- Home
- Business
- BSNL BiTV: BSNL ಬಳಕೆದಾರರಿಗೆ ಜಾಕ್‌ಪಾಟ್; ಇನ್ಮುಂದೆ 450+ ಚಾನೆಲ್‌ಗಳು ಉಚಿತ! ಇಲ್ಲಿದೆ ಸಂಪೂರ್ಣ ವಿವರ
BSNL BiTV: BSNL ಬಳಕೆದಾರರಿಗೆ ಜಾಕ್‌ಪಾಟ್; ಇನ್ಮುಂದೆ 450+ ಚಾನೆಲ್‌ಗಳು ಉಚಿತ! ಇಲ್ಲಿದೆ ಸಂಪೂರ್ಣ ವಿವರ
BSNL ಸಿಮ್ ಇದ್ಯಾ? ಹಾಗಾದ್ರೆ 400+ ಟಿವಿ ಚಾನೆಲ್‌ಗಳು ಮತ್ತು OTT ಚಾನೆಲ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಉಚಿತವಾಗಿ ನೋಡಬಹುದು. ಇಲ್ಲಿ ಪೂರ್ತಿ ವಿವರಗಳನ್ನು ತಿಳಿದುಕೊಳ್ಳಿ.

ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾ ಖಾಸಗಿ ಕಂಪನಿಗಳಿಗೆ ಪೈಪೋಟಿ ನೀಡಲು BSNL ಕಡಿಮೆ ಬೆಲೆಯ ರೀಚಾರ್ಜ್‌ಗಳನ್ನು ನೀಡುತ್ತಿದೆ. ಹಾಗಾಗಿ ಜನ BSNL ಕಡೆಗೆ ಆಕರ್ಷಿತರಾಗುತ್ತಿದ್ದಾರೆ.
ಇದೀಗ BSNL, OTTplay ಜೊತೆಗೂಡಿ BSNL ಇಂಟರ್‌ಟೈನ್‌ಮೆಂಟ್ (BiTV) ಎಂಬ ಹೊಸ ಇಂಟರ್ನೆಟ್ ಟೆಲಿವಿಷನ್ ಸೇವೆಯನ್ನು ಆರಂಭಿಸಿದೆ. BSNL ಲೈವ್ ಮೊಬೈಲ್ ಟಿವಿ ಸೇವೆ BiTVಯನ್ನು ಕಳೆದ ತಿಂಗಳು ಪುದುಚೇರಿಯಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು.
ಇದನ್ನೂ ಓದಿ: Union Budget 2025 Live Updates: ಇಂದು ನಿರ್ಮಲಾ 8ನೇ ಕೇಂದ್ರ ಬಜೆಟ್ ಮಂಡನೆ
ಈಗ BiTV ಸೇವೆಯನ್ನು BSNL ದೇಶಾದ್ಯಂತ ಆರಂಭಿಸಿದೆ. ಈ ಸೇವೆಯ ಮೂಲಕ BSNL ಮೊಬೈಲ್ ಬಳಕೆದಾರರಿಗೆ 450+ ಲೈವ್ ಟಿವಿ ಚಾನೆಲ್‌ಗಳು ಉಚಿತವಾಗಿ ಲಭ್ಯ. ಇದರಿಂದ BSNL ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 450+ ಚಾನೆಲ್‌ಗಳನ್ನು ಉಚಿತವಾಗಿ ನೋಡಬಹುದು.
BSNL BiTV ಮೂಲಕ ಭಕ್ತಿಫ್ಲಿಕ್ಸ್, ಶಾರ್ಟ್‌ಫಂಡ್ಲಿ, ಕಾಂಚಾ ಲಂಕಾ, ಸ್ಟೇಜ್, OM TV, Playflix, Fancode, Distro, Hubhopper, Runn TVಗಳಂತಹ OTT ಪ್ಲಾಟ್‌ಫಾರ್ಮ್‌ಗಳ ಜೊತೆಗೆ 450+ ಲೈವ್ ಟಿವಿ ಚಾನೆಲ್‌ಗಳು, ಬ್ಲಾಕ್‌ಬಸ್ಟರ್ ಸಿನಿಮಾಗಳು, ವೆಬ್ ಸೀರೀಸ್‌ಗಳನ್ನು ಉಚಿತವಾಗಿ ನೋಡಬಹುದು.
DTH ಚಂದಾದಾರಿಕೆಗಳು ಕಡಿಮೆಯಾಗುತ್ತಿರುವುದರಿಂದ, ಬಳಕೆದಾರರು ಸ್ಮಾರ್ಟ್‌ಫೋನ್‌ಗಳಲ್ಲಿ ಲೈವ್ ಚಾನೆಲ್‌ಗಳನ್ನು ನೋಡಲು BiTV ಸೇವೆಯನ್ನು ತಂದಿರುವುದಾಗಿ BSNL ತಿಳಿಸಿದೆ. BSNL ಸಿಮ್‌ಕಾರ್ಡ್ ಇರುವವರಿಗೆ ಇದು ಸಂಪೂರ್ಣ ಉಚಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.
“BiTV ಸೇವೆಯು BSNLನ ಡಿಜಿಟಲ್ ವಿಷಯದ ಬದ್ಧತೆಗೆ ಸಾಕ್ಷಿ. ಈ ಹೊಸ ಸೇವೆಯ ಮೂಲಕ BSNL ಕ್ರಾಂತಿಕಾರಿ ಮೊದಲ ಟೆಲಿಕಾಂ ಸೇವಾ ಪೂರೈಕೆದಾರರಲ್ಲಿ ಒಂದಾಗಿದೆ” ಎಂದು BSNL CMD ರಾಬರ್ಟ್ ಜೆ ರವಿ ಐಟಿಎಸ್ ಸೇವೆ ಆರಂಭಿಸುವಾಗ ಹೇಳಿದರು.
ಇದಲ್ಲದೆ, ಹಲವು ರಾಜ್ಯಗಳಲ್ಲಿ ತನ್ನ ಬ್ರಾಡ್‌ಬ್ಯಾಂಡ್ ಬಳಕೆದಾರರಿಗಾಗಿ ಇಂಟರ್ನೆಟ್ ಪ್ರೊಟೊಕಾಲ್ ಆಧಾರಿತ IFTV ಸೇವೆಯನ್ನು BSNL ಆರಂಭಿಸಿದೆ. ಹೆಚ್ಚುವರಿ ವೆಚ್ಚ ಅಥವಾ ಸೆಟ್-ಟಾಪ್ ಬಾಕ್ಸ್ ಅಗತ್ಯವಿಲ್ಲದೆ 500+ ಲೈವ್ ಟೆಲಿವಿಷನ್ ಚಾನೆಲ್‌ಗಳನ್ನು ನೋಡಲು IFTV ಸೇವೆ ಅನುಮತಿಸುತ್ತದೆ. ಈ ಸೇವೆಯನ್ನು ಇತ್ತೀಚೆಗೆ ತಮಿಳುನಾಡು, ಮಧ್ಯಪ್ರದೇಶ, ಪಂಜಾಬ್, ಗುಜರಾತ್ ಟೆಲಿಕಾಂ ವಲಯದಲ್ಲಿ ಆರಂಭಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.