂಟರ್ನೆಟ್ ಟಿಕೆಟಿಂಗ್ 372 ಕೋಟಿ ರೂ.ಗಳ ಲಾಭವನ್ನು ಗಳಿಸಿದೆ. ಇದು ಮೂರನೇ ತ್ರೈಮಾಸಿಕದಲ್ಲಿ 354 ಕೋಟಿ ರೂ.ಗಳಷ್ಟಿತ್ತು. ಆದರೆ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಈ ಲಾಭ 2342 ಕೋಟಿ ರೂ.ಗಳಷ್ಟಿತ್ತು.