ಪತ್ನಿ ಹೆಸರಲ್ಲಿ NPS ಖಾತೆ ತೆರೆದು 5,000 ರೂ ಹೂಡಿಕೆ ಮಾಡಿ 1.75 ಕೋಟಿ ರೂ ಗಳಿಸಿ!
NPS ಖಾತೆಯಲ್ಲಿ ಹಣ ಹೂಡಕೆ ಮಾಡಿದರೆ ಗರಿಷ್ಠ ಆದಾಯ ಗಳಿಸಲು ಸಾಧ್ಯವಿದೆ. ಇದೀಗ ಪತ್ನಿಯ ಹೆಸರಿನಲ್ಲಿ NPS ಖಾತೆ ತೆರೆದು 5,000 ರೂಪಾಯಿ ಹೂಡಿಕೆ ಮಾಡುತ್ತಾ ಹೋದರೆ ಸಾಕು, ನೀವು 1.75 ಕೋಟಿ ರೂಪಾಯಿ ಆದಾಯ ಗಳಿಸಲು ಸಾಧ್ಯವಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ
ಪ್ರತಿಯೊಬ್ಬರೂ ತಮ್ಮ ಭವಿಷ್ಯಕ್ಕಾಗಿ ಯೋಜನೆ ರೂಪಿಸಿಕೊಳ್ಳುತ್ತಾರೆ. ನಿವೃತ್ತಿಯ ನಂತರ ಸ್ಥಿರವಾದ ಆದಾಯವನ್ನು ಒದಗಿಸುವ ಯೋಜನೆಯನ್ನು ಹುಡುಕುತ್ತಾರೆ. ಪತ್ನಿಯ ಹೆಸರಿನಲ್ಲಿ ಹೂಡಿಕೆ ಮಾಡುವುದು ಇದಕ್ಕೆ ಸೂಕ್ತ ಪರಿಹಾರ. ಈ ವಿಶೇಷ ಖಾತೆಯನ್ನು ಪತ್ನಿಯ ಹೆಸರಿನಲ್ಲಿ ತೆರೆಯಬೇಕು.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ನಿಮ್ಮ ಪತ್ನಿಗೆ 60 ವರ್ಷ ವಯಸ್ಸಾದಾಗ ದೊಡ್ಡ ಮೊತ್ತವನ್ನು ಒದಗಿಸುತ್ತದೆ. ಇದಲ್ಲದೆ, ಪ್ರತಿ ತಿಂಗಳು ಪಿಂಚಣಿಯನ್ನು ಸಹ ಪಡೆಯಬಹುದು. NPS ಖಾತೆಯ ದೊಡ್ಡ ಪ್ರಯೋಜನವೆಂದರೆ, ಪ್ರತಿ ತಿಂಗಳು ಎಷ್ಟು ಪಿಂಚಣಿ ಬೇಕು ಎಂದು ನೀವೇ ನಿರ್ಧರಿಸಬಹುದು. ಇದರಿಂದಾಗಿ ವೃದ್ಧಾಪ್ಯದಲ್ಲಿ ಹಣದ ಬಗ್ಗೆ ಚಿಂತೆ ಇರುವುದಿಲ್ಲ.
NPS ಹೂಡಿಕೆ
ಹೊಸ ಪಿಂಚಣಿ ಯೋಜನೆ (ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ) ಖಾತೆಯನ್ನು ಪ್ರಾರಂಭಿಸಿದ ನಂತರ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಮಾಸಿಕ ಅಥವಾ ವಾರ್ಷಿಕ ಆಧಾರದ ಮೇಲೆ ಹಣವನ್ನು ಠೇವಣಿ ಮಾಡಬಹುದು. ಕೇವಲ ₹1,000 ಗಳೊಂದಿಗೆ ನಿಮ್ಮ ಪತ್ನಿಯ ಹೆಸರಿನಲ್ಲಿ NPS ಖಾತೆಯನ್ನು ಪ್ರಾರಂಭಿಸಬಹುದು. NPS ಖಾತೆ ಹೂಡಿಕೆದಾರರಿಗೆ 60 ವರ್ಷ ವಯಸ್ಸಾದಾಗ ಪಕ್ವವಾಗುತ್ತದೆ. ಹೊಸ ನಿಯಮಗಳ ಪ್ರಕಾರ, ಈ ಖಾತೆಯನ್ನು 65 ವರ್ಷ ವಯಸ್ಸಿನವರೆಗೆ NPS ಖಾತೆಯನ್ನು ಮುಂದುವರಿಸಬಹುದು.
ಪತ್ನಿಯ ಖಾತೆಯಲ್ಲಿ ಹೂಡಿಕೆ
ನಿಮ್ಮ ಪತ್ನಿಗೆ ಪ್ರಸ್ತುತ 30 ವರ್ಷ ವಯಸ್ಸು ಎಂದು ಭಾವಿಸೋಣ. ನೀವು NPS ಖಾತೆಯಲ್ಲಿ ಪ್ರತಿ ತಿಂಗಳು ₹5,000 ಠೇವಣಿ ಮಾಡಿದರೆ, ವರ್ಷಕ್ಕೆ ₹60,000 ಹೂಡಿಕೆ ಮಾಡಿದಂತೆ. ಈ ರೀತಿ ನೀವು 30 ವರ್ಷಗಳ ಕಾಲ ನಿರಂತರವಾಗಿ ಹೂಡಿಕೆ ಮಾಡಿದರೆ, ನಿಮ್ಮ ಒಟ್ಟು ಹೂಡಿಕೆ ₹18 ಲಕ್ಷ ಆಗುತ್ತದೆ. 60 ವರ್ಷ ವಯಸ್ಸಿನಲ್ಲಿ ನಿವೃತ್ತಿ ಪಡೆಯುವ ಹೊತ್ತಿಗೆ ನಿಮ್ಮ ಬಳಿ ₹1,76,49,569 ಇರುತ್ತದೆ. ಸರಾಸರಿ ಬಡ್ಡಿ ದರ 12% ಎಂದು ಭಾವಿಸಿದರೆ, ಬಡ್ಡಿ ಮಾತ್ರ ₹1,05,89,741 ಆಗುತ್ತದೆ.
ನಿಮ್ಮ ಪತ್ನಿಯ ಖಾತೆ 60 ವರ್ಷ ವಯಸ್ಸಿನಲ್ಲಿ ಪಕ್ವವಾದಾಗ, ಅವರಿಗೆ ₹1,05,89,741 ಲಕ್ಷ ಒಂದೇ ಬಾರಿಗೆ ದೊಡ್ಡ ಮೊತ್ತ ಕೈಸೇರಲಿದೆ. ಇದು ಬಡ್ಡಿಯ ಮೂಲಕ ಅವರು ಗಳಿಸಿದ ಹಣ. ಉಳಿದ ₹70,59,828 ಮತ್ತೆ ಹೂಡಿಕೆ ಮಾಡಲಾಗುತ್ತದೆ. ಈ ವಾರ್ಷಿಕೀಕರಣ ಕನಿಷ್ಠ 40% ಇರುತ್ತದೆ. ಇದಕ್ಕೆ ಸರಾಸರಿ ವಾರ್ಷಿಕ ಬಡ್ಡಿ ದರ 8% ಎಂದು ಭಾವಿಸೋಣ. ಆಗ, ಮಾಸಿಕ ಪಿಂಚಣಿ ₹47,066 ರೂಪಾಯಿ ಸಿಗಲಿದೆ.
NPS ನ ಪ್ರಯೋಜನಗಳು
NPS ಎಂಬುದು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಾಗಿದೆ. ಈ ಯೋಜನೆಯಲ್ಲಿ ನೀವು ಹೂಡಿಕೆ ಮಾಡುವ ಹಣವನ್ನು ವೃತ್ತಿಪರ ನಿಧಿ ವ್ಯವಸ್ಥಾಪಕರು ನಿರ್ವಹಿಸುತ್ತಾರೆ. ಕೇಂದ್ರ ಸರ್ಕಾರವು ಅವರಿಗೆ ಈ ಜವಾಬ್ದಾರಿಯನ್ನು ವಹಿಸಿದೆ. ಆದ್ದರಿಂದ, NPS ಹೂಡಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಆದಾಗ್ಯೂ, ಈ ಯೋಜನೆಯಡಿಯಲ್ಲಿ ಹೂಡಿಕೆ ಮಾಡಿದ ಹಣಕ್ಕೆ ಎಷ್ಟು ಆದಾಯ ಬರುತ್ತದೆ ಎಂದು ನಿಖರವಾಗಿ ಹೇಳಲಾಗುವುದಿಲ್ಲ. ಆದಾಗ್ಯೂ, NPS ಹೂಡಿಕೆಯ ಮೇಲೆ ಆರಂಭದಿಂದಲೂ ಸರಾಸರಿ ವರ್ಷಕ್ಕೆ 10 ರಿಂದ 12 ಶೇಕಡಾ ವರೆಗೆ ಆದಾಯ ಬರುತ್ತಿದೆ.